ಮನೆ ಸುದ್ದಿ ಜಾಲ ಕಾನೂನು ಪಾಲಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ: ಸಿ.ಜಿ.ಹುನಗುಂದ

ಕಾನೂನು ಪಾಲಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ: ಸಿ.ಜಿ.ಹುನಗುಂದ

0

ಮೈಸೂರು(Mysuru): ಕಾನೂನು ಪಾಲಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಬೆಂಗಳೂರಿನ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಸದಸ್ಯ ಸಿ.ಜಿ.ಹುನಗುಂದ ತಿಳಿಸಿದರು

ಜಿಲ್ಲಾ ನ್ಯಾಯಾಲಯ ಸಮೀಪದಲ್ಲಿರುವ ಹೋಟೆಲ್‌ನಲ್ಲಿ ಸೋಮವಾರ ಲಾಗೈಡ್‌ ಕಾನೂನು ಮಾಸಪತ್ರಿಕೆಯಿಂದ 2023ರ ದಿನದರ್ಶಿಕೆ ಹಾಗೂ ಡೈರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ತಾಳ್ಮೆ, ಶಿಸ್ತು ಇಲ್ಲದಿದ್ದರೆ ಯಾವುದೇ ಕೆಲಸದಲ್ಲಿಯೂ ‌ಯಶಸ್ಸು‌ ಪಡೆಯಲು ಸಾಧ್ಯವಿಲ್ಲ. ಉತ್ತಮ ಸೇವೆ ಮಾಡುವ ಮೂಲಕ ಸಮಾಜದಲ್ಲಿ ಉನ್ನತ ಸಾಧನೆ ಏರಲು ಸಾಧ್ಯವಿದೆ. ಅಶಿಸ್ತಿನಲ್ಲಿ ಸಹಕಾರ ಕೇಳಿದರೆ, ಯಾರು ಸಹಾಯ ಮಾಡಲು ಮುಂದೆ ಬರುವುದಿಲ್ಲ ಎಂದರು.

ನಗರ ಪೊಲೀಸ್ ಆಯುಕ್ತ ರಮೇಶ್ ಭಾನೋತ್ ಮಾತನಾಡಿ, ಪೊಲೀಸರು-ವಕೀಲರ ನಡುವೆ ಉತ್ತಮ‌ ಬಾಂಧವ್ಯ ಹೊಂದಿರಬೇಕು.‌ ನನ್ನ ವೃತ್ತಿ ಜೀವನದಲ್ಲಿ ನ್ಯಾಯಾಲಯದಲ್ಲಿಯೇ ಪ್ರಾಯೋಗಿಕವಾಗಿ ಸಾಕಷ್ಟು ಕಲಿತಿದ್ದೇನೆ. ಪ್ರತಿ ಪ್ರಕರಣದಲ್ಲಿಯೂ ಲೋಪದೋಷಗಳನ್ನು ಪತ್ತೆಹಚ್ಚಿ, ತಮ್ಮ ತಪ್ಪುಗಳನ್ನು ತಿಳಿದುಕೊಳ್ಳಲು ವಕೀಲರಿಂದ ‌ಸಹಾಯವಾಗುತ್ತದೆ ಎಂದು ತಿಳಿಸಿದರು.

ನನ್ನ ಮೇಲೆ ನಂಬಿಕೆಯಿಡಿ. ಯಾವುದೇ ಸಮಸ್ಯೆಗಳಿದ್ದರೂ, ನೇರವಾಗಿ ಕಚೇರಿಗೆ ಬಂದು ಭೇಟಿ‌ಮಾಡಬಹುದು. ಮೈಸೂರು ಸಾಂಸ್ಕೃತಿಕ ‌ನಗರದಲ್ಲಿ ಉತ್ತಮ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಅವರು ತಿಳಿಸಿದರು.

ಈ ವೇಳೆ ನಿವೃತ್ತ ಸರ್ಕಾರಿ ಅಭಿಯೋಜಕ ಆನಂದಕುಮಾರ್‌, ಹಿರಿಯ ಪತ್ರಕರ್ತರಾದ ಡಾ.ಕೂಡ್ಲಿ ಗುರುರಾಜ್‌, ಕೊಳ್ಳೇಗಾಲ ಮಹೇಶ್‌ ಅವರನ್ನು ಸನ್ಮಾನಿಸಲಾಯಿತು.

ವಕೀಲರ ಸಂಘದ ಕಾರ್ಯದರ್ಶಿ ಎಂ. ಉಮೇಶ್‌, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಂ.ಮಹದೇವಸ್ವಾಮಿ, ವಕೀಲರ ಸಂಘದ ಕಾರ್ಯದರ್ಶಿ ಎಸ್‌.ಉಮೇಶ್‌, ಹಿರಿಯ ವಕೀಲರಾದ ಎಂ.ಡಿ.ಹರೀಶ್‌ಕುಮಾರ್‌ ಹೆಗ್ಡೆ, ಜಿ.ವಿ.ರಾಮಮೂರ್ತಿ, ಎಸ್‌.ಲೋಕೇಶ್‌ ಇದ್ದರು.

ಹಿಂದಿನ ಲೇಖನಹಾಸ್ಯ
ಮುಂದಿನ ಲೇಖನಮೈಸೂರು ಪೊಲೀಸರ ಕಾರ್ಯಾಚರಣೆ: ಇಬ್ಬರು ಡ್ರಗ್ ಪೆಡ್ಲರ್’ಗಳ ಬಂಧನ