ಮನೆ ಉದ್ಯೋಗ KSRP, IRB ವಿಶೇಷ ಮೀಸಲು ಸಬ್’ಇನ್ಸ್’ಪೆಕ್ಟರ್ ಲಿಖಿತ ಪರೀಕ್ಷೆ ಕೀ ಉತ್ತರಗಳು ಪ್ರಕಟ

KSRP, IRB ವಿಶೇಷ ಮೀಸಲು ಸಬ್’ಇನ್ಸ್’ಪೆಕ್ಟರ್ ಲಿಖಿತ ಪರೀಕ್ಷೆ ಕೀ ಉತ್ತರಗಳು ಪ್ರಕಟ

0

ಕರ್ನಾಟಕ ಪೊಲೀಸ್ ಇಲಾಖೆಯು ಇದೀಗ ವಿಶೇಷ ಮೀಸಲು ಸಬ್ ಇನ್ಸ್ಪೆಕ್ಟರ್ (ಕೆಎಸ್’ಆರ್’ಬಿ ಮತ್ತು ಐಆರ್’ಬಿ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಲಿಖಿತ ಪರೀಕ್ಷೆಯ ಕೀ ಉತ್ತರಗಳನ್ನು ಬಿಡುಗಡೆ ಮಾಡಿದೆ. ಈ ಪರೀಕ್ಷೆ ಬರೆದ ಅಭ್ಯರ್ಥಿಗಳು ಕೀ ಉತ್ತರಗಳನ್ನು ಇಲಾಖೆ ಅಧಿಕೃತ ವೆಬ್’ಸೈಟ್’ನಲ್ಲಿ ಚೆಕ್ ಮಾಡಿಕೊಳ್ಳಬಹುದು.

ಕೆಎಸ್ಪಿ’ಯು ದಿನಾಂಕ 18-12-2022 ರಂದು ಆಆರ್’ಎಸ್’ಐ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಿತ್ತು. ಇದೀಗ ಸದರಿ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಬಿಡುಗಡೆ ಮಾಡಿದೆ. ಎ, ಬಿ, ಸಿ, ಡಿ, ಇ ಸೀರೀಸ್ನ ಪತ್ರಿಕೆಗಳಿಗೆ ಪ್ರತ್ಯೇಕವಾಗಿ ಕೀ ಉತ್ತರಗಳನ್ನು ಬಿಡುಗಡೆ ಮಾಡಿದೆ.

ಇಲಾಖೆ ಪ್ರಸ್ತುತ ಪ್ರಕಟಿಸಿರುವ ಕೀ ಉತ್ತರಗಳಿಗೆ ಯಾವುದೇ ಆಕ್ಷೇಪಣೆ ಇದ್ದಲ್ಲಿ, ಅಗತ್ಯ ದಾಖಲೆಗಳೊಂದಿಗೆ ಅಂಚೆ ಮೂಲಕ ಅಥವಾ ಇ-ಮೇಲ್ ಮೂಲಕ ದಿನಾಂಕ 30-12-2022 ರೊಳಗೆ ಸಲ್ಲಿಸಲು ಸೂಚಿಸಲಾಗಿದೆ. ಆಕ್ಷೇಪಣೆ ಅರ್ಜಿ ನಮೂನೆಯನ್ನು ಇಲಾಖಾ ವೆಬ್ಸೈಟ್ನಲ್ಲಿ ನೀಡಿದ್ದು, ಡೌನ್ಲೋಡ್ ಮಾಡಿ, ಪ್ರಿಂಟ್ ತೆಗೆದುಕೊಂಡು ಭರ್ತಿ ಮಾಡಿದ ಅರ್ಜಿ ಸಲ್ಲಿಸಬೇಕು.

ಅಂಚೆ/ ನೇರವಾಗಿ ಆಕ್ಷೇಪಣೆ ಅರ್ಜಿ ಸಲ್ಲಿಸಲು ವಿಳಾಸ – ಡೈರೆಕ್ಟರ್ ಜೆನೆರಲ್ ಆಫ್ ಪೊಲೀಸ್, ನೇಮಕಾತಿ, ಕಾರ್ಲ್ಟನ್ ಹೌಸ್, ಪ್ಯಾಲೇಸ್ ರೋಡ್, ಬೆಂಗಳೂರು- 560001.

ಇ-ಮೇಲ್ ವಿಳಾಸ : ssrnt@ksp.gov.in.

ಕೀ ಉತ್ತರಗಳನ್ನು ಚೆಕ್ ಮಾಡಲು ಹಾಗೂ ಆಕ್ಷೇಪಣೆ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಲು ಡೈರೆಕ್ಟ್ ಲಿಂಕ್ ಅನ್ನು ಕೆಳಗಿನಂತೆ ನೀಡಲಾಗಿದೆ.

KSRP / IRB RSI Written Exam Key Answer

Key Answer Objection Format – Click Here

ವಿಶೇಷ ಮೀಸಲು ಸಬ್ ಇನ್ಸ್ಪೆಕ್ಟರ್ (ಕೆಎಸ್’ಆರ್’ಬಿ ಮತ್ತು ಐಆರ್’ಬಿ) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಅಧಿಕೃತ ವೆಬ್ಸೈಟ್ ವಿಳಾಸ : https://srsi21.ksp-recruitment.in/

ಹಿಂದಿನ ಲೇಖನನೀವು ಮಾಡೋ ಕೆಲಸದಲ್ಲಿ ಸಕ್ಸಸ್ ಸಿಗಬೇಕು ಎಂದರೆ ಈ ಟಿಪ್ಸ್ ಪಾಲಿಸಿ
ಮುಂದಿನ ಲೇಖನದೇಶದಲ್ಲಿ ಓಮೈಕ್ರಾನ್‌‘ನ ಉಪತಳಿ ಬಿಎಫ್‌.7 ಸೋಂಕಿನ ನಾಲ್ಕು ಪ್ರಕರಣ ಪತ್ತೆ