ಮನೆ ಸ್ಥಳೀಯ ಹೆಚ್‌ಡಿಕೆ ಕುಟುಂಬದಿಂದ 200 ಎಕರೆ ಭೂಮಿ ಒತ್ತುವರಿ ಎಂ.ಲಕ್ಷ್ಮಣ್ ಆರೋಪ: ಹೆಚ್‌ಡಿಕೆ ವಿರುದ್ಧ ಬಿಜೆಪಿ ಪ್ರತಿಭಟಿಸಲು...

ಹೆಚ್‌ಡಿಕೆ ಕುಟುಂಬದಿಂದ 200 ಎಕರೆ ಭೂಮಿ ಒತ್ತುವರಿ ಎಂ.ಲಕ್ಷ್ಮಣ್ ಆರೋಪ: ಹೆಚ್‌ಡಿಕೆ ವಿರುದ್ಧ ಬಿಜೆಪಿ ಪ್ರತಿಭಟಿಸಲು ಆಗ್ರಹ

0

ಮೈಸೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಬಿಡದಿಯ ಕೇತುಗಾನಹಳ್ಳಿಯಲ್ಲಿ ೨೦೦ ಎಕರೆ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದರು.

ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಮುಡಾ ಕೊಟ್ಟಿರುವ ೧೪ ನಿವೇಶನಗಳ ವಿಚಾರವಾಗಿ ಬಿಜೆಪಿಯವರು ದೊಡ್ಡ ಆಂದೋಲನ ಮಾಡಿದರು. ಈಗ ಎಚ್.ಡಿ.ಕುಮಾರಸ್ವಾಮಿ ಅವರ ಕುಟುಂಬ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದಾಖಲೆ ಹೇಳುತ್ತಿದೆ. ಯಾವಾಗ ಹೋರಾಟ ಆರಂಭಿಸುತ್ತೀರಿ ಎಂದು ಪ್ರಶ್ನಿಸಿದರು.

೨೦೦೨ರಲ್ಲಿ ಸಂಪತ್ತು ಎಂಬ ವ್ಯಕ್ತಿ ಅಕ್ರಮದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದರು. ವರದಿ ಪ್ರಕಾರ ೮.೩೦ ಗುಂಟೆ ಒತ್ತುವರಿ ಆಗಿದೆ ಎಂದು ಲೋಕಾಯುಕ್ತಾ ವರದಿಯಲ್ಲಿ ಉಲ್ಲೇಖವಿದೆ. ೨೦೦೯ರಲ್ಲಿ ತನಿಖಾ ವರದಿ ಮುಕ್ತಾಯವಾಗುತ್ತದೆ. ಆದರೂ ಒತ್ತುವರಿ ಜಾಗವನ್ನು ವಾಪಸ್ ತೆಗೆದುಕೊಳ್ಳುವ ಕೆಲಸವನ್ನ ಅಂದಿನ ಬಿಜೆಪಿ ಸರ್ಕಾರ ಮಾಡೋದಿಲ್ಲ. ೨೦೧೧ರಲ್ಲಿ ಸಂಪತ್ತು ಮತ್ತೊಮ್ಮೆ ದೂರು ಸಲ್ಲಿಸುತ್ತಾರೆ.

೨೦೧೪ರಲ್ಲಿ ಕಂದಾಯ ಇಲಾಖೆಗೆ ಲೋಕಾಯುಕ್ತ ಸೂಚನೆ ನೀಡುತ್ತದೆ. ಹಿರಿಯ ಹೋರಾಟಗಾರ ಎಸ.ಆರ್ ಹೀರೇಮಠ್ ಅವರು ಹೈಕೋರ್ಟ್ ನಲ್ಲಿ ಕಾನೂನು ಹೋರಾಟಕ್ಕೆ ಇಳಿಯುತ್ತಾರೆ. ೨೦೨೦ ರಂದು ಸಮಾಜ ಪರಿವರ್ತನಾ ಸಮಾಜ ಉಚ್ಚ ನ್ಯಾಯಾಲಯದಲ್ಲಿ ಕಂಟೆಪ್ಟ್ ಮೂವ್ ಮಾಡುತ್ತಾರೆ. ಕೇತಾಗನಹಳ್ಳಿಯಲ್ಲಿ ೨೦೦ ಎಕರೆ ಭೂಮಿಯನ್ನ ಎಚ್.ಡಿ ಕುಮಾರಸ್ವಾಮಿ ಮತ್ತು ಅವರ ಕುಟುಂಬ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದೆ ಎಂದು ವರದಿ ಹೇಳುತ್ತದೆ ಎಂದು ವಿವರಿಸಿದರು.

ಮುಸ್ಲಿಮರಿಗೆ ಸರ್ಕಾರಿ ಕಾಮಗಾರಿಗಳಲ್ಲಿ ೪% ಮೀಸಲಾತಿ ವಿಚಾರವಾಗಿ ಮಾತನಾಡಿ, ಅಲ್ಪ ಸಂಖ್ಯಾತರು ಅಂದ್ರೆ ಕೇವಲ ಮುಸ್ಲಿಮರಲ್ಲ. ಕ್ರಿಶ್ಚಿಯನ, ಸಿಖ್, ಜೈನರು, ಬುದ್ಧಿಸ್ಟ್‌ಗಳು ಬರುತ್ತಾರೆ. ಒಟ್ಟು ಶೇ. ೪೩ ಮೀಸಲಾತಿಯನ್ನ ಗುತ್ತಿಗೆಯಲ್ಲಿ ಕೊಡಲಾಗಿದೆ. ಅದರಲ್ಲಿ ಎಸ್ಸಿ, ಎಸ್ಟಿ, ಒಬಿಸಿ, ಮೈನಾರಿಟೀಸ್ ಸೇರಿದೆ. ಮುಸ್ಲಿಮರು ಈ ದೇಶದವರಲ್ವಾ? ಎಸ್ಸಿ, ಎಸ್ಟಿ, ಮತ್ತು ಒಬಿಸಿಗೆ ಕೊಟ್ಟಿರುವ ಶೇ. ೪೩ ಅನ್ನು ರದ್ದು ಮಾಡಿಸುವ ಹುನ್ನಾರವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಹೇಳಿದರು.

ಬಂದ್ ಮುಂದೂಡಲು ಮನವಿ: ಮಾ. ೨೨ರ ಕರ್ನಾಟಕ ಬಂದ್ ಮುಂದೂಡಬೇಕು. ಈಗ ಎಸಎಸಎಲ್‌ಸಿ ಪರೀಕ್ಷೆಗಳು ನಡೆಯುತ್ತಿವೆ ವಿದ್ಯಾರ್ಥಿಗಳಿಗೆ ತೊಂದರೆ ಆಗೋದು ಬೇಡ. ಇನ್ನೊಂದು ದಿನ ಇಟ್ಟುಕೊಳ್ಳಿ ಅದಕ್ಕೆ ನಮ್ಮ ಬೆಂಬಲ ಕೂಡ ಇದೆ ಎಂದು ಹೋರಾಟಗಾರ ವಾಟಾಳ್ ನಾಗರಾಜ್ ಅವರಿಗೆ ಎಂ.ಲಕ್ಷ್ಮಣ್ ಮನವಿ ಮಾಡಿದರು.