ಲಕ್ನೋ: ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ಇಂದು (ಫೆ.8) 3.2 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ.
ಈ ಭೂಕಂಪನ ಮಧ್ಯಾಹ್ನ 1.24ಕ್ಕೆ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದುವು 24.22 ಅಕ್ಷಾಂಶ ಮತ್ತು 82.92 ರೇಖಾಂಶಗಳಲ್ಲಿ ಮತ್ತು 10 ಕಿಲೋಮೀಟರ್ ಆಳದಲ್ಲಿದೆ ನಡೆದಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ತಿಳಿಸಿದೆ.
ಇನ್ನು ಈ ಘಟನೆಯಿಂದ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.