ಬೆಂಗಳೂರು(Bengaluru): ದೇಶದ ಸಂಪತ್ತನ್ನ ಕಾಂಗ್ರೆಸ್ಸಿಗರು ಲೂಟಿ ಮಾಡಿದ್ದಾರೆ. ಇದಕ್ಕೆ ರಮೇಶ್ ಕುಮಾರ್ ಹೇಳಿಕೆ ಸಾಕ್ಷಿ. ಆದ್ದರಿಂದ ಕಾಂಗ್ರೆಸ್ಸಿಗರು ದೇಶದ ಜನರ ಕ್ಷಮೆಯಾಚಿಸಬೇಕೆಂದು ಗೃಹ ಸಚಿವ ಅರಗ ಜ್ಞಾನೇಂದ್ರ ಒತ್ತಾಯಿಸಿದ್ದಾರೆ.
ಮೂರ್ನಾಲ್ಕು ತಲೆಮಾರಿಗಾಗುವಷ್ಟು ಮಾಡಿಕೊಂಡಿದ್ದೇವೆ ಎಂಬ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ರಮೇಶ್ ಕುಮಾರ್ ಆಗಾಗ ಇಂತಹ ಸತ್ಯ ಹೇಳುತ್ತಾರೆ. ಸತ್ಯ ಹೇಳೋಕೆ ರಮೇಶ್ ಕುಮಾರ್ ಗೆ ಮಾತ್ರ ಸಾಧ್ಯ ಎಂದು ಹೇಳಿದರು.
ಈ ದೇಶ ಲೂಟಿ ಆಗೋಕೆ ಕಾಂಗ್ರೆಸ್ ಕಾರಣ. ತಲೆಮಾರುಗಟ್ಟಲೇ ಲೂಟಿ ಮಾಡಿದ ಹಣವನ್ನ ಖಜಾನೆಗೆ ತುಂಬಿಸಬೇಕು ಎಂದರು.