ಮನೆ ಸಾಹಿತ್ಯ ಪ್ರೇರೇಪಣೆಯ ತಂತ್ರವನ್ನು ಕಲಿಯಿರಿ

ಪ್ರೇರೇಪಣೆಯ ತಂತ್ರವನ್ನು ಕಲಿಯಿರಿ

0

         ಒಬ್ಬ ಫೋರ್ ಮನ್ ಬಹಳ ಸೋಮಾರಿಗಳಾದ ಕೆಲಸಗಾರರ ತಂಡದ ಮೇಲ್ಲಿಚಾರಕನಾಗಿದ್ದನು. ಆ ಸೋಮಾರಿ ಕೆಲಸಗಾರರಿಗೆ ಒಂದು ದೊಡ್ಡ ಸ್ಟೀಲ್ ಮೀಲಿನ ಹತ್ತಿರ ಒಂದು ಹತ್ತು ಅಡಿ ರಂಧ್ರವನ್ನು ಕೊರೆಯಲು ಹೇಳಲಾಯಿತು. ನಂತರ ಅಲ್ಲಲ್ಲಿ ರಂಧ್ರಗಳನ್ನು ಕೊರೆಯಿರಿ ಎಂದಾಗ ಅವರಿಗೆ ಬಹಳ ಕಿರಿಕಿರಿ ಉಂಟಾಯಿತು. ಅವರು ಕೊರೆಯುತ್ತಾ ಹೋದರು.  ಸಮಯ ಕಳೆಯುತ್ತಾ ಹೋಯಿತು. ಕೊನೆಗೆ ಒಂಬತ್ತು ರಂಧ್ರಗಳನ್ನು ಅವರು ಕೊರೆದರು. ಫ್ಯಾಕ್ಟರಿಯ ಬಳಿ ಇಷ್ಟೊಂದು ರಂಧ್ರಗಳನ್ನು ಏಕೆ ಕೊರಿಯಬೇಕೆಂದು ಅವರಿಗೆ ತಿಳಿದಿರಲಿಲ್ಲ.ಅವರು ಹತಾಶರಾದರು.ಸುಸ್ತಾದ ಅವರಿಗೆ ಬಹಳ ಕಿರಿಕಿರಿ ಉಂಟಾಯಿತು. ಕೊನೆಗೆ ಅವರು ಕೆಲಸ ನಿಲ್ಲಿಸಿ ಮನೆಗೆ ತೆರಳಲು ನಿರ್ಧರಿಸಿದರು. ಅವರು ಕೆಲಸ ಬಿಟ್ಟು ಹೊರಡುತ್ತಿದ್ದಾಗ ಫೋರ್ ಮಾನ್  ಹೇಳಿದ ಒಂದು ವಿಷಯ ಅವರು ತಮ್ಮ ಎಲ್ಲಾ ಕಿರಿಕಿರಿ ಹಾಗೂ ಸುಸ್ತನ್ನು ಮರೆತು ಕೆಲಸ ಮಾಡುವಂತೆ ಪ್ರೇರೇಪಿಸಿತು.

Join Our Whatsapp Group

 ಪ್ರಶ್ನೆಗಳು :

1. ಫೋರ್ ಮಾನ್ ಏನು ಹೇಳಿದ?

2. ಈ ಕಥೆಯ ನೀತಿ ಏನು?

 ಉತ್ತರಗಳು  :

1. ಫೋರ್ ಮಾನ್ ಅಲ್ಲಿ ಒಡೆದ ಒಂದು ಕೊಳವೆಗಾಗಿ ಹುಡುಕುತ್ತಿರುವುದಾಗಿ ಅದು ಕೆಲಸಗಾರರು ವಾಸವಾಗಿದ್ದ ಸ್ಥಳಕ್ಕೆ ನೀರು ಪೂರೈಸುತ್ತಿದೆ ಎಂದನು. ಆಗ ಕೆಲಸಗಾರರು ಕೂಡಲೇ ಕೆಲಸದಲ್ಲಿ ನಿರಾತರಾದರು.

2. ನಿರ್ದಿಷ್ಟ ಗುರಿಯಿಲ್ಲದೆ ಕೆಲಸ ಮಾಡುವುದು ಪ್ರೇರಣೆ  ನೀಡದಿರುವುದು ಮಾತ್ರವಲ್ಲ ಅದು ಕಷ್ಟವೂ ಕೂಡ.ಇನ್ನೊಂದೆಡೆ, ವ್ಯಕ್ತಿಯು ತಾನು ಮಾಡುವ ಕೆಲಸದ ಉದ್ದೇಶವನ್ನು ತಿಳಿದಾಗ ಏಕಾಗ್ರತೆಯಿಂದ ಪ್ರಾಮಾಣಿಕವಾಗಿ ಹೆಚ್ಚು ಸಾಮರ್ಥ್ಯವಾಗಿ ಕೆಲಸ ಮಾಡಲು ಸಿದ್ದನಾಗುತ್ತಾನೆ. ಹಾಗೆಯೇ ಯಾವುದೇ ಗುರಿ ಯಿಲ್ಲದಿದ್ದರೆ ಪೂರ್ಣ ಶ್ರದ್ಧೆ ಹಾಗೂ ಸಮರ್ಪಣಾ ಭಾವದಿಂದ ಕೆಲಸ ಮಾಡಲು ಸಾಧ್ಯವಿಲ್ಲ.ಇನ್ನೊಂದು ದೃಷ್ಟಿಯಲ್ಲಿ ಆ ಕೆಲಸದಿಂದ ಲಾಭವಾಗುವುದೆಂದರೆ ಉತ್ಸಾಹ ತಂತಾನೇ ಹೆಚ್ಚುತ್ತದೆ.