ವಿಜಯನಗರ: ವ್ಯಕ್ತಿಯೊಬ್ಬ ವಕೀಲರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಕೋರ್ಟ್‌ನಲ್ಲಿ ನಡೆದಿದೆ.
ವಕೀಲ ಸ್ವರೂಪಾನಂದ ನಾಯಕ್ ಮೇಲೆ ಹಲ್ಲೆ ಮಾಡಲಾಗಿದೆ. ಮೋತಿಕಲ್ ತಾಂಡಾದ ಹನುಮಾನಾಯಕ್ ಎಂಬಾತನಿಂದ ಹಲ್ಲೆ ಯತ್ನ ನಡೆದಿದೆ. ವಕೀಲ ಸ್ವರೂಪಾನಂದ ನಾಯಕ್‌ಗೆ ಸಣ್ಣಪುಟ್ಟ ಗಾಯವಾಗಿದೆ. ಹಲ್ಲೆ ಘಟನೆ ಖಂಡಿಸಿ ವಕೀಲರಿಂದ ಪ್ರತಿಭಟನೆ ನಡೆಸಲಾಗಿದೆ.
ಕೂಡ್ಲಿಗಿ ಜೆಎಂಎಫ್ಸಿ ನ್ಯಾಯಾಲಯದ ಆವರಣದಲ್ಲಿ ನ್ಯಾಯವಾದಿ ಸ್ವರೂಪಾನಂದ ನಾಯ್ಕ್ ಎಂಬವರಿಗೆ ಚಾಕು ಇರಿಯಲು ಯತ್ನಿಸಲಾಗಿದೆ.
ನ್ಯಾಯಾಲಯದ ಆವರಣದಲ್ಲಿ ವಕೀಲರ ಮೇಲೆ ಹಲ್ಲೆ ಹಿನ್ನಲೆ ಆರೋಪಿ ಹನುಮಾನಾಯ್ಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಚಾಕು ಇರಿಯಲು ಯತ್ನಿಸಿದ ಆರೋಪಿ ವಿರುದ್ದ ಕಲಂ 452, 504, 506(2), 307 ರೀತ್ಯ ಪ್ರಕರಣ ದಾಖಲು ಮಾಡಲಾಗಿದೆ. ಪ್ರಕರಣ ಬಗ್ಗೆ ಕೂಡ್ಲಿಗಿ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆಗೆ ಎಸ್ಪಿ ಆದೇಶ ನೀಡಿದ್ದಾರೆ. ವಿಜಯನಗರ ಜಿಲ್ಲೆ ಎಸ್ಪಿ ಡಾ.ಕೆ ಅರುಣಕುಮಾರ್ ಆದೇಶ ನೀಡಿದ್ದಾರೆ.














