ಮನೆ ಮನರಂಜನೆ ಅಖ್ತರ್ ಕುಟುಂಬಕ್ಕೆ ಶಿಬಾನಿಗೆ ಸ್ವಾಗತ ಕೋರಿದ ಶಬಾನಾ ಅಜ್ಮಿ

ಅಖ್ತರ್ ಕುಟುಂಬಕ್ಕೆ ಶಿಬಾನಿಗೆ ಸ್ವಾಗತ ಕೋರಿದ ಶಬಾನಾ ಅಜ್ಮಿ

0

ಮುಂಬೈ: ಬಾಲಿವುಡ್ ತಾರೆಗಳಾದ ಫರ್ಹಾನ್‌ ಅಖ್ತರ್‌ ಮತ್ತು ಶಿಬಾನಿ ದಾಂಡೇಕರ್ ಅವರು ಶನಿವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಮದುವೆ ಸಮಾರಂಭವು ಕುಟುಂಬ ಸದಸ್ಯರೊಂದಿಗೆ ಖಾಸಗಿಯಾಗಿ ನೇರವೇರಿತ್ತು.

ಫರ್ಹಾನ್ ಅಖ್ತರ್ ಅವರ ತಂದೆ ಹಾಗೂ ಹೆಸರಾಂತ ಗೀತರಚನೆಕಾರ ಜಾವೇದ್ ಅಖ್ತರ್ ಅವರಿಗೆ ಬಾಲಿವುಡ್‌ ನಟಿ ಶಬಾನಾ ಅಜ್ಮಿ ಎರಡನೇ ಪತ್ನಿಯಾಗಿದ್ದು, ಈ ಸಮಾರಂಭದ ಚಿತ್ರವನ್ನು ಶಬಾನಾ ಅಜ್ಮಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ನವವಿವಾಹಿತರಿಗೆ ಶುಭ ಹಾರೈಸುತ್ತಿರುವುದಾಗಿ ಬರೆದುಕೊಂಡಿರುವ ಶಬಾನಾ ಅವರು ಶಿಬಾನಿ ದಾಂಡೇಕರ್ ಅವರನ್ನು ತಮ್ಮ ಕುಟುಂಬಕ್ಕೆ ಸ್ವಾಗತಿಸಿದ್ದಾರೆ. ‘ಸಂತಸಭರಿತ ಕುಟುಂಬವು ಸುಂದರ ಶಿಬಾನಿಯನ್ನು ತನ್ನ ಮಡಿಲಿಗೆ ಸ್ವಾಗತಿಸುತ್ತಿದೆ’ ಎಂದು ಶಬಾನಾ ತಿಳಿಸಿದ್ದಾರೆ.

ಹಿಂದಿನ ಲೇಖನಜಪ್ತಿ ಮಾಡಿದ ಸಂಸ್ಥೆಯೇ ತೆರಿಗೆ ಕಟ್ಟಬೇಕು; ಸುಪ್ರೀಂ ಕೋರ್ಟ್‌
ಮುಂದಿನ ಲೇಖನರಷ್ಯಾ-ಉಕ್ರೇನ್ ಬಿಕ್ಕಟ್ಟು: ರಷ್ಯಾ ದಾಳಿಗೆ 9 ಬಲಿ, 8 ಮಂದಿಗೆ ಗಾಯ