ಮನೆ ಸುದ್ದಿ ಜಾಲ ಮದ್ದೂರು ಶಾಂತರಾಜು ರಾಜ್ಯ ಮಟ್ಟದ ಸಿಜಿಕೆ ರಂಗಪ್ರಶಸ್ತಿಗೆ ಆಯ್ಕೆ

ಮದ್ದೂರು ಶಾಂತರಾಜು ರಾಜ್ಯ ಮಟ್ಟದ ಸಿಜಿಕೆ ರಂಗಪ್ರಶಸ್ತಿಗೆ ಆಯ್ಕೆ

0
Oplus_131072

ಯಳಂದೂರು : ಕರ್ನಾಟಕ ರಂಗಪರಿಷತ್ ಕೇಂದ್ರ ಸಮಿತಿ ಬೆಂಗಳೂರು ಇವರ ೨೦೨೫-೨೬ ನೇ ಸಾಲಿನ ರಂಗ ಪರಿಷತ್ ನೀಡಲಾಗುವ ಸಿಜಿಕೆ ರಾಜ್ಯ ಪ್ರಶಸ್ತಿಗೆ ತಾಲೂಕಿನ ಮದ್ದೂರು ಗ್ರಾಮದ ರಂಗಭೂಮಿ ಕಲಾವಿದ ಎಸ್.ಶಾಂತರಾಜು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

೩೮ ವರ್ಷಗಳ ಕಾಲ ರಂಗಭೂಮಿ, ಜನಪದ ಮತ್ತು ಬೀದಿ ನಾಟಕ ಮುಖಾಂತರ ಗ್ರಾಮೀಣ ಮಟ್ಟದಲ್ಲಿ ಸಾಮಾಜಿಕ ಪೀಡುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದಾರೆ ಮತ್ತು ರಂಗದೇಗುಲ ಸಂಸ್ಥೆಯ ಮೂಲಕ ಹಲವಾರು ಕಲಾವಿದರಿಗೆ ದಾರಿ ದೀಪವಾಗಿ ರಂಗ ಪ್ರಯೋಗಳಗಳ ತರಭೇತಿ ನೀಡಿ ಹೊಸ ಪ್ರತಿಭೆಗಳನ್ನು ಬೆಳಕಿಗೆ ತಂದಿದ್ದಾರೆ -ನಾಡಿನ ಹಲವರು ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಅವಿರತವಾಗಿ ತಿಳಿಸುವ ಕೆಲಸವನ್ನು ನಿರಂತರವಾಗಿ ಮಾಡುವ ಮೂಲಕ ಶ್ರಮಿಸಿದ್ದಾರೆ. ಇವುಗಳನ್ನು ಗುರುರ್ತಿಸಿ ಈಗಾಗಲೇ ಕನ್ನಡ ಜನಪರಿಷತ್ ಪ್ರಶಸ್ತಿ, ಕಲಾರತ್ನ ಪ್ರಸಸ್ತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ಸಾಕಷ್ಟು ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ.

ಕರ್ನಾಟಕ ರಂಗ ಪರಿಷತ್ತು ವತಿಯಿಂದ ಜು.೨೭ ರ ಶುಕ್ರವಾರ ಚಾಮರಾಜನಗರ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರಲ್ಲಿ ರಾಜ್ಯ ಮಟ್ಟದ ಸಿಜಿಕೆ ರಂಗಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು ಎಂದು ಕರ್ನಾಟಕ ರಂಗ ಪರಿಷತ್ತು ಜಿಲ್ಲಾಧ್ಯಕ್ಷ ಉಮ್ಮತ್ತೂರು ಬಸವರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.