ಮನೆ ರಾಜಕೀಯ ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ: ಸುಗಮ ಕಲಾಪಕ್ಕೆ ವಿಪಕ್ಷಗಳಿಗೆ ಪ್ರಧಾನಿ ಮೋದಿ ಮನವಿ

ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ: ಸುಗಮ ಕಲಾಪಕ್ಕೆ ವಿಪಕ್ಷಗಳಿಗೆ ಪ್ರಧಾನಿ ಮೋದಿ ಮನವಿ

0

ನವದೆಹಲಿ: ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಬಜೆಟ್ ಅಧಿವೇಶನಕ್ಕೆ ಎಲ್ಲರೂ ಸಹಕಾರ ನೀಡುವ ವಿಶ್ವಾಸವಿದ್ದು, ವಿಪಕ್ಷಗಳು ಸುಗಮ ಕಲಾಪ ನಡೆಸಲು ಅವಕಾಶ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ಸಂಸತ್ ಭವನದ ಬಳಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,  ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ ಬಜೆಟ್ ಮಂಡನೆ ಕೇವಲ ಆರ್ಥಿಕ ಬೆಳವಣಿಗೆ ಅಲ್ಲ. ಕಲಾಪದಲ್ಲಿ ಕೊರೋನಾ ಲಸಿಕೆ, ಆರೋಗ್ಯದ  ಬಗ್ಗೆ ಹೆಚ್ಚು ಪ್ರಸ್ತಾಪ ಮಾಡುತ್ತೇವೆ. ಎಲ್ಲ ಸಂಸದರಿಗೂ ಚರ್ಚಿಸುವುದಕ್ಕೆ ಅವಕಾಶವಿದೆ ಎಂದರು.

ಕೊರೊನಾ ಕಾಲದ ಈ ಬಜೆಟ್ ಮಹತ್ವದದ್ದು ಅಧಿವೇಶನದಲ್ಲಿ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ.  ಆರ್ಥಿಕ ಅಭಿವೃದ್ದಿಯ ಬಗ್ಗೆ ಬಜೆಟ್ ಇರಲಿದೆ.  ಅಧೀವೇಶನ ಶಾಂತಿಯುತವಾಗಿ ನಡೆಯಬೇಕು. ಸಂಸದರು ತಪ್ಪದೆ ಬಜೆಟ್ ಅಧಿವೇಶನಕ್ಕೆ ಹಾಜರಾಗಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿದರು.

ಹಿಂದಿನ ಲೇಖನಕಾನ್ಪುರದಲ್ಲಿ ಸರಣಿ ರಸ್ತೆ ಅಪಘಾತ; 6 ಮಂದಿ ಸಾವು
ಮುಂದಿನ ಲೇಖನಮನುಕುಲಕ್ಕೆ ಸಾಹಿತ್ಯದ ಬೆಳಕು ಚೆಲ್ಲಿದ ಬೇಂದ್ರೆ: ಮಡ್ಡಿಕೆರೆ ಗೋಪಾಲ್