ಕಿಕ್ಕೇರಿ : ದಬ್ಬೇಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷಗಾದಿ ಹಿಡಿಯುವ ಸಂಬಂಧ ಕೊಲೆ ಮಾಡಿದ ಆರೋಪಿಗಳಿಗೆ ಶ್ರೀರಂಗಪಟ್ಟಣ ನ್ಯಾಯಾಲಯದ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
2015ರ ಜ.19ರಂದು ಚುಜ್ಜಲ ಕ್ಯಾತನಹಳ್ಳಿ ಬಳಿಯ ತೆಂಗಿನಘಟ್ಟ ಗೇಟ್ ನಲ್ಲಿ ತೋಪೆಗೌಡ ಎಂಬ ವರ ಮೇಲೆ ಹಲ್ಲೆ ಮಾಡಿ ಕೊಲೆಗೈದ ಆರೋಪದ ಮೇಲೆ ತೆಂಗಿನಘಟ್ಟದ ಬಲರಾಮ ಹಾಗೂ ಚುಜ್ಜಲ ಕ್ಯಾತನಹಳ್ಳಿಯ ಸ್ವಾಮಿ ಅವರನ್ನು ಬಂಧಿಸಲಾಗಿತ್ತು. ನಾಗಮಂಗಲ ಉಪವಿಭಾಗದ ಡಿವೈಎಸ್ಪಿ ಸವಿರಾ ಹೂಗಾರ್, ಕೆ.ಆರ್.ಪೇಟೆ ಸಿಪಿಐ ರಾಜೇಂದ್ರ ತನಿಖಾಧಿಕಾರಿಗಳಾಗಿದ್ದು, ಇವರ ನೇತೃತ್ವದಲ್ಲಿ ಎಎಸ್ಐ ಸೋಮಶೇಖರ್, ಟಿ. ಶಿವಣ್ಣ, ಕೆ. ಕುಮಾರ್ ಅವರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ವಿಚಾರಣೆ ಪೂರೈಸಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆಸೀನ ಶ್ರೀರಂಗಪಟ್ಟಣ ನ್ಯಾಯಾಲಯದ ನ್ಯಾಯಾಧೀಶರಾದ ಗೋಪಾಲಕೃಷ್ಣರಾಯ್ ರವರು ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 25,000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ಅಭಿಯೋಜಕರಾದ ಎಂ.ಕೆ. ಪ್ರಪುಲ್ಲಾ ಅವರು ವಾದ ಮಂಡಿಸಿದ್ದರು.