ಒಬ್ಬ ಹುಡುಗ ಮತ್ತು ಹುಡುಗಿ ಪರಸ್ಪರ ಗಾಢವಾಗಿ ಪ್ರೀತಿಸುತ್ತಿದ್ದರು. ಅವರು ಎಲ್ಲ ಸಂದರ್ಭಗಳನ್ನು ಅಪಾರ ಉತ್ಸಾಹದಿಂದ ಆಚರಿಸುತ್ತಿದ್ದರು.ಅಷ್ಟರಲ್ಲೇ ಕ್ರಿಸ ಮಸ್ ಹಬ್ಬ ಸಮೀಪಿಸಿತು. ಇಬ್ಬರೂ ಬಹಳ ಬಡವರಾಗಿದ್ದರಿಂದ ಒಬ್ಬರು ಮತ್ತೊಬ್ಬರಿಗೆ ಕ್ರಿಸ್ ಮಸ್ ಉಡುಗೊರೆಗಳನ್ನು ನೀಡಲು ಶಕ್ತರಾಗಿರಲಿಲ್ಲ.ಆದರೂ ಏನಾದರೂ ಮಾಡಬೇಕೆಂದು ಅವರು ನಿರ್ಧರಿಸಿದರು.
ಆ ಹುಡುಗಿಯ ಬಳಿಯಿದ್ದ ಒಂದೇ ಒಂದು ಅಮೂಲ್ಯ ವಸ್ತುವೆಂದರೆ ಅವಳ ಉದ್ದನೆಯ ಬಂಗಾರದ ಬಣ್ಣದ ಕೂದಲು. ಹುಡುಗನ ಬಳಿ ಸವಕಾಲಾದ ಬೆಲ್ಟ್ ನ ಒಂದು ಕೈಗಡಿಯಾರವಿತ್ತು. ಹುಡುಗಿ ತನ್ನ ಬಂಗಾರದ ಬಣ್ಣದ ಕೂದಲು ಮಾರಿ ಅವನ ವಾಚಿಗೊಂದು ಹೊಸ ಬೆಲ್ಟ್ ಖರೀದಿಸಿದಳು. ಇತ್ತ ಈ ಹುಡುಗ ತನ್ನ ವಾಚನ್ನು ಮಾರಿ ಅವಳಿಗಾಗಿ ಸುಂದರವಾದ ಕೂದಲನ್ನು ಬಾಚಿಕೊಳ್ಳಲೆಂದು ಎರಡು ಬಾಚಣಿನಿಗೆಗಳನ್ನು ಕೊಂಡು ತಂದನು.
ಕ್ರಿಸ್ ಮಸ್ ದಿನ ಬಂದಾಗ ಅವರಿಬ್ಬರೂ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡು
ಜೀವನದ ವಿಪರ್ಯಾಸವೆನ್ನು ಕಂಡು ನಕ್ಕುಬಿಟ್ಟರು.
ಪ್ರಶ್ನೆಗಳು
1.ಜೀವನದ ವಿಪರ್ಯಾಸ ವೇನು?
2. ಈ ಕಥೆಯ ಪರಿಣಾಮವೇನು?
ಉತ್ತರಗಳು
1. ಬೆಲ್ಟ್ ಕಟ್ಟಲು ಕೈಗಡಿಯಾರಲಿಲ್ಲ ಮತ್ತು ಬಾಚಣಿಗೆಯನ್ನು ಬಳಸಲು ಕೂದಲೇ ಇರಲಿಲ್ಲ.
2.ಅವರಿಬ್ಬರೂ ಪ್ರೀತಿಗಾಗಿ ತಮ್ಮಲ್ಲಿದ್ದ ಅತ್ಯಮೂಲ್ಯ ವಸ್ತುಗಳನ್ನು ಮಾರಿಬಿಡಲು ಮುಂದಾದರು. ಅವರು ಪ್ರದರ್ಶಿಗಳ ಸ್ವಯಂ -ತ್ಯಾಗದ ಪ್ರೀತಿ ನಿಜಕ್ಕೂ ಬೆಲೆ ಕಟ್ಟಲಾಗದ ವಸ್ತುವಾಗಿದೆ. ಜನರು ಸಾಮಾನ್ಯವಾಗಿ ಐಹಿಕ ವಸ್ತುಗಳನ್ನೇ ಪರಸ್ಪರ ಉಡುಗೊರೆಯಾಗಿ ಕೊಡುತ್ತಾರೆ. ಆದರೆ ಸಹಜ ಪ್ರೀತಿಗಿಂತಲೂ ಮಿಗಿಲಾದ ಉಡುಗೊರೆ ಮತ್ತೊಂದಿಲ್ಲ .