ಮನೆ ರಾಜ್ಯ ಬಿಜೆಪಿಯವರು ಮೊದಲು ಈಶ್ವರಪ್ಪ, ಅನಂತ್‌ ಕುಮಾರ್‌ ಗೆ ಗುಂಡಿಕ್ಕಲಿ: ಎನ್. ಚಲುವರಾಯಸ್ವಾಮಿ

ಬಿಜೆಪಿಯವರು ಮೊದಲು ಈಶ್ವರಪ್ಪ, ಅನಂತ್‌ ಕುಮಾರ್‌ ಗೆ ಗುಂಡಿಕ್ಕಲಿ: ಎನ್. ಚಲುವರಾಯಸ್ವಾಮಿ

0

ಕೆ.ಆರ್ .ಪೇಟೆ: ಡಿ ಕೆ ಸುರೇಶ್‌ ರನ್ನ ಗುಂಡಿಕ್ಕಿ ಕೊಲ್ಲಬೇಕು ಎಂಬ ಈಶ್ವರಪ್ಪ ಹೇಳಿಕೆಗೆ ಸಚಿವ  ಎನ್. ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದು, ಬಿಜೆಪಿಯವರು ಮೊದಲು ಈಶ್ವರಪ್ಪ, ಅನಂತ್‌ ಕುಮಾರ್‌ ಗೆ ಗುಂಡಿಕ್ಕಲಿ  ಎಂದು ಕಿಡಿಕಾರಿದರು.

ಕೆ.ಆರ್ .ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಸರಿ ಧ್ವಜವನ್ನ ರಾಷ್ಟ್ರ ಧ್ವಜ ಮಾಡ್ತೀನಿ ಎಂದು ಈಶ್ವರಪ್ಪ ಹೇಳಿದ್ದರು.ಸಂವಿಧಾನ ಬದಲಾಯಿಸಬೇಕು ಎಂದು ಅನಂತ್ ಕುಮಾರ್ ಹೆಗಡೆ ಹೇಳಿದ್ರು. ಅವರ ಪಾರ್ಟಿಯವರು ಅವರಿಗೆ ಗುಂಡಿಕ್ಕಲಿ ಅಮೇಲೆ ನೋಡೋಣ ಎಂದರು.

ಬಿಜೆಪಿಯವಂತೆ ಕಾಂಗ್ರೆಸ್ ಶಾಸಕರು, ಸಂಸದರು ರಾಷ್ಟ್ರ, ಸಂವಿಧಾನಕ್ಕೆ ಅವಮಾನ ಮಾಡಿಲ್ಲ. ರಾಜ್ಯಕ್ಕೆ ಆದ ಆರ್ಥಿಕ ಅನ್ಯಾಯದ ಬಗ್ಗೆ ಡಿಕೆ ಸುರೇಶ್ ಮಾತನಾಡಿದ್ದಾರೆ. ಈಶ್ವರಪ್ಪರ ಮೆದುಳಿಗೂ ನಾಲಿಗೆಗೂ ಕನೆಕ್ಷನ್ ಕಟ್ ಆಗಿದೆ. ಈಶ್ವರಪ್ಪಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ರಾಷ್ಟ್ರ, ರಾಜ್ಯ ಹಿತ ಕಾಯುವ ಪ್ರಶ್ನೆಗೆ ಉತ್ತರ ಕೊಡ್ತೀನಿ. ರಾಜಕಾರಣಕ್ಕಾಗಿ ನಾಲಿಗೆ ಹರಿಬಿಟ್ರೆ ಉತ್ತರ ಕೊಡಲ್ಲ. ಮುತಾಲಿಕ್ ಯಾರು, ಏನು ಅವರು? ಅವರಿಗಿಂತಲೂ ಉತ್ತಮವಾಗಿ ಬದುಕಿರುವವರೂ ಇದ್ದಾರೆ. ಮುತಾಲಿಕ್‌ ಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದರು.

ಸುಮಲತಾ-ಬಿಜೆಪಿ ವರಿಷ್ಠರ ಭೇಟಿ ವಿಚಾರ‌ ಕುರಿತು ಮಾತನಾಡಿ, ಸುಮಲತಾ ಬಿಜೆಪಿ ಟಿಕೆಟ್ ಕೇಳ್ತಿರೋದು ಕನ್ಫರ್ಮ್ ಆಯ್ತಲ್ವಾ? ಸುಮಲತಾ ಬಿಜೆಪಿಯಲ್ಲಿರೋದು ಖಚಿತವಾಗಿದೆ. ಕಾಂಗ್ರೆಸ್‌ಗೆ ಅವರನ್ನ ಯಾರು ಕರೆದರೂ ಎಂದು ಸುಮಲತಾ ಹೇಳಬೇಕು ಎಂದರು.

ಸುಮಲತಾ ಕಾಂಗ್ರೆಸ್‌ ಗೆ ಹೋಗ್ತಾರೆ ಎಂಬ ಜಿಟಿಡಿ ಹೇಳಿಕೆಗೆ ಪ್ರತಿಕ್ರಿಯಿಸಿ, ಜಿಟಿಡಿಗೂ ಇದಕ್ಕೂ ಸಂಬಂಧ ಇಲ್ಲ. ಬಿಜೆಪಿ ಬೆಂಬಲಿತ ಸಂಸದೆ ಸುಮಲತಾ. ಈಗ ಬಿಜೆಪಿ ಟಿಕೆಟ್‌ ಕೇಳಿದ್ದಾರೆ. ಅವರ ಬಗ್ಗೆ ನಾವು ಮಾತನಾಡುವುದು ಸೂಕ್ತ ಅಲ್ಲ. ಅವರಿಗೆ ಕಾಂಗ್ರೆಸ್ ಬಾಗಿಲೂ ಮುಚ್ಚಿದೆಯಾ? ಇಲ್ವಾ? ಅವರನ್ನೇ ಕೇಳಿ ಎಂದು ಹೇಳಿದರು.

ಸ್ಟಾರ್ ಚಂದ್ರು ಓರ್ವ ಟಿಕೆಟ್ ಆಕಾಂಕ್ಷಿ.  ಅಂತಿಮವಾಗಿ ಪಕ್ಷ ತೀರ್ಮಾನಿಸಲಿದೆ. ಇನ್ನೊಂದು ವಾರದಲ್ಲಿ ಬಹುತೇಕ ಅಭ್ಯರ್ಥಿ‌ಗಳು ಫೈನಲ್ ಆಗ್ತಾರೆ‌ ಎಂದು ತಿಳಿಸಿದರು.

ಕೆರಗೋಡು ಹನುಮ ಧ್ವಜ ಹೋರಾಟದಲ್ಲಿ ಜೆಡಿಎಸ್‌ ತಟಸ್ಥ ವಿಚಾರವಾಗಿ ಮಾತನಾಡಿ, ವಿವಾದ ಪ್ರಾರಂಭ ಮಾಡಿದ್ದು ಯಾರು? ಯಾಕೆ ನ್ಯೂಟ್ರಕ್ ಆದರೂ, ನಿನ್ನೆ ಹೋರಾಟಕ್ಕೆ ಯಾಕೆ ಬರಲಿಲ್ಲ.? ಜಿಲ್ಲೆಯ ಜನ ಒಪ್ಪಲ್ಲ ಎಂದು ಅವರಿಗೆ ಗೊತ್ತಾಗಿದೆ. ಇದು ಸರಿಯಲ್ಲ ಎಂದು ಹಲವರು ಹೇಳಿದ್ದಾರೆ.  ಕೆರಗೋಡು ಯುವಕರು ಸ್ವಯಂ ಅಪರಾಧ ಅಲ್ಲ ಎಂದು ಹೇಳಿದ್ದಾರೆ ಎಂದರು.

ಕುಮಾರಸ್ವಾಮಿ ಕೇಸರಿ ಶಾಲು ಹಾಕಿ ತಪ್ಪು ಮಾಡಿದ್ರಾ ಎಂದು ಹೆಚ್‌ಡಿಡಿ ಕೇಳಿ ಎಂದು ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.