ಮನೆ ಜ್ಯೋತಿಷ್ಯ ಕೃಷಿ ಕರ್ಮ ಮುಹೂರ್ತ ವಿಚಾರ

ಕೃಷಿ ಕರ್ಮ ಮುಹೂರ್ತ ವಿಚಾರ

0

 ಬಿತ್ತಲು ಬೇಕಾಗುವ ಬೀಜ ಸಂಗ್ರಹಕ್ಕೆ :

Join Our Whatsapp Group

 ಶ್ಲೋಕ  :

 ಹಸ್ತತ್ರಯೇ ಪುನರ್ವಸ್ವೊ |ರೋಹಿಣ್ಯಾಂ ಶ್ರವಣದ್ವಯೇ||

 ಸ್ಥಿರಲಗ್ನೆ ಶುಭೇವಾರೆ |ವಿಚಂದ್ರೇ ಬೀಜ ಸಂಗ್ರಹಃ||

 *ಅರ್ಥ : ಹಸ್ತ,ಚಿತ್ತ,ಸ್ವಾತಿ,ಪುನರ್ವಸು, ರೋಹಿಣಿ,ಶ್ರಾವಣ,ಧನಿಷ್ಟ ಈ ಏಳು ನಕ್ಷತ್ರಗಳಲ್ಲಿಯೂ ಸ್ಥಿರ ಲಗ್ನಗಳಾದ  ವೃಷಭ, ಸಿಂಹ, ವೃಶ್ಚಿಕ,ಕುಂಭ ಲಗ್ನಗಳಿದ್ದ ಸಮಯದಲ್ಲೂ, ಬುಧ ಗುರು ಶುಕ್ರವಾರಗಳನ್ನು ಸಾಧಿಸಿ ನೋಡಿ ಒಳ್ಳೆಯ ಬೀಜವನ್ನು ಸಂಗ್ರಹಿಸಿಡ ತಕ್ಕದ್ದು.

 ಪ್ರಥಮ ರಂಟೆ (ನೇಗಿಲು) ಹೊಡುವುದು :

 ಶ್ಲೋಕ  :

 ಪುನರ್ವಸು ದ್ವಯೆ ಮೂಲೆತ್ರ್ಯುತ್ತರೆ ರೋಹಿಣಿದ್ವಯೆ

 ಹಸ್ತತ್ರಯೆ ಅನುರಾಧಾಯಾಂ ರೆವತ್ಯಾಂ ಶ್ರವಣತ್ರಯೆ||

 ತಿಥೌ ವಾರೆ ಅಶ್ಚಿನ್ಯಾಂ ಶುಭೆ ಹರಿಪ್ರವಹಣಂ ಶುಭಂ ||

ಅರ್ಥ : ಪುನರ್ವಸು, ಪುಷ್ಯ, ಮೂಲ ಉತ್ತರಾ, ಉತ್ತರಾಷಾಡ  ಉತ್ತರಾ, ಭದ್ರಪದ, ರೋಹಿಣಿ ಮೃಗಶಿರ, ಹಸ್ತ,ಚಿತ್ತ, ಸ್ವಾತಿ, ಅನುರಾಧಾ, ರೇವತಿ, ಶ್ರಾವಣಾ, ದನಿಷ್ಠಾ ಶತತಾರ ಹಾಗೂ ಅಶ್ವಿನಿ ನಕ್ಷತ್ರಗಳಿದ್ದ ದಿವಸ ಶುಭವು. ಆದರೆ ಕೆಲವು ಜ್ಯೋತಿಷ್ಯ ಪಂಡಿತರು ಹುಬ್ಬ, ಪೂರ್ವಾಷಾಢ, ಪೂರ್ವ ಭಾದ್ರ,ಭರಣಿ, ಕೃತಿಕ, ಆರಿದ್ರ, ಆಶ್ಲೇಷ ಈ ಏಳು ನಕ್ಷತ್ರಗಳನ್ನು ಬಿಟ್ಟು ಉಳಿದ 20 ನಕ್ಷತ್ರಗಳಲ್ಲಿ ಬುಧ ಗುರು ಶುಕ್ರ ಮಂಗಳವಾರಗಳಲ್ಲಿಯೂ ವಿಷಮ ತಿಥಿಗಳಲ್ಲಿಯೂ ಶುಭಕರವು ಎಂದು ಹೇಳಿದ್ದಾರೆ.

 ಗಮನದಲ್ಲಿರಲಿ  : ಪ್ರಥಮ ರಂಟೆ ಹೂಡಲು ಪ್ರಾರಂಭದ ಮೊದಲಿನ ದಿವಸ ಭೂಮಿಯನ್ನೂ, ನೇಗಿಲುವನ್ನೂ, ಪೂಜಿಸಿ ಉತ್ತರಾಭಿಮುಖವಾಗಿ ಮೂರು ಸಾಲು ರಂಟೆಯನ್ನು ಹೊಡೆದು ಆ ದಿನ ಹಾಗೆಯೇ ಬರಬೇಕು.ಎರಡನೇ ದಿನದಿಂದ ರಂಟೆ ಹೊಡೆಯುವ ಕೆಲಸವನ್ನು ಪೂರೈಸಿಕೊಳ್ಳತಕ್ಕದ್ದು. ಮಂಗಳನ್ನು ಭೂಮಿ ಪುತ್ರನಾದುದರಿಂದ ಮಂಗಳವಾರವೇ ಪ್ರಥಮ ರಂಟೆ ಹೊಡೆಯುವುದನ್ನು ಪ್ರಾರಂಭ ಮಾಡಬೇಕು. ಮಂಗಳವಾರವು ಬಾಕಿ ವಾರಗಳಿಗಿಂತ ಶ್ರೇಷ್ಠವು. ಪ್ರಾರಂಭದ ಮೊದಲು ದಿನ ಒಕ್ಕಲಿಗನ್ನು ಸ್ನಾನ ಮಾಡಿ ಭಸ್ಮ ಧಾರಣ ಮಾಡಿಕೊಂಡು ತನ್ನ ಮನೆ ದೇವರನ್ನು ಭಕ್ತಿಯಿಂದ ಪೂಜಿಸಿ,ಪ್ರಾರ್ಥಿಸಿ, ಹೊಲದಲ್ಲಿ ಭೂಮಿಯನ್ನು ನೇಗಿಲವನ್ನೂ ಪೂಜಿಸಿ ಅದರಂತೆ ಬಸವಣ್ಣನನ್ನೂ ಮೈ ತೊಳೆದು ಪೂಜಿಸಿ,ಭೂಮಿಗೆ ಬಸವಣ್ಣಗಳಿಗೆ ನಮಸ್ಕರಿಸಿ ರಂಟೆ ಹೊಡೆಯಲು ಪ್ರಾರಂಭಿಸಬೇಕು ಹೀಗೆ ಭಕ್ತಿಯಿಂದ ಪ್ರಸನ್ನತೆಯಿಂದ ಪವಿತ್ರ ಮನದಿಂದ ಶುಚಿಭೂತವಾಗಿ ಕಾರ್ಯರಂಭ ಮಾಡಿದರೆ ಪೈರುಗಳು ಚೆನ್ನಾಗಿ ಬೆಳೆದು ಅಭಿವೃದ್ಧಿ ಹೊಂದುವವು.