ಮನೆ ರಾಜಕೀಯ ಕೆಪಿಸಿಸಿ ಅಧ್ಯಕ್ಷರಿಗೆ ಸಿಎಂ ಸ್ಥಾನ ಸಿಗುವ ಸಾಧ್ಯತೆ ಹೆಚ್ಚು: ವಾಸು

ಕೆಪಿಸಿಸಿ ಅಧ್ಯಕ್ಷರಿಗೆ ಸಿಎಂ ಸ್ಥಾನ ಸಿಗುವ ಸಾಧ್ಯತೆ ಹೆಚ್ಚು: ವಾಸು

0

ಮೈಸೂರು(Mysuru): ಪಕ್ಷ ಅಧಿಕಾರಕ್ಕೆ ಬಂದಲ್ಲಿ, ಮುಖ್ಯಮಂತ್ರಿಯಾಗುವ ಸಾಧ್ಯತೆಯು ಕೆಪಿಸಿಸಿ ಅಧ್ಯಕ್ಷರಾಗಿದ್ದವರಿಗೇ ಹೆಚ್ಚಿರುತ್ತದೆ ಎಂದು ಕಾಂಗ್ರೆಸ್ ಮುಖಂಡ ವಾಸು ಇಲ್ಲಿ ಡಿ.ಕೆ.ಶಿವಕುಮಾರ್‌ ಪರ ಬ್ಯಾಟ್ ಬೀಸಿದರು.

ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ಈ ಸಂಪ್ರದಾಯ ಕಾಂಗ್ರೆಸ್‌’ನಲ್ಲಿ ಹಿಂದಿನಿಂದಲೂ ಇದೆ. ಕಳೆದ ಬಾರಿಯ ಚುನಾವಣೆಯಲ್ಲಿ ಡಾ.ಜಿ.ಪರಮೇಶ್ವರ್‌ ಸೋಲದಿದ್ದರೆ ಮುಖ್ಯಮಂತ್ರಿ ಆಗುತ್ತಿದ್ದರು. ಪಕ್ಷಕ್ಕೆ ಬಹುಮತ ಬರಬೇಕು, ಶಾಸಕಾಂಗ ಪಕ್ಷದ ಸಭೆಯಲ್ಲಿ ಬಹುಮತ ಪಡೆದವರು ಹಾಗೂ ಹೈಕಮಾಂಡ್ ಆಯ್ಕೆ ಮಾಡಿದವರು ಸಿಎಂ ಸ್ಥಾನಕ್ಕೇರುತ್ತಾರೆ ಎಂದರು.

ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಹರೀಶ್‌ ಗೌಡ ಬೆಂಬಲಿಸುವಂತೆ ಶಾಸಕ ಜಮೀರ್‌ ಅಹಮದ್ ಖಾನ್ ಕಾರ್ಯಕ್ರಮವೊಂದರಲ್ಲಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ವಾಸು, ಜಮೀರ್ ಎಐಸಿಸಿಯಾ ಅಥವಾ ಕೆಪಿಸಿಸಿನಾ? ಎಂದು ಕೇಳಿದರು.

ನನಗೂ ಚಾಮರಾಜಪೇಟೆಯಲ್ಲಿ ನೆಂಟರಿದ್ದಾರೆ. ಅಲ್ಲಿದ್ದವನೂ ಹೌದು. ಈ ಕಾರಣದಿಂದ ಅಲ್ಲಿ ಸ್ಪರ್ಧಿಸುವುದಾಗಿ ಹೇಳಿದರೆ ತಲೆ ತಲೆಕೆಟ್ಟಿದೆ ಎನ್ನುತ್ತಾರೆ. ಜಮೀರ್‌ ನನ್ನಂತೆಯೇ ಕಾಂಗ್ರೆಸ್ ಸದಸ್ಯ. ಅವರಿಗೂ ಚಾಮರಾಜ ಕ್ಷೇತ್ರಕ್ಕೂ ಏನು ಸಂಬಂಧ? ಈ ಚುನಾವಣೆಯಲ್ಲಿ ಟಿಕೆಟ್ ಸಿಗುವುದಿಲ್ಲ ಎಂಬ ಅನುಮಾನವೇನೂ ನನಗಿಲ್ಲ ಎಂದು ಆಕಾಂಕ್ಷಿಯೂ ಆಗಿರುವ ವಾಸು ಹೇಳಿದರು.

ಚಾಮರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಸೊರಗಿದೆ. ಜೆಡಿಎಸ್ ಪ್ರಾಬಲ್ಯವಿದೆ. ನಮ್ಮ ದೌರ್ಬಲ್ಯ ಬಳಸಿಕೊಂಡು ಬಿಜೆಪಿ ಗೆಲ್ಲುತ್ತಿದೆ‌. ಇದನ್ನು ಅರ್ಥ ಮಾಡಿಕೊಂಡು ಚುನಾವಣೆ ಎದುರಿಸಬೇಕು ಎಂದು ಸಲಹೆ ನೀಡಿದರು.