ಮೈಸೂರು: ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ನಂತರ ತೆಗೆದುಕೊಳ್ಳಬಹುದಾದ ಕೋರ್ಸ್‍ಗಳು ಮತ್ತು ಇರುವಂತಹ ಅವಕಾಶಗಳು ಕುರಿತು ನೇರ ಸಂದರ್ಶನ ಫೋನ್-ಇನ್ ಕಾರ್ಯಕ್ರಮವನ್ನು ದಿನಾಂಕ 14.05.2025 ರಂದು ಬೆಳಗ್ಗೆ 11:30ರಿಂದ 12:30ರ ವರೆಗೆ ಊಟಿ ರಸ್ತೆಯಲ್ಲಿನ ಜೆಎಸ್‍ಎಸ್ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿರು ಜೆಎಸ್‍ಎಸ್ ರೇಡಿಯೋ 91.2ಎಫ್.ಎಂ. ಸಮುದಾಯ ಬಾನುಲಿ ಕೇಂದ್ರವು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಮೈಸೂರಿನ ಜೆಎಸ್‍ಎಸ್ ಪಾಲಿಟೆಕ್ನಿಕ್‍ನ ಪ್ರಾಂಶುಪಾಲರಾದ ಡಾ. ಭಕ್ತವತ್ಸಲ ರವರು ಭಾಗವಹಿಸಲಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಕುರಿತು ಯಾವುದೇ ಸಲಹೆಗಳಿಗಾಗಿ ಕರೆಮಾಡಿ ನೇರವಾಗಿ ಮಾತನಾಡಬಹುದು. ಅದಕ್ಕಾಗಿ ನೀವು ಮಾಡಬಹುದಾದ ನಿಲಯದ ದೂರವಾಣಿ ಸಂಖ್ಯೆ: 8296725912, 0821-2546563
ಜೆಎಸ್‍ಎಸ್ ರೇಡಿಯೋವನ್ನು ಪ್ಲೇಸ್ಟೋರ್‍ನಲ್ಲಿ ಲಭ್ಯವಿರುವ ಆ್ಯಪ್ ಮೂಲಕ ವಿಶ್ವದ ಯಾವುದೇ ಮೂಲೆಯಲ್ಲಾದರು ಆಲಿಸಬಹುದು.














