ಮನೆ ರಾಜ್ಯ ಬೆಂಗಳೂರಿನ ಎರಡು ಶಾಲೆಗಳ 31 ವಿದ್ಯಾರ್ಥಿಗಳಿಗೆ ಕೋವಿಡ್: ರಜೆ ಘೋಷಣೆ

ಬೆಂಗಳೂರಿನ ಎರಡು ಶಾಲೆಗಳ 31 ವಿದ್ಯಾರ್ಥಿಗಳಿಗೆ ಕೋವಿಡ್: ರಜೆ ಘೋಷಣೆ

0

ಬೆಂಗಳೂರು(Bengaluru):  ಬೆಂಗಳೂರಿನ ದಾಸರಹಳ್ಳಿ ವಲಯದ 2 ಶಾಲೆಗಳಲ್ಲಿ  ಸುಮಾರು 31 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದ್ದು, ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಪೀಣ್ಯ 2ನೇ ಹಂತದಲ್ಲಿರುವ ಖಾಸಗಿ ಶಾಲೆಯಲ್ಲಿ 6ನೇ ತರಗತಿಯ 10 ವಿದ್ಯಾರ್ಥಿಗಳಿಗೆ ಮತ್ತು ರಾಜಗೋಪಾಲನಗರದ ಖಾಸಗಿ ಶಾಲೆಯ 4 ಮತ್ತು 5ನೇ ತರಗತಿಯ ಒಟ್ಟು 21 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ.

ವಿದ್ಯಾರ್ಥಿಗಳಿಗೆ ಜೂನ್ 9ರಂದು ಸೋಂಕು ದೃಢಪಟ್ಟಿದೆ. ಮಕ್ಕಳಿಗೆ ಕೊರೊನಾ ತಗುಲಿರುವ ಕಾರಣ 2 ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.

ಈ ಕುರಿತು ಮಾತನಾಡಿರುವ ಬಿಬಿಎಂಪಿ ಅಧಿಕಾರಿಗಳು, ಸದ್ಯಕ್ಕೆ ಎಲ್ಲಾ ಮಕ್ಕಳಿಗೂ ಮತ್ತು ಶಾಲಾ ಸಿಬ್ಬಂದಿಗೆ ಕೊವಿಡ್ ಟೆಸ್ಟ್ ಮಾಡಲಾಗಿದೆ. ಸದ್ಯ ಶಾಲೆಗಳನ್ನ ಕಂಟೈನ್ಮೆಂಟ್ ಅಂತಾ ಘೋಷಣೆ ಮಾಡಲಾಗಿದೆ. ಪಾಸಿಟಿವ್ ಆಗಿರುವ ಮಕ್ಕಳು ಎಲ್ಲರೂ ಕೂಡ ಆರಾಮಾಗಿ ಇದ್ದಾರೆ, ಆತಂಕ ಪಡುವಂತಹದಿಲ್ಲ ಎಂದು  ಹೇಳಿದ್ದಾರೆ.