ಮನೆ ರಾಷ್ಟ್ರೀಯ ನಾಗಾಲ್ಯಾಂಡ್ ​ನಲ್ಲಿ ಭೂಕುಸಿತ: ಕಾರಿನ ಮೇಲೆ ಉರುಳಿ ಬಿದ್ದ ಬೃಹತ್‌ ಬಂಡೆ- ಇಬ್ಬರ ಸಾವು

ನಾಗಾಲ್ಯಾಂಡ್ ​ನಲ್ಲಿ ಭೂಕುಸಿತ: ಕಾರಿನ ಮೇಲೆ ಉರುಳಿ ಬಿದ್ದ ಬೃಹತ್‌ ಬಂಡೆ- ಇಬ್ಬರ ಸಾವು

0

ಕೊಹಿಮಾ (ನಾಗಾಲ್ಯಾಂಡ್) : ನಾಗಾಲ್ಯಾಂಡ್ ​ನಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಗುಡ್ಡದಿಂದ ಬಂಡೆಗಳು ಜಾರಿ ಕಾರುಗಳ ಮೇಲೆ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮೂವರಿಗೆ ಗಂಭೀರ ಗಾಯಗಳಾಗಿವೆ.

Join Our Whatsapp Group

ವಿಪರೀತ ಮಳೆಯಾಗುತ್ತಿರುವುದರಿಂದ ಕೊಹಿಮಾ-ದಿಮಾಪುರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದೆ. ಇದರಿಂದ ಕೆಲ ಸಮಯ ವಾಹನಗಳು ಚುಮೌಕೆಡಿಮಾದ ಪೊಲೀಸ್ ಚೆಕ್‌ ಪೋಸ್ಟ್ ಬಳಿ ನಿಂತಿದೆ. ಈ ವೇಳೆ ಏಕಾಏಕಿ ಬೃಹತ್‌ ಬಂಡೆಯೊಂದು ಕಾರಿನ ಮೇಲೆಯ ಉರುಳಿ ಬಿದ್ದಿದೆ. ಪರಿಣಾಮ ಮೂರು ಕಾರುಗಳು ಪಲ್ಟಿಯಾಗಿದೆ.

ಕಾರಿನ ಮೇಲೆ ಬಂಡೆ ಉರುಳಿ ಬಿದ್ದ ಭೀಕರ ಅಪಘಾತದ ದೃಶ್ಯ ಅಲ್ಲೇ ನಿಂತಿದ್ದ ವಾಹನದ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್‌ ಆಗಿದೆ.

ಅಪಘಾತದ ಬಗ್ಗೆ ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ಸಂತಾಪ ವ್ಯಕ್ತಪಡಿಸಿದ್ದಾರೆ.

ಮೃತರ ಸಂಬಂಧಿಕರಿಗೆ 4-4 ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗುವುದು ಮತ್ತು ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ ನೆರವು ಮತ್ತು ಸಹಾಯವನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ.

ಹಿಂದಿನ ಲೇಖನಮೈಸೂರು: ಖಾಸಗಿ ಫೈನಾನ್ಸ್ ಕಂಪನಿಯ ಬಿಲ್ ಕಲೆಕ್ಟರ್ ಶವ ಅನುಮಾನಸ್ಪದ ರೀತಿಯಲ್ಲಿ ಪತ್ತೆ
ಮುಂದಿನ ಲೇಖನ‘ಕಮೀಷನ್ ಕಾಂಗ್ರೆಸ್ʼನ’ ಹೊಸ ವರಸೆ ಮತ್ತು ಹೊಸ ಕಸವರಿಕೆ: ಕಾಂಗ್ರೆಸ್ ವಿರುದ್ಧ ಜೆಡಿಎಸ್ ಕಿಡಿ