ಮನೆ ರಾಜಕೀಯ ಮೃತದೇಹ ತರುವ ಜಾಗದಲ್ಲಿ ಹೆಚ್ಚು ಮಂದಿಯನ್ನು ಕರೆ ತರಬಹುದು : ಅರವಿಂದ ಬೆಲ್ಲದ್

ಮೃತದೇಹ ತರುವ ಜಾಗದಲ್ಲಿ ಹೆಚ್ಚು ಮಂದಿಯನ್ನು ಕರೆ ತರಬಹುದು : ಅರವಿಂದ ಬೆಲ್ಲದ್

0

ಧಾರವಾಡ ಖಾರ್ಕಿವ್‌ನಲ್ಲಿ ರಷ್ಯಾದ ಪಡೆಗಳ ಶೆಲ್ ದಾಳಿಯಲ್ಲಿ ಹತರಾದ ನವೀನ್ ಜ್ಞಾನ ಗೌಡರ್ ಅವರ ದೇಹವನ್ನು ಮರಳಿ ತರುವ ಬದಲು ಆ ಜಾಗದಲ್ಲಿ ಹೆಚ್ಚು ಜನರನ್ನು ವಿಮಾನದಲ್ಲಿ ಕರೆದುಕೊಂಡು ಬರಬಹುದು ಎಂದು ಬೆಲ್ಲದ್ ಶಾಸಕ ಅರವಿಂದ್ ಬೆಲ್ಲದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಭಾರತೀಯ ವಿದ್ಯಾರ್ಥಿಗಳನ್ನು ತರುವ ಪ್ರಯತ್ನ ನಡೆದಿದೆ. ಅಲ್ಲಿ ಯುದ್ದ ನಡೆಯುತ್ತಿದೆ, ಈ ಬಗ್ಗೆ ಮಾದ್ಯಮದವರೇ ಅದನ್ನ ತೊರಿಸುತಿದ್ದಾರೆ. ಹೀಗಾಗಿ ಜೀವಂತ ಇದ್ದವರನ್ನೇ ತರುವದು ಕಷ್ಟ ಆಗಿದೆ, ಶವ‌ ತರೋದು ಇನ್ನೂ ಕಷ್ಟ ಇದೆ. ವಿಮಾನದಲ್ಲಿ ಶವ ತರಲು ಹೆಚ್ಚು ಜಾಗ‌ಬೇಕು. ಇದರಿಂದ ಸಮಸ್ಯೆ ಆಗಲಿದೆ. ಶವ‌ ಇರುವ ಜಾಗದಲ್ಲಿ ಹೆಚ್ಚು ಜನರನ್ನ ಕರೆದುಕೊಂಡು ಬರಬಹುದು ಎಂದು ಹೇಳಿಕೆ ನೀಡಿದ್ದಾರೆ.

ಭಾರತ ದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಬೇಕಾದರೆ ದುಬಾರಿ ವೆಚ್ಚವನ್ನ ಭರಿಸಿ ವೈದ್ಯಕೀಯ ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆಯನ್ನ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ನಿರ್ಮಾಣ ಮಾಡಿದೆ. ಹೀಗಾಗಿ ಇಲ್ಲಿನ ವಿದ್ಯಾರ್ಥಿಗಳು ಬೇರೆ ದೇಶಕ್ಕೆ ತೆರಳಿ ವೈದ್ಯಕೀಯ ಶಿಕ್ಷಣ ಪಡೆಯಲು ತೆರಳಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಭಾರತ ದೇಶದಲ್ಲಿ ಮೆಡಿಕಲ್ ಕೌನ್ಸಿಲ್‌ ಆಫ್ ಇಂಡಿಯಾ ಪ್ರೈವೇಟ್‌ ಬಾಡಿ ಇದೆ. ಅದು ಸರ್ಕಾರದ ಬಾಗವಲ್ಲ. ಹೀಗಾಗಿ ಅದು ದೇಶದಲ್ಲಿ‌ ಮೆಡಿಕಲ್ ಸೀಟುಗಳ ಕೃತಕ ಅಭಾವವನ್ನ ಸೃಷ್ಟಿ ಮಾಡಿ, ಹೆಚ್ಚು ಸೀಟುಗಳನ್ನ ತೆಗೆದುಕೊಳ್ಳದಂತೆ ಹಾಗೂ ಹೆಚ್ಚು ಪೋಸ್ಟ್ ಗ್ರ್ಯಾಜುಯೇಟ್ ಸೀಟುಗಳು ಅಲಾಕೇಟ್ ಆಗದಂತೆ ಕಾರ್ಯ ನಿಭಾಯಿಸುತ್ತಿದೆ. ಹೀಗಾಗಿ ದೇಶದಲ್ಲಿನ ವೈದ್ಯಕೀಯ ಶಿಕ್ಷಣ ಪಡೆಯಬೇಕೆಂಬ ವಿದ್ಯಾರ್ಥಿಗಳು ಬೇರೆ ದೇಶಗಳಿಗೆ ತೆರಳಿ ಮೆಡಿಕಲ್ ಕಲಿಯುವ ಅನಿವಾರ್ಯತೆ ಬಂದೊದಗಿದೆ ಎಂದು ಹೇಳಿದರು.

ಹಿಂದಿನ ಲೇಖನಜೆಡಿಎಸ್ ಶಾಸಕಾಂಗ ಪಕ್ಷದ ಸಭೆ: ಜಲಧಾರೆ, ಮೇಕೆದಾಟು ಸೇರಿ ಪ್ರಮುಖ ವಿಷಯಗಳ ಕುರಿತು ಚರ್ಚೆ
ಮುಂದಿನ ಲೇಖನಮೇಕೆದಾಟು ಯೋಜನೆಗೆ ಸಾವಿರ ಕೋಟಿ ರೂ.ಮೀಸಲು: ಸಿಎಂ