ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ದಿನಕ್ಕೊಂದು ವನ್ಯಪ್ರಾಣಿಗಳ ವಿಸ್ಮಯ ಕಾಣಸಿಗುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಚಿರತೆಯೊಂದು ಜಿಂಕೆಯನ್ನು ಎಳೆದೊಯ್ಯುತ್ತಿರುವ ದೃಶ್ಯ ಕಂಡ ವನ್ಯಪ್ರಿಯರು ಭಯದಿಂದ ಒಂದು ಕ್ಷಣ ಮೌನಕ್ಕೆ ಜಾರಿದ್ದಾರೆ.
ಚಿರತೆ ಜಿಂಕೆಯನ್ನು ಎಳೆದೊಯ್ಯುತ್ತಿರುವ ದೃಶ್ಯವನ್ನು ಜೆಎಲ್ ಆರ್ ಸಿಬ್ಬಂದಿಯೊಬ್ಬರು ಸೆರೆ ಹಿಡಿದಿದ್ದಾರೆ.
ನಾಗರಹೊಳೆ ಉದ್ಯಾನದ ನಾಣಚ್ಚಿ ಗೇಟ್ ಕಡೆಯಿಂದ ಜೂ.9 ರ ಶುಕ್ರವಾರ ಬೆಳ್ಳಂ ಬೆಳಗ್ಗೆ ಸಫಾರಿಗೆ ತೆರಳಿದ್ದ ವನ್ಯಪ್ರಿಯರಿಗೆ ಜಿಂಕೆ, ಆನೆ, ಕಡವೆಗಳು ಕಾಣಿಸಿದ್ದು, ಮತ್ತಷ್ಟು ಮುಂದೆ ಹೋಗುತ್ತಿದ್ದಂತೆ ಚಿರತೆಯೊಂದು ಬೇಟೆಯಾಡಿದ್ದ ಜಿಂಕೆಯನ್ನು ಎಳೆದೊಯ್ಯುತ್ತಿರುವ ವಿಡಿಯೋ ಜೆಎಲ್ ಆರ್ ವಾಹನ ಸಿಬ್ಬಂದಿ ವಿಡಿಯೋ ಮಾಡಿದ್ದಾರೆ.