ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟವಾದ ನಂದಿನಿ ಬ್ರಾಂಡ್ನ ಹೊಸ ಉತ್ಪನ್ನಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಂದಿನ ಮೊಸರು, ನಂದಿನಿ ಎಮ್ಮೆ ಹಾಲು ಮತ್ತಿತರ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ನಂದಿನಿ ಉತ್ಪನ್ನಗಳ ನೂತನ ಬ್ರಾಂಡ್ ರಾಯಭಾರಿ ಶಿವರಾಜ್ ಕುಮಾರ್ ಅವರು ಜಾಹಿರಾತು ಬಿಡುಗಡೆಗೊಳಿಸಿದರು. ಸಚಿವ ಮಧು ಬಂಗಾರಪ್ಪ, ಗೀತಾ ಶಿವರಾಜ್ ಕುಮಾರ್, ಕೆ.ಎಂ.ಎಫ್ ಅಧ್ಯಕ್ಷ ಭೀಮಾ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.
ಅಂದಹಾಗೆ ಡಾ.ರಾಜ್ ಕುಟುಂಬ ಹಾಗೂ ಕೆಎಂಎಫ್ಗೆ ಹತ್ತಿರದ ನಂಟಿದೆ. 1996ರಲ್ಲಿ ಡಾ.ರಾಜ್ ಕುಮಾರ್ ಅವರು ನಂದಿನಿ ಉತ್ಪನ್ನಗಳಿಗೆ ಉಚಿತವಾಗಿಯೇ ರಾಯಭಾರಿಯಾಗಲು ಒಪ್ಪಿಕೊಂಡಿದ್ದರು. ಅದು ಅವರ ಮೊದಲ ಜಾಹೀರಾತು ಆಗಿತ್ತು. ಅವರ ನಂತರ 2009ರಲ್ಲಿ ಪುನೀತ್ ರಾಜಕುಮಾರ್ ಆಯ್ಕೆಯಾಗಿದ್ದರು. ಇದೀಗ ಶಿವರಾಜ್ ಕುಮಾರ್ ಅವರು ರಾಯಭಾರಿಯಾಗಿ ನೇಮಕವಾಗಿದ್ದಾರೆ.
Saval TV on YouTube