ಮನೆ ಅಪರಾಧ ಉಗ್ರ ಸಂಘಟನೆ ಜೊತೆ ನಂಟು: ಬೆಂಗಳೂರಿನಲ್ಲಿ ಶಂಕಿತ ಆರೋಪಿ ಆರೀಫ್ ಎನ್’ಐಎ ವಶಕ್ಕೆ

ಉಗ್ರ ಸಂಘಟನೆ ಜೊತೆ ನಂಟು: ಬೆಂಗಳೂರಿನಲ್ಲಿ ಶಂಕಿತ ಆರೋಪಿ ಆರೀಫ್ ಎನ್’ಐಎ ವಶಕ್ಕೆ

0

ಬೆಂಗಳೂರು : ಅಲ್ ಖೈದಾ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದ ನಗರದ ಥಣಿಸಂದ್ರದ ಮಂಜುನಾಥ ನಗರದಲ್ಲಿ ವಾಸವಿದ್ದ ಶಂಕಿತ ವ್ಯಕ್ತಿಯನ್ನು ಆಂತರಿಕ ಭದ್ರತಾ ವಿಭಾಗ (ಐ.ಎಸ್.ಡಿ) ಹಾಗೂ ಕೇಂದ್ರ ತನಿಖಾ ಸಂಸ್ಥೆಗಳು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿವೆ.

ಆರೀಫ್ ಬಂಧನವಾದ ಶಂಕಿತ ವ್ಯಕ್ತಿ.

ಖಾಸಗಿ ಸಾಫ್ಟ್‌’ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಪ್ರಸ್ತುತ ವರ್ಕ್ ಫ್ರಮ್ ಹೋಮ್ ಮೂಲಕ ಮನೆಯಿಂದಲೇ ಕೆಲಸ ಮಾಡುತ್ತಿದ್ದ. ಕಳೆದ ಎರಡು ವರ್ಷಗಳಿಂದ ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದ ಆರೀಫ್, ಅಲ್ ಖೈದಾಗೆ ಸಂಬಂಧಿಸಿದ ಟೆಲಿಗ್ರಾಂ ಮತ್ತಿತರ ಗ್ರೂಪ್​’ಗಳಲ್ಲಿ ಸಕ್ರಿಯನಾಗಿದ್ದ ಎನ್ನಲಾಗಿದೆ.

ಮುಂಬರುವ ಮಾರ್ಚ್ ತಿಂಗಳಿನಲ್ಲಿ‌ ಇರಾಕ್ ಮೂಲಕ ಸಿರಿಯಾಗೆ ತೆರಳಲು ಸಿದ್ಧತೆ ನಡೆಸಿದ್ದ ಎನ್ನಲಾಗಿತ್ತು. ಹೀಗಾಗಿ ಆರೋಪಿಯನ್ನು ಬಂಧಿಸಿದ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

ಹಿಂದಿನ ಲೇಖನಅಪರಿಚಿತ ವಾಹನ ಢಿಕ್ಕಿ: ಮೂವರು ಸ್ಥಳದಲ್ಲೇ ಸಾವು
ಮುಂದಿನ ಲೇಖನಮಾನಹಾನಿ ಹೇಳಿಕೆ: ಆರೋಗ್ಯ ಸಚಿವ ಸುಧಾಕರ್ ವಿರುದ್ಧದ ವಿಚಾರಣೆಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್