ದೇವನಹಳ್ಳಿ: ಬಾಳು ಕೊಡುವುದಾಗಿ ನಂಬಿಸಿ ಮಹಿಳೆಯಿಂದ ಲಕ್ಷ ಲಕ್ಷ ರೂ. ಹಣ ಪಡೆದು ವಂಚನೆ ಮಾಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ.
ಮಹಿಳೆಗೆ ತವರು ಮನೆಯಿಂದ ಬಂದಿದ್ದ 10 ಲಕ್ಷ ರೂ. ಹಣ ಹಾಗೂ ಒಡವೆಗಳನ್ನ ಪಡೆದಿದ್ದು, ಜೊತೆಗೆ ಮಹಿಳೆಗೆ ಮನೆ ಕಟ್ಟಿಕೊಡುವುದಾಗಿ ನಂಬಿಸಿ ಹಣ ಪಡೆದು ಬೀದಿಗೆ ತಳ್ಳಿದ ಆರೋಪ ಮಾಡಲಾಗಿದೆ.
ಇದೀಗ ವಂಚಿಸಿರುವ ಪುರುಷೋತ್ತಮ್ ಎಂಬ ವ್ಯಕ್ತಿ ಮನೆ ಮುಂದೆ ತಮಟೆ ಹೊಡೆಯುವ ಮೂಲಕ ಮಹಿಳೆ ಕುಟುಂಬಸ್ಥರಿಂದ ಧರಣಿ ಮಾಡಲಾಗುತ್ತಿದೆ.
ವಂಚನೆ ಮಾಡಿದ ಪುರುಷೊತ್ತಮ್ ನ ವಿರುದ್ದ ವಿಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನ್ಯಾಯಕ್ಕಾಗಿ ಮಹಿಳೆ ಒತ್ತಾಯಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಗಂಡ ಹೆಂಡತಿಯಂತೆ ಒಂದೇ ಮನೆಯಲ್ಲಿದ್ದರು. ಕುಟುಂಬಸ್ಥರ ಜೊತೆ ಆಗಮಿಸಿ ವಂಚನೆ ಮಾಡಿದ್ದಾನೆ ಅಂತ ನೊಂದ ಮಹಿಳೆ ಧರಣಿ ನಡೆಸಿದ್ದಾರೆ.
Saval TV on YouTube