ಮನೆ ರಾಜ್ಯ ಅ.29ಕ್ಕೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟ: ಸಚಿವ ವಿ.ಸುನಿಲ್ ಕುಮಾರ್

ಅ.29ಕ್ಕೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟ: ಸಚಿವ ವಿ.ಸುನಿಲ್ ಕುಮಾರ್

0

ಉಡುಪಿ(Udupi): ರಾಜ್ಯೋತ್ಸವ ಪ್ರಶಸ್ತಿಗೆ 28,000 ಅರ್ಜಿಗಳು ಬಂದಿದ್ದು,  ಅ.29ಕ್ಕೆ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟವಾಗಲಿದೆ ಎಂದು ಇಂಧನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದರು.

ಶನಿವಾರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಸಮಿತಿ ರಚಿಸಲಾಗಿದ್ದು, ಒತ್ತಡಕ್ಕೆ ಮಣಿಯದೆ ಅರ್ಹರನ್ನು ಆಯ್ಕೆ ಮಾಡಲಾಗುವುದು. ತೆರೆ ಮರೆಯ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.

ಕುಸುಮ್ ಶ್ರೀ ಯೋಜನೆಯಡಿ 1 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದಲ್ಲಿ 1,100 ಫೀಡರ್‌ಗಳ ಸೋಲಾರಿಕರಣ ನಡೆಯುತ್ತಿದ್ದು ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗುವುದು. ಇದರಿಂದ 3.25 ಲಕ್ಷ ರೈತರಿಗೆ ನೆರವಾಗಲಿದೆ ಎಂದು ಸಚಿವರು ಹೇಳಿದರು.

ಹಿಂದೆ, ವೈಯಕ್ತಿಕವಾಗಿ ರೈತರ ಪಂಪ್‌ಸೆಟ್‌ಗಳಿಗೆ ಸೋಲಾರ್ ಅಳವಡಿಸಿಕೊಳ್ಳಲು ಶೇ 70ರಷ್ಟು ಸಹಾಯಧನ ನೀಡಲಾಗುತ್ತಿತ್ತು. ಸೋಲಾರ್ ಪಂಪ್‌ಸೆಟ್‌ಗಳು 700 ರಿಂದ 800 ಅಡಿ ಆಳದಿಂದ ನೀರೆತ್ತುವುದಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಕುಸುಮ್ ಶ್ರೀ ಯೋಜನೆಯಡಿ ಫೀಡರ್‌ಗಳ ಸೋಲಾರಿಕರಣ ಮಾಡಲಾಗುತ್ತಿದೆ ಎಂದರು.

ಕಲ್ಲಿದ್ದಲು ಹಾಗೂ ಇಂಧನ ದರಕ್ಕೆ ಅನುಗುಣವಾಗಿ ಹಿಂದೆ ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಪರಿಷ್ಕರಣೆ ಮಾಡಲಾಗುತ್ತಿತ್ತು. ಇನ್ಮುಂದೆ ವರ್ಷಕ್ಕೊಮ್ಮೆ ದರ ಪರಿಷ್ಕರಣೆ ಮಾಡುವಂತೆ ಮುಖ್ಯಮಂತ್ರಿ ಹಾಗೂ ಕೆಆರ್‌ಸಿಗೆ ಮನವಿ ಸಲ್ಲಿಸಲಾಗಿದೆ. ಎಲ್ಲ ಸರ್ಕಾರಿ ಕಚೇರಿಗಳಿಗೂ ಪ್ರೀಪೇಯ್ಡ್‌ ಮೀಟರ್ ಅಳವಡಿಸಲು ತೀರ್ಮಾನಿಸಲಾಗಿದೆ ಎಂದರು.

ಹಿಂದಿನ ಲೇಖನದೀಪಾವಳಿಗೆ ಖಾಸಗಿ ಸಾರಿಗೆ ಸಂಸ್ಥೆಗಳಿಂದ ದುಬಾರಿ ದರ; ಪರವಾನಿಗೆ ರದ್ದು ಮಾಡುವ ಎಚ್ಚರಿಕೆ ನೀಡಿದ ಶ್ರೀರಾಮುಲು
ಮುಂದಿನ ಲೇಖನಕ್ಷೀರಸಾಗರ ಕಡೆದ ವೇಳೆ ಉಕ್ಕಿ ಬಂದ ಸಿರಿವಂತೆ