ಬಾದ್ ಷಾ ಕಿಚ್ಚ ಸುದೀಪ್‌ಗೆ ಮ್ಯಾಕ್ಸ್‌ನಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರಿಗೆ ಸುದೀಪ್ ಕಾರ್ ಗಿಫ್ಟ್ ನೀಡಿದ್ದಾರೆ. ತಮ್ಮ ಆಪ್ತ ಸ್ನೇಹಿತರಿಗೆ, ನಿರ್ದೇಶಕರಿಗೆ, ನಟರಿಗೆ ಸುದೀಪ್ ಕಾರ್, ಜಾಕೆಟ್, ಕ್ರಿಕೆಟ್ ಬ್ಯಾಟ್, ವಾಚ್ ಮುಂತಾದ ವಸ್ತುಗಳನ್ನು ಗಿಫ್ಟ್ ನೀಡುತ್ತಲೇ ಇರುತ್ತಾರೆ. ಇದೀಗ ಮ್ಯಾಕ್ಸ್ ಸಿನಿಮಾ ನಿರ್ದೇಶಕರಿಗೆ ಕಾರ್ ಗಿಫ್ಟ್ ಕೊಟ್ಟಿದ್ದಾರೆ.
ವಿಜಯ್ ಕಾರ್ತಿಕೇಯ ಕಳೆದ ವರ್ಷ ಸುದೀಪ್ ಅವರ ಮ್ಯಾಕ್ಸ್ ಸಿನಿಮಾ ನಿರ್ದೇಶನ ಮಾಡಿದ್ದರು. ಇದೀಗ ಮಾರ್ಕ್ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕರ ಕೆಲಸವನ್ನ ಮೆಚ್ಚಿಕೊಂಡಿರುವ ನಟ ಕಿಚ್ಚ ಸುದೀಪ್ ಕಾರ್ ಗಿಫ್ಟ್ ಕೊಟ್ಟಿದ್ದಾರೆ. ಈ ಫೋಟೋಗಳನ್ನ ತಮ್ಮ ಜಾಲತಾಣದಲ್ಲಿ ನಿರ್ದೇಶಕ ವಿಜಯ್ ಕಾರ್ತಿಕೇಯ ಹಂಚಿಕೊಂದ್ದಾರೆ. ಕಿಚ್ಚ ಸುದೀಪ್ ಹಾಗೂ ಅವರ ಕುಟುಂಬಕ್ಕೆ ಧನ್ಯವಾದಗಳನ್ನ ಹೇಳಿದ್ದಾರೆ.
ವಿಜಯ್ ಕಾರ್ತಿಕೇಯ ಅವರಿಗೆ ಸ್ಕೋಡಾ ಕಂಪನಿಯ ಕಾರ್‌ನ್ನ ಸುದೀಪ್ ತಮ್ಮ ಜೆಪಿ ನಗರದ ನಿವಾಸದಲ್ಲಿ ಉಡುಗೊರೆ ನೀಡಿದ್ದು, ಗಿಫ್ಟ್ ಪಡೆದ ನಿರ್ದೇಶಕ ಖುಷಿ ಪಟ್ಟಿದ್ದಾರೆ. ಸದ್ಯ ಮಾರ್ಕ್ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡಿರುವ ನಿರ್ದೇಶಕ ವಿಜಯ್ ಕಾರ್ತಿಕೇಯ ಹಾಗೂ ಸುದೀಪ್ ಇದೇ ವರ್ಷ ಸಿನಿಮಾವನ್ನ ತೆರೆಗೆ ತರೋಕೆ ಅನೌನ್ಸ್ ಮಾಡಿದ್ದಾರೆ. ಇನ್ನು ಇದೇ ಸೆ.28ರಂದು ಬಿಗ್‌ಬಾಸ್ ಗ್ರ್ಯಾಂಡ್ ಓಪನಿಂಗ್ ನಡೆಯಲಿದ್ದು, ಕಿಚ್ಚ ಸುದೀಪ್ ಅದಕ್ಕಾಗಿ ತಯಾರಿ ನಡೆಸಿದ್ದಾರೆ.















