ಮನೆ ರಾಜ್ಯ ಮೈಸೂರು: ಆದಿತ್ಯ ಆಸ್ಪತ್ರೆ ಬೀಗ ಮುದ್ರೆಗೊಳಿಸಲು ಕೆಪಿಎಂಇ ಆದೇಶ

ಮೈಸೂರು: ಆದಿತ್ಯ ಆಸ್ಪತ್ರೆ ಬೀಗ ಮುದ್ರೆಗೊಳಿಸಲು ಕೆಪಿಎಂಇ ಆದೇಶ

0

ಮೈಸೂರು: ಆದಿತ್ಯ ಆಸ್ಪತ್ರೆಯ ಅಧಿಕಾರಿ ಡಾ.ಚಂದ್ರಶೇಖರ್ ಕೆ.ಪಿ.ಎಂ.ಇ ಕಾಯ್ದೆಯ ಕಲಂ 15(5) ಹಾಗೂ 19(1) ಉಲ್ಲಂಘಿಸಿರುವುದರಿಂದ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕೆಂದು ಕೆಪಿಎಂಇ ಕುಂದುಕೊರತೆ ನಿವಾರಣಾ  ಪ್ರಾಧಿಕಾರದ ಅಧ್ಯಕ್ಷರು ಆದೇಶಿಸಿದ್ದಾರೆ.

ಅಲ್ಲದೇ ಡಾ.ಚಂದ್ರಶೇಖರ್’ಗೆ ನೋಟಿಸ್ ನೀಡಿ, ಅಲ್ಲಿನ ರೋಗಿಗಳನ್ನು ಸ್ಥಳಾಂತರಿಸಲು ಗಡುವು ನೀಡಿ ಆಸ್ಪತ್ರೆಯನ್ನು ಬೀಗಮುದ್ರೆಗೊಳಿಬೇಕೆಂದು ಆದೇಶದಲ್ಲಿ ಸೂಚಿಸಿದ್ದಾರೆ.

ರವಿ ಗೌಡ ಎಂಬುವವರು ಬೆಂಗಳೂರಿನ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸೇವೆಗಳು, ಜಾಗೃತ ಕೋಶ ಮುಖ್ಯ ಜಾಗೃತಾಧಿಕಾರಿಗಳಿಗೆ  ಆದಿತ್ಯ  ಆಸ್ಪತ್ರೆ ಅಧಿಕಾರಿ ವಿರುದ್ಧ ನೀಡಿದ ದೂರಿನ ಕುರಿತಾದ ತನಿಖಾ ವರದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಸಹ ನಿರ್ದೇಶಕರು ಸಲ್ಲಿಸಿದ್ದಾರೆ.

ತನಿಖಾ ವರದಿಯಲ್ಲಿ 10 ದೂರಿನ ಅಂಶಗಳನ್ನು ಉಲ್ಲೇಖಿಸಿ ಅದರಲ್ಲಿ ತನಿಖೆಯಲ್ಲಿ ಗುರುತಿಸಿದ ಅಂಶಗಳು ಮತ್ತು ದಾಖಲೆಗಳನ್ವಯ  ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಅದರಲ್ಲಿ 5 ಅಂಶಗಳು ಆದಿತ್ಯ ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ವೈದ್ಯರಾಗಿರುವ ಡಾ.ಚಂದ್ರಶೇಖರ್ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ವಿಭಾಗೀಯ ಸಹ ನಿರ್ದೇಶಕರ ಕಚೇರಿಯ ಆಡಳಿತಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಹಿನ್ನಲೆಯಲ್ಲಿ ಆದಿತ್ಯ ಆಸ್ಪತ್ರೆಯ ಅಧಿಕಾರಿ ಡಾ.ಚಂದ್ರಶೇಖರ್ ವಿರುದ್ಧ ದೂರು ದಾಖಲಿಸಿ, ಆಸ್ಪತ್ರೆಯನ್ನು ಬೀಗಮುದ್ರೆಗೊಳಿಸಲು ಆದೇಶ ನೀಡಲಾಗಿದೆ.

ಹಿಂದಿನ ಲೇಖನಅನಧಿಕೃತ ಕ್ಲಿನಿಕ್ ಬಂದ್ ಮಾಡಿದ ಆರೋಗ್ಯ ಇಲಾಖೆ
ಮುಂದಿನ ಲೇಖನಬೆಂಗಳೂರು: ಉದ್ಯಮಿಗಳ ಮನೆ, ಕಚೇರಿ ಮೇಲೆ ಐಟಿ ದಾಳಿ