ಮನೆ ರಾಜ್ಯ ಬೆಂಗಳೂರಿನ ಫ್ಲಾಟ್ ನಲ್ಲಿ ಕಂತೆ ಕಂತೆ ನೋಟುಗಳು ಪತ್ತೆ

ಬೆಂಗಳೂರಿನ ಫ್ಲಾಟ್ ನಲ್ಲಿ ಕಂತೆ ಕಂತೆ ನೋಟುಗಳು ಪತ್ತೆ

0

ಬೆಂಗಳೂರು: ಆತ್ಮಾನಂದ ಕಾಲೋನಿಯ ಫ್ಲಾಟ್​ ನಲ್ಲಿ ಬರೊಬ್ಬರಿ 23 ಬಾಕ್ಸ್ ​ಗಳಲ್ಲಿ 500 ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ.

ಕಾರಿನಲ್ಲಿ ಹಣ ಸಾಗಾಟ ಮಾಡಲು ತಯಾರಾಗಿತ್ತು ಎಂದು ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಪೊಲೀಸ್ ಸಿಬ್ಬಂದಿಗಳ ಭದ್ರತೆಯಲ್ಲಿ ಐಟಿ ಅಧಿಕಾರಿಗಳು ಏಕಕಾಲದಲ್ಲಿ ಆರ್​ ಟಿ ನಗರದ ಎರಡು ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.

ಆತ್ಮಾನಂದ ಕಾಲೋನಿಯ ಒಂದು ಫ್ಲಾಟ್​ನ ಕೊಠಡಿಯೊಂದರ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಮಂಚದಡಿ ಪರಿಶೀಲನೆ ನಡೆಸಿದಾಗ ಕೋಟ್ಯಾಂತರ ರೂಪಾಯಿ ಪತ್ತೆಯಾಗಿದೆ.

ಗಣೇಶ ಬ್ಲಾಕ್​ನಲ್ಲಿರುವ ವಾರ್ಡ್ ನಂ 95ರ ಮಾಜಿ ಕಾರ್ಪೊರೇಟರ್ ಅಶ್ವತಮ್ಮ ಹಾಗೂ ಆರ್.ಅಂಬಿಕಾಪತಿ ದಂಪತಿಗಳ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿ ವಿಚಾರಣೆ ನಡೆಸುತ್ತಿದ್ದಾರೆ.

ಸದ್ಯ, ಫ್ಲಾಟ್ ​ನಲ್ಲಿ ಪತ್ತೆಯಾದ ಕೋಟ್ಯಾಂತರ ರೂಪಾಯಿ ಯಾರಿಗೆ ಸೇರಿದ್ದು, ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಸಲಿಗೆ ಹಣ ಪತ್ತೆಯಾದ ಫ್ಲ್ಯಾಟ್ ಯಾರದ್ದು? ಗುಟ್ಟು ಬಿಟ್ಟು ಕೊಡದ ಐಟಿ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ.

ಫ್ಲಾಟ್ ​ನ ಬೆಡ್ ರೂಮ್ ​ನ ರೂಮ್ ​ವೊಂದರ ಮಂಚದ ಅಡಿಯಲ್ಲಿ ಹಣ ಬಚ್ಚಿಟ್ಟ ಬಗ್ಗೆ ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಈ ರೂಮ್​ ಅನ್ನು ಬಳಸುತ್ತಾ ಇರಲಿಲ್ಲ, ಬೀಗ ಹಾಕಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಕಾಂಟ್ರಾಕ್ಟರ್ ಆಗಿರುವ ಆರ್.ಅಂಬಿಕಾಪತಿ ಕೆಂಪಣ್ಣ ಅವರ ಕಾಂಟ್ರಾಕ್ಟರ್ ಸಂಘದಲ್ಲಿ ಗುರುತಿಸಿಕೊಂಡಿದ್ದರು. ಫ್ಲಾಟ್ ​ನಲ್ಲಿ ಸಿಕ್ಕ ಹಣದ ಹಿಂದೆ ಐಟಿಗೆ ದೊಡ್ಡ ಅನುಮಾನ ವ್ಯಕ್ತವಾಗಿದೆ.