ಮನೆ ಅಪರಾಧ ಪಬ್ ಜಿ ಆಡದಂತೆ ತಡೆದದ್ದಕ್ಕೆ ತಾಯಿಯನ್ನೇ ಕೊಂದ ಮಗ

ಪಬ್ ಜಿ ಆಡದಂತೆ ತಡೆದದ್ದಕ್ಕೆ ತಾಯಿಯನ್ನೇ ಕೊಂದ ಮಗ

0

ಲಖನೌ: ನಿರಂತರವಾಗಿ ಪಬ್ ಜಿ ಆಡುತ್ತಿದ್ದ ಮಗನನ್ನು ತಡೆದ ತಾಯಿಯನ್ನು 16 ವರ್ಷದ ಮಗನೇ ಗುಂಡಿಕ್ಕಿ ಹತ್ಯೆ ಮಾಡಿರುವ ಧಾರುಣ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ.

ಬಾಲಕ ಪಬ್‌ಜಿ ಗೇಮ್ ವ್ಯಸನಿಯಾಗಿದ್ದ. ಪಬ್‌ಜಿ ಆಡದಂತೆ ಆತನ ತಾಯಿ ತಡೆಯುತ್ತಿದ್ದರು. ಹೀಗಾಗಿ ಆತ ತಂದೆಯ ಪಿಸ್ತೂಲ್‌ನಿಂದ ತಾಯಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಪೂರ್ವ ಲಖನೌ ಎಡಿಸಿಪಿ ಖಾಸಿಮ್ ಅಬಿದಿ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಪೊಲೀಸರು, ವಿಧಿವಿಜ್ಞಾನ ತಂಡವೂ ಸ್ಥಳಕ್ಕೆ ತೆರಳಿತ್ತು. ತನಿಖೆ ನಡೆಸಲಾಗಿದೆ. ಪಬ್‌ಜಿ ಆಡದಂತೆ ತಡೆದಿದ್ದಕ್ಕಾಗಿ 16ರ ಬಾಲಕ ತಾಯಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ ಎಂದು ತಿಳಿಸಿದ್ದಾರೆ.

ಬಾಲಕ ಸುಳ್ಳು ಕಥೆ ಹೇಳಿ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದ. ಆದರೆ ಬಾಲಕನನ್ನು ವಶಕ್ಕೆ ಪಡೆದಿದ್ದೇವೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ  ಎಂದು ಅವರು ತಿಳಿಸಿದ್ದಾರೆ.

ಹಿಂದಿನ ಲೇಖನರಾಜ್ಯದಲ್ಲಿ ಮುಂಗಾರು ದುರ್ಬಲ: 3 ದಿನದ ಬಳಿಕ ಮಳೆ ಬಿರುಸು ಪಡೆಯುವ ಸಾಧ್ಯತೆ
ಮುಂದಿನ ಲೇಖನಪ್ರತ್ಯೇಕ ಪ್ರಕರಣ: ದೇಹದ ಅರ್ಧಭಾಗ ಕತ್ತರಿಸಿದಂತೆ ಇಬ್ಬರು ಮಹಿಳೆಯರ ಶವ ಪತ್ತೆ