ಒಮ್ಮೆ ವಿಶ್ವ ವಿಖ್ಯಾತ ಪಾಪ್ ರ್ ಸ್ಟಾರ್ ಕ್ಲಿಫ್ ರಿಚರನ್ನು ತಮ್ಮ ಜೀವನದಲ್ಲಾದ ಅತ್ಯಂತ ಹೃದಯಸ್ವರ್ಶಿ ಘಟನೆಯನ್ನು ಹಂಚಿಕೊಳ್ಳಬೇಕೆಂದು ಕೇಳಲಾಯಿತು.ಆಗ ಅವರು ಈ ಹಿಂದೆ ಬಾಂಗ್ಲಾದೇಶದ ಬಿಹಾರಿ ನಿರಾಶ್ರಿತರ ಶಿಬಿರಿವೂಂದಕ್ಕೆ ಹೋದಾಗ ನಡೆದ ಘಟನೆಯನ್ನು ತಿಳಿಸಿದರು.
ಮೊದಲು ದಿನ ಬೆಳಿಗ್ಗೆ ನಾನು ಕನಿಷ್ಠ ಒಂದು ಡಜನ್ ಬಾರಿ ಕೈಯನ್ನು ತೊಳೆದೆ.ಅಲ್ಲಿನ ಯಾವುದನ್ನೂ ಮುಟ್ಟುವ ಮನಸ್ಸು ನನಗಿರಲಿಲ್ಲ. ಅಲ್ಲಿನ ಜನರನ್ನೂ ಕೂಡ. ಆ ಶಿಬಿರಿಗಳಲ್ಲಿನ ಜನರು ಹಾಗೂ ಹಸುಗೂಸುಗಳು ಹುಣ್ಣು ಹಾಗೂ ವ್ರಣಗಳಿಂದ ಕೂಡಿದ್ದರು. ನಾನು ಛಾಯಾಚಿತ್ರಗಾರ ನನ್ನ ಚಿತ್ರ ತೆಗೆಯಲೆಂದು ಒಂದು ಸಣ್ಣ ಮಗುವಿನ ಬಳಿ ಬಗ್ಗುತ್ತಿದ್ದೆ. ಯಾರನ್ನು ಮುಟ್ಟಿಸಿಕೊಳ್ಳಬಾರದೆಂದು ಪ್ರಯತ್ನಿಸುತ್ತಿದ್ದೆ.ಅಚಾನಕ್ಕಾಗಿ ಯಾರೋ ಆ ಮಗುವಿನ ಬೆರಳಿನ ಮೇಲೆ ನಿಂತಿದ್ದನ್ನು ನೋಡಿದೆ ಮಗು ತಾಳಲಾರದ ನೋವಿನಿಂದ ಕಿರುಚಿತು. ಆಗ ನಾನು……
ಪ್ರಶ್ನೆಗಳು :
1. ಅವರು ಹೇಗೆ ಪ್ರತಿಕ್ರಿಸಿದರು?
2. ಈ ಕಥೆಯ ನೀತಿಯೇನು?
ಉತ್ತರಗಳು :
1. “ಮಗು ನೋವಿನಿಂದ ಕಿರಿಚಿತು. ಒಂದು ರೀತಿಯ ಪ್ರತಿಕ್ರಿಯೆಂಬಂತೆ ಕೂಡಲೇ ನಾನು ಮಗುವನ್ನು ಎತ್ತಿ ಹಿಡಿದುಕೊಂಡೆ.ಅದರ ಕೊಳಕು ಮತ್ತು ಹುಣ್ಣುಗಳನ್ನು ಮರೆತೆ. ಆ ಬೆಚ್ಚನೆಯ ಎಳೆಯ ದೇಹ ನನ್ನ ಮೇಲೆ ಜೋತು ಬಿದ್ದಿರುವುದು ಇನ್ನು ನೆನಪಿದೆ, ತಕ್ಷಣವೇ ಅದು ಅಳುವನ್ನು ನಿಲ್ಲಿಸಿತು. ಆ ಕ್ಷಣದಲ್ಲಿ ನಾನು ಪ್ರೀತಿಯ ಬಗ್ಗೆ ತಿಳಿಯಬೇಕಾಗಿರುವುದು ಬಹಳಷ್ಟಿದೆ ಎಂದು ಅರಿತೆ. ಈ ನಿಟ್ಟಿನಲ್ಲಿ ಆರಂಭವ ನ್ನಾದರೂ ಮಾಡಿದ್ದೇನೆಂದು ಸಂತೋಷಪಟ್ಟೆ ಆಶ್ಚರ್ಯ ಚಕಿತ ಮುಖದ ನನ್ನ ಭುಜದ ಮೇಲೆ ಆ ಮಗು ಇರುವ ಚಿತ್ರ ನನ್ನ ಅತ್ಯಅಮೂಲ್ಯವಾದ ಫೋಟೋಗಳಲ್ಲೊಂದು. ಅದನ್ನು ನೋಡದೆ ಅಥವಾ ನೆನಪಿಸಿಕೊಳ್ಳದೆ ಇರಲಾಗದಂತಿರಲು ಬೆಡ್ ರೂಮ್ ಹಾಗೂ ಬಚ್ಚಲು ಮನೆ ಮಧ್ಯೆ ಹಾಕಿದ್ದೇನೆ ”
2. ಪ್ರೀತಿಯು ಎಲ್ಲ ಜಾತಿ, ದೇಶ,ಜನಾಂಗ ಹಾಗೂ ಲಿಂಗವನ್ನು ಮೀರುತ್ತದೆ. ಅದಕ್ಕೆ ದೇಶ ಅಥವಾ ಜಾತಿ ಇಲ್ಲ.ಅದು ಜನರನ್ನು ಅವರ ಸಾಮಾಜಿಕ ಅಂತಸ್ತಿನ ಪ್ರಕಾರ ಅಳೆಯುವುದಿಲ್ಲ. ಯಾವ ತಡೆಯಿಲ್ಲದೆ ನಾವು ಪ್ರೀತಿಸುವುದನ್ನು ಕಲಿಯಬೇಕು. ಈ ವಿಶ್ವದಲ್ಲಿ ಯಾರು ಇನ್ನೊಬ್ಬರನ್ನು ಅವರ ರೋಗ ಅಥವಾ ಅನಿವಾರ್ಯ ದುಸ್ಥಿತಿಯನ್ನು ನೋಡಿ ಕಳೆಗಣಿಸಬಾರದು.ಅಂತಹ ಜನರಿಗೆ ತುಂಬು ಹೃದಯದ ಪ್ರೀತಿ, ಸುರಕ್ಷತೆಯ ಭಾವ ಹಾಗೂ ನೆರವು ನೀಡಿದರೆ ನಮಗೆ ಅಪಾರ ಸಂತೃಪ್ತಿ ಹಾಗೂ ಸಂತೋಷ ದೊರಕುತ್ತದೆ ಸಂತೋಷವೂ ಪ್ರೀತಿ ಹಾಗೂ ಸೇವೆಯ ನಿರ್ವಾಯಕ ಪ್ರತಿಫಲ.