ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕು, ಕುಂದೂರು.
ಭಜೇ ಸಮೀರನಂದನಂ ಸುಭಕ್ತಚಿತ್ತರಂಜನಂ ದಿನೇಶರೂಪಭಕ್ಷಕಂ
ಸಮಸ್ತಭಕ್ತರಕ್ಷಕಂ ? ಸುಕಂಠಕಾರ್ಯಸಾಧಕಂ ವಿಪಕ್ಷಪಕ್ಷಬಾಧಕಂ
ಸಮುದ್ರಪಾರಗಾಮಿನಂ ನಮಾಮಿ ಸಿದ್ಧಕಾಮಿ
ಸಾವಿರ ವರ್ಷಗಳ ಇತಿಹಾಸ ವುಳ್ಳ ಶ್ರೀ ಆಂಜನೇಯಸ್ವಾಮಿಯ ಈ ಕ್ಷೇತ್ರದಲ್ಲಿ ಬೃಹದಾಕಾರದ ಶ್ರೀ ಆಂಜನೇಯನನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ. ಪಾಲ್ಗುಣ ಮಾಸದ ದಶಮಿಯಂದು ಇಲ್ಲಿ ಬ್ರಹ್ಮರಥೋತ್ಸವವನ್ನು ಅಂದರೆ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಏರ್ಪಡಿಸುತ್ತಾರೆ
ಹಿಂದಿನ ದಿನ ಶ್ರೀ ಆಂಜನೇಯನನ್ನು ಗಜದ ಮೇಲೆ ಕೂಡಿಸಿಕೊಂಡು ಊರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಲ್ಲಿಸುತ್ತಾರೆ. ಮಾರಯ ದಿನ ಸ್ವಾಮಿಗೆ ವಿಶೇಷವಾದ ಅಭಿಷೇಕ ಅಲಂಕಾರಗಳಿಂದ ಪೂಜೆ ಸಲ್ಲಿಸುತ್ತಾರೆ ಭಕ್ತಾದಿಗಳು ಉಪವಾಸವಿದ್ದು ಮುಳ್ಳೊತ್ಸವ ಸೇವೆ ಸಲ್ಲಿಸಿ ಅದಕ್ಕೆ ಪೂರೈಸುತ್ತಾರೆ.
ಈ ಕ್ಷೇತ್ರದಲ್ಲಿ ಸಾವಿರ ವರ್ಷದ ಅರಳಿದ ಮರವಿದೆ. ಉಮೇಶ್ ಎಂಬುವರು ಸಂಕಲ್ಪದಿಂದ ಇಲ್ಲಿ ಶ್ರೀ ರಾಮ ದೇವರು ಸೀತಾದೇವಿ ಮತ್ತು ಲಕ್ಷ್ಮಣ ಆಂಜನೇಯರ ಸಮೇತ ಪ್ರತಿಜ್ಞೆ ಮಾಡಿಸಿದ್ದಾರೆ
ಶ್ರೀ ಆಂಜನೇಯರ ಪಾದರಕ್ಷೆಗಳು ಇಲ್ಲಿರುವುದು ವಿಶೇಷ ಆ ಪಾದರಕ್ಷೆಗಳನ್ನು ಆಂಜನೇಯ ಸ್ವಾಮಿಯು ಹಾಕಿಕೊಂಡು ರಾತ್ರಿ ದೇವಾಲಯದ ಪ್ರದಕ್ಷಿಣೆ ಮಾಡುತ್ತಾರೆಂದು ಹಿಂದಿನಿಂದ ಪ್ರತೀತಿ
ಮತ್ತೊಂದು ವಿಶೇಷವೇನೆಂದರೆ ಇಲ್ಲಿ ಒಂದು ಪುಟ್ಟ ಆಂಜನೇಯ ಮೂರ್ತಿ ಇದೆ. ಆಂಜನೇಯನಿಗೆ ಬಾಳೆಹಣ್ಣು ಸವರಿದರೆ ಗಂಟಲು ರೋಗ ಅಥವಾ ಗಂಟಲು ರೋಗ ಅಥವಾ ಗಂಟಲು ನೋವುಗಳಿದ್ದರೆ ಗುಣವಾಗುತ್ತದೆ ಎಂಬ ಪ್ರತೀತಿ ಇದೆ.ಮತ್ತು ಈ ದೇವಾಲಯದಲ್ಲಿ ಸುಂದರವಾದ ರಾಜಗೋಪುರವಿದೆ.