ಮನೆ ಕಾನೂನು ಆದಿಪುರುಷ್ ರೀತಿ ಕುರಾನ್ ಚಿತ್ರ ಮಾಡಿನೋಡಿ: ಅಲಹಾಬಾದ್ ಹೈಕೋರ್ಟ್

ಆದಿಪುರುಷ್ ರೀತಿ ಕುರಾನ್ ಚಿತ್ರ ಮಾಡಿನೋಡಿ: ಅಲಹಾಬಾದ್ ಹೈಕೋರ್ಟ್

0

ಅಲಹಾಬಾದ್: ರಾಮಾಯಣದ ಪಾತ್ರಗಳನ್ನು ಅತ್ಯಂತ ಅವಹೇಳನಕಾರಿಯಾಗಿ ಚಿತ್ರಿಸಿರುವ ‘ಆದಿಪುರುಷ್’ ಚಿತ್ರ ತಂಡದ ವಿರುದ್ಧ ಹರಿಹಾಯ್ದಿರುವ ಅಲಹಾಬಾದ್ ಹೈಕೋರ್ಟ್, ಒಂದು ವೇಳೆ ಇದೇ ರೀತಿಯಲ್ಲಿ ಕುರಾನ್ ಅನ್ನು ಚಿತ್ರಿಸಿದ್ದರೆ ಪರಿಸ್ಥಿತಿ ಏನಾಗಬಹುದಿತ್ತು ಎಂಬುದನ್ನು ಊಹಿಸಿ ಎಂದು ತೀಕ್ಷ್ಣವಾಗಿ ಹೇಳಿದೆ.

Join Our Whatsapp Group

ಅಲ್ಲದೇ ರಾಮಾಯಣ, ಕುರಾನ್, ಮತ್ತು ಬೈಬಲ್ ಗ್ರಂಥಗಳ ಮೇಲೆ ಜನರ ಧಾರ್ಮಿಕ ಭಾವನೆಗಳಿಗೆ ಅಡ್ಡಿಪಡಿಸುವ ರೀತಿಯಲ್ಲೇ ಚಿತ್ರ ನಿರ್ಮಿಸುವುದಾದರೂ ಏಕೆ ಎಂದು ಪ್ರಶ್ನಿಸಿದೆ.

ವಿವಾದಿತ ಚಿತ್ರವನ್ನು ನಿಷೇಧಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ಕುರಿತು ಬುಧವಾರ ವಿಚಾರಣೆ ನಡೆಸಿದ ನ್ಯಾಯಪೀಠ, ಚಿತ್ರ ನಿರ್ಮಾತೃಗಳಿಗೆ ಕೇವಲ ಹಣ ಮುಖ್ಯವಾಗಿರುತ್ತದೆ. ನೀವುಗಳು ಕುರಾನ್, ಬೈಬಲ್, ಯಾವುದನ್ನು ಮುಟ್ಟಬೇಡಿ. ಯಾವುದೇ ಧರ್ಮಗಳ ಕುರಿತಾಗಿ ಕೆಟ್ಟದಾರಿ ತೋರಿಸಬೇಡಿ. ಕೋರ್ಟ್ ಗೆ ಯಾವುದೇ ಧರ್ಮ ಇಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಒಂದು ವೇಳೆ ನೀವು ಕುರಾನ್ ಬಗ್ಗೆ ಸಣ್ಣದೊಂದು ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದರೂ ದೇಶದಲ್ಲಿ ಎಷ್ಟು ದೊಡ್ಡ ಕಾನೂನು ತೊಡಕು ಉಂಟಾಗುತ್ತಿತ್ತು. ಹಿಂದೂಗಳು ಸಹಿಸಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಇಂತಹ ಅಪರಾಧವನ್ನು ಸಿನಿಮಾ ನಿರ್ಮಾತೃಗಳು ಮಾಡಬಾರದು ಇಂತಹ ಅಪರಾಧವನ್ನು ಸಿನಿಮಾ ನಿರ್ಮಾತೃಗಳು ಮಾಡಬಾರದು. ಆದಿ ಪುರುಷ ಸಿನಿಮಾದಲ್ಲಿ ಹಲವಾರು ಜನ ಪೂಜಿಸುವ ರಾಮ, ಸೀತೆ, ಲಕ್ಷ್ಮಣ, ಆಂಜನೇಯ ದೇವತೆಗಳನ್ನು ಅತ್ಯಂತ ಕೆಟ್ಟದಾಗಿ ತೋರಿಸಲಾಗಿದೆ. ಚಿತ್ರದ ನಿಷೇಧಕ್ಕೆ ಅರ್ಜಿ ಸಲ್ಲಿಸಿರುವವರೆಲ್ಲಾ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಹೇಳಿದ್ದಾರೆ ಎಂದು ಕೋರ್ಟ್ ಹೇಳಿದೆ.

ಅಲ್ಲದೇ ನಾವು ಸುಮ್ಮನಿರಲು ಸಾಧ್ಯವಿಲ್ಲ. ಇತ್ತೀಚಿಗೆ ಸಿನಿಮಾವೊಂದರಲ್ಲಿ ಶಿವ ತ್ರಿಶೂಲ ಹಿಡಿದು ಓಡುವುದ್ನು ಕೆಟ್ಟದಾಗಿ ತೋರಿಸಲಾಗಿತ್ತು. ಈ ರಾಮಾಯಣದ ಪಾತ್ರಗಳಿಗೆ ಅವಮಾನ ಮಾಡಲಾಗಿದೆ. ಹೀಗೆ ಹಾಸ್ಯಸ್ಪದವಾಗಿ ಸಿನಿಮಾ ತಯಾರು ಮಾಡಿದರೂ ಕೂಡ ಕೋರ್ಟ್ ನೋಡುತ್ತಾ ಸುಮ್ಮನೆ ಕುಳಿತಿರಬೇಕೆ ಎಂದು ಪ್ರಶ್ನಿಸಿದೆ.