ಮನೆ ಅಪರಾಧ ಗುಡಿಸಲಿನ ಮೇಲೆ ಹರಿದ ಲಾರಿ: ಕರ್ನಾಟಕ ಮೂಲಕ ಮೂವರ ಸಾವು

ಗುಡಿಸಲಿನ ಮೇಲೆ ಹರಿದ ಲಾರಿ: ಕರ್ನಾಟಕ ಮೂಲಕ ಮೂವರ ಸಾವು

0

ತೆಲಂಗಾಣ: ರಸ್ತೆ ಬದಿಯಿದ್ದ ಗುಡಿಸಲಿನ ಮೇಲೆ ಲಾರಿ ಹರಿದ ಪರಿಣಾಮ ನಿದ್ದೆಯಲ್ಲಿದ್ದ ಕರ್ನಾಟಕ ಮೂಲದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ  ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಹೊರವರ್ತುಲ ರಸ್ತೆಯಲ್ಲಿ ನಡೆದಿದೆ.

ಬಾಬು ರಾಠೋಡ್, ಕಮಲಿಬಾಯ್ ಮತ್ತು ಬಸಪ್ಪ ರಾಠೋಡ್ ಮೃತರೆಂದು ತಿಳಿದುಬಂದಿದೆ.

ಪಟಾಣ್ ಚೆರು ಕಡೆಯಿಂದ ಗಚ್ಚಿಬೌಳಿ ಮಾರ್ಗವಾಗಿ ಹರಿಯಾಣದಿಂದ ಚಿತ್ತೂರಿಗೆ ತೆರಳುತ್ತಿದ್ದ ಲಾರಿ ಸಂಗಾರೆಡ್ಡಿ ಜಿಲ್ಲೆಯ ಹೊರವರ್ತುಲ ರಸ್ತೆಯ ಕೊಲ್ಲೂರಿನಲ್ಲಿ ಬೆಳಗಿನ ಜಾವ 4 ಗಂಟೆಗೆ ಗುಡಿಸಲಿನ ಮೇಲೆ ಹರಿದಿದೆ.  ಇದರಿಂದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದರು.

ಹೊರ ವರ್ತುಲ ರಸ್ತೆಯುದ್ದಕ್ಕೂ ಇರುವ ಗಿಡಗಳಿಗೆ ನೀರುಣಿಸಲು ಕರ್ನಾಟಕದ ಮೂಲದ ಕೆಲವರು ಎಚ್‌’ಎಂಡಿಎ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಕೊಲ್ಲೂರು ಜಂಕ್ಷನ್ ಬಳಿ ರಿಂಗ್ ರಸ್ತೆ ಮತ್ತು ಸವೀಸ್​ ರಸ್ತೆ ಪಕ್ಕ ತಾತ್ಕಾಲಿಕ ಗುಡಿಸಲುಗಳಲ್ಲಿ ಇವರೆಲ್ಲರೂ ವಾಸಿಸುತ್ತಿದ್ದಾರೆ. ಲಾರಿ ರಿಂಗ್​ ರಸ್ತೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಗುಡಿಸಲಿನ ಮೇಲೆ ಹರಿದಿದೆ.

ಮಿಯಾಪುರ ಎಸಿಪಿ ನರಸಿಂಹರಾವ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಅಪಘಾತ ಸ್ಥಳದಲ್ಲಿ ಲಾರಿ ಅರ್ಧ ಕಿಲೋಮೀಟರ್‌ಗೂ ಹೆಚ್ಚು ದೂರ ಕಂಬಿಬೇಲಿಯನ್ನು ನಾಶ ಮಾಡಿದೆ. ಅತಿಯಾದ ವೇಗ ಮತ್ತು ಚಾಲಕನ ನಿದ್ದೆಯೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹಿಂದಿನ ಲೇಖನಆರ್ಥಿಕ ಬಿಕ್ಕಟ್ಟು, ಯುದ್ಧಗಳು, ಜಾಗತಿಕ ಆಡಳಿತಗಳು ವಾಸ್ತುಶಿಲ್ಪದ ಉದ್ದೇಶಗಳನ್ನು ಸಾಧಿಸುವಲ್ಲಿ ವಿಫಲ: ಪ್ರಧಾನಿ ಮೋದಿ
ಮುಂದಿನ ಲೇಖನರಾಮನಗರ ನೂತನ ಜಿಲ್ಲಾ ಆಸ್ಪತ್ರೆ ಉದ್ಘಾಟನೆ: ಜೆಡಿಎಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ