ಮನೆ ಸ್ಥಳೀಯ ಸ್ಪರ್ಶ ಕುಷ್ಠ ರೋಗ ಅಭಿಯಾನ: ಪೋಸ್ಟರ್, ಬ್ಯಾನರ್, ಕರಪತ್ರ ಬಿಡುಗಡೆ

ಸ್ಪರ್ಶ ಕುಷ್ಠ ರೋಗ ಅಭಿಯಾನ: ಪೋಸ್ಟರ್, ಬ್ಯಾನರ್, ಕರಪತ್ರ ಬಿಡುಗಡೆ

0

ಮೈಸೂರು: ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಸ್ಪರ್ಶ ಕುಷ್ಠ ರೋಗ ಅಭಿಯಾನ 2025 ಅಂಗವಾಗಿ ಪೋಸ್ಟರ್, ಬ್ಯಾನರ್, ಕರಪತ್ರವನ್ನು ಜಿಲ್ಲಾಧಿಕಾರಿಗಳಾದ  ಲಕ್ಷ್ಮಿಕಾಂತ ರೆಡ್ಡಿ. ಜಿ ಅವರು ಬಿಡುಗಡೆ ಮಾಡಿದರು.

Join Our Whatsapp Group

 ಈ ಸಂದರ್ಭದಲ್ಲಿ ಮಾತನಾಡಿದ  ಆರೋಗ್ಯ ಸೇವೆಯಲ್ಲಿ ನಿರತರಾಗಿರುವ ಎಲ್ಲಾ  ಕಾರ್ಯಕರ್ತರು ಮನೆಮನೆಗೆ ಹೋಗಿ ಸಮೀಕ್ಷೆ ನಡೆಸಿ ಕುಷ್ಟರೋಗವನ್ನು ಪ್ರಾರಂಭಿಕ ಹಂತದಲ್ಲಿ  ಪತ್ತೆ ಹಚ್ಚಿ ಸೂಕ್ತ ಸಮಯಕ್ಕೆ ಚಿಕಿತ್ಸೆಗೆ ಒಳಪಡಿಸಿದರೆ ಸಂಪೂರ್ಣ ಗುಣಮುಖವಾಗುತ್ತಾರೆ.  ಯಾವುದೇ ರೀತಿಯಾದ ತಪ್ಪು ಗ್ರಹಿಕೆ ಕಂದಾಚಾರ ಹಾಗೂ ಮೂಢನಂಬಿಕೆಗೆ ಒಳಗಾಗದೆ

ಆರೋಗ್ಯವಂತ ಸ್ವಾಸ್ಥ ಸಮಾಜ ನಿರ್ಮಿಸಿ , ದೇಶದ ಪ್ರಗತಿಗೆ ಅವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಸಂದೇಶ ನೀಡಿದರು.

 ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಕುಮಾರಸ್ವಾಮಿ,  ಜಿಲ್ಲಾ ಕುಷ್ಟರೋಗ ನಿರ್ಮೂಲನ  ಅಧಿಕಾರಿಗಳಾದ ಡಾ. ಬೃಂದಾ  ಹಾಗೂ ಸಿಬ್ಬಂದಿ  ವರ್ಗದವರು ರವರು ಹಾಜರಿದ್ದರು.

ಸ್ಪರ್ಶ ಕುಷ್ಟರೋಗ ಅಭಿಯಾನದ ಪ್ರಯುಕ್ತ ಜಾಥಾ ಚಾಲನೆ

 ಇಂದು  ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನ  ಕಾರ್ಯಕ್ರಮ ದಡಿಯಲ್ಲಿ ಜ.30 ರಿಂದ ಫೆ.13 ರ ವರಗೆ ಹಮ್ಮಿಕೊಂಡಿರುವ  ಸ್ಪರ್ಶ ಕುಷ್ಟರೋಗ ಅಭಿಯಾನದ ಪ್ರಯುಕ್ತ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಜಾಥಾ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಕುಮಾರಸ್ವಾಮಿರವರು ಹಸಿರು ನಿಶಾನೆ ತೋರಿಸುವುದರ ಮುಖಾಂತರ ಚಾಲನೆ ನೀಡಿದರು.

 ಈ ಸಂದರ್ಭದಲ್ಲಿ ಮಾತನಾಡಿದ ಅವರು ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಮನೆ ಮನೆಗೆ ಆಶಾ ಕಾರ್ಯಕರ್ತೆಯರು ಆರೋಗ್ಯ ಕಾರ್ಯಕರ್ತರು, ಭೇಟಿ ನೀಡಿ ಕುಷ್ಠರೋಗದ ಕುರಿತು  ಸಂಶಯಾಸ್ಪದ ಪ್ರಕರಣಗಳನ್ನು ಪತ್ತೆ ಹಚ್ಚಿ ಸೂಕ್ತ ಸಮಯಕ್ಕೆ ಚಿಕಿತ್ಸೆಗೆ ಒಳಪಡಿಸಿ, ಕುಷ್ಠ ಮುಕ್ತ ಜಿಲ್ಲೆಯನ್ನು ಮಾಡುವುದರ ಮುಖಾಂತರ ಗಾಂಧೀಜಿಯವರ ಕುಷ್ಠ ಮುಕ್ತ ಭಾರತ ಕನಸನ್ನು ನಿರ್ಮಾಣ ಮಾಡುವಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಜಿಲ್ಲಾ ಕುಷ್ಟರೋಗ ನಿರ್ಮೂಲ ಅಧಿಕಾರಿಗಳಾದ  ಡಾ. ಬೃಂದಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಯಾದ ಶ್ರೀಮತಿ ಮುನೀಂದ್ರಮ್ಮ,ಕುಷ್ಟರೋಗ ವಿಭಾಗದ ಅನಿಲ್ ಕ್ರಿಸ್ಟಿ,  ಶ್ರುತಿ, ಸುಮಂತ್ ಜಿಎಸ್, ಮತ್ತು ಸಿಬ್ಬಂದಿ ವರ್ಗದವರು ಹಾಗೂ  ವಿದ್ಯಾ ವಿಕಾಸ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.