ಮನೆ ಕಾನೂನು ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಗೆ ವಕೀಲರ ಪರಿಷತ್ತು, ವಕೀಲರ ಸಂಘಗಳಿಗೆ ಕರೆ ನೀಡಿದ ಬಿಸಿಐ

ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಗೆ ವಕೀಲರ ಪರಿಷತ್ತು, ವಕೀಲರ ಸಂಘಗಳಿಗೆ ಕರೆ ನೀಡಿದ ಬಿಸಿಐ

0

ದೇಶದ ಎಲ್ಲಾ ರಾಜ್ಯಗಳ ವಕೀಲರ ಪರಿಷತ್ತುಗಳು ಹಾಗೂ ವಕೀಲರ ಸಂಘಗಳಿಗೆ ಪತ್ರ ಬರೆದಿರುವ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಜೂನ್ 21ರಂದು ಯೋಗ ಶಿಬಿರಗಳನ್ನು ಆಯೋಜಿಸುವ ಮೂಲಕ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲು ಕರೆ ನೀಡಿದೆ.

ನ್ಯಾಯಿಕ ಸಮುದಾಯವು ಯೋಗ ದಿನ ಆಚರಿಸುವಂತೆ ಕಾನೂನು ಸಚಿವ ಕಿರಣ್ ರಿಜಿಜು ಬಿಸಿಐಗೆ ಪತ್ರ ಬರೆದಿದ್ದರು. ಅದರಂತೆ ಬಿಸಿಐ ಯೋಗ ದಿನ ಆಚರಿಸಲು ನ್ಯಾಯಿಕ ಸಮುದಾಯವನ್ನು ಕೋರಿದೆ.

ಒತ್ತಡ ನಿಭಾಯಿಸಲು ಮಾತ್ರವಲ್ಲದೆ ವೃತ್ತಿಪರ ಆಕಾಂಕ್ಷೆಗಳನ್ನು ಪೂರೈಸಲು ಯೋಗ ಸಹಾಯ ಮಾಡುತ್ತದೆ. ಮಾನವ ಉನ್ನತಿಗಾಗಿ ಸಾಮರ್ಥ್ಯ ರೂಪಿಸಲು ದೇಹ, ಮನಸ್ಸು ಹಾಗೂ ಆತ್ಮವನ್ನು ಬೆಸೆಯುವ ಇದು ಪ್ರಯೋಗದ ಹಾದಿಯಾಗಿದೆ ಎಂದು ಗೌರವಾನ್ವಿತ ಕೇಂದ್ರ ಸಚಿವರು ನಂಬಿದ್ದಾರೆ. ಯೋಗ ವಿಶ್ವಕ್ಕೆ ಪರಿಚಯಿಸಿರುವ ದೈಹಿಕ ಮತ್ತು ಆಧ್ಯಾತ್ಮಿಕ ಸಾಮರ್ಥ್ಯವನ್ನು ಅಂತರಾಷ್ಟ್ರೀಯ ಯೋಗ ದಿನ ಆಚರಿಸುವ ಮೂಲಕ ನ್ಯಾಯಿಕ ಬಂಧುಗಳು ಪ್ರದರ್ಶಿಸಬೇಕು ಎಂದು ಬಿಸಿಐ ತಿಳಿಸಿದೆ.

ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಅವರು ಬಿಸಿಐಗೆ ವಿಶೇಷವಾಗಿ ಪತ್ರ ಬರೆದು ಮನವಿಮಾಡಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿಶ್ರೀಮಂತೋಸೇನ್ ಪತ್ರದಲ್ಲಿ ತಿಳಿಸಿದ್ದಾರೆ.

“ಕಾನೂನು ಸಮುದಾಯದವರಿಗೆ ದೀರ್ಘಾವಧಿ ಕೆಲಸದ ಪರಿಣಾಮದಿಂದ ಸೃಷ್ಟಿಯಾಗುವ ಒತ್ತಡ ನಿಭಾಯಿಸಲು ಯೋಗ ಸಹಕಾರಿಯಾಗುವುದಲ್ಲದೆ ಮನಸ್ಸು ಮತ್ತು ಆತ್ಮವನ್ನು ಜೋಡಿಸಲು ಅದು ಸಹಾಯ ಮಾಡುತ್ತದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಹಿಂದಿನ ಲೇಖನಐಟಿ ಕಾರಿಡಾರ್‌ ಭೂಮಿ ಅಕ್ರಮ ಡಿನೋಟಿಫಿಕೇಶನ್‌: ಬಿಎಸ್‌ವೈಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ
ಮುಂದಿನ ಲೇಖನರಾಜ್ಯದಲ್ಲಿ 750 ಮಂದಿಗೆ ಕೋವಿಡ್‌ ಪಾಸಿಟಿವ್‌