ಮನೆ ಸುದ್ದಿ ಜಾಲ ಮಡಿಕೇರಿ: ಹಾಡಹಗಲೇ ರಸ್ತೆಯಲ್ಲಿ ಸಂಚರಿಸುತ್ತಿರುವ ಹುಲಿ- ಎರಡು ಹಸು ಬಲಿ

ಮಡಿಕೇರಿ: ಹಾಡಹಗಲೇ ರಸ್ತೆಯಲ್ಲಿ ಸಂಚರಿಸುತ್ತಿರುವ ಹುಲಿ- ಎರಡು ಹಸು ಬಲಿ

0

ಮಡಿಕೇರಿ : ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿಗೆ ಎರಡು ಹಸುಗಳು ಬಲಿಯಾಗಿವೆ. ಮಾತ್ರವಲ್ಲದೇ ಹಾಡಹಗಲೇ ರಸ್ತೆಯಲ್ಲಿ ರಾಜಾರೋಷವಾಗಿ ಹುಲಿ ಸಂಚರಿಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಪೊನ್ನಂಪೇಟೆ ತಾಲೂಕಿನ ಹುದಿಕೇರಿಯ ಹೈಸೊಡ್ಕೂರು ಗ್ರಾಮದ ಕಳ್ಳೇಂಗಡ ಕುಶಾಲಪ್ಪ ಅವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿದೆ. ಮತ್ತೊಂದು ಪ್ರಕರಣದಲ್ಲಿ ಕುಂದ ಈಚೂರು ಗ್ರಾಮದ ಗುಮ್ಮಟ್ಟಿರ ದರ್ಶನ್‌ ನಂಜಪ್ಪ ಅವರಿಗೆ ಸೇರಿದ ಹಸುವನ್ನು ಹುಲಿ ಬಲಿ ಪಡೆದಿದೆ.

ಎರಡೂ ಗ್ರಾಮಗಳಿಗೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ತತ್‌’ಕ್ಷಣ ಪರಿಹಾರ ನೀಡಬೇಕು, ಹುಲಿ ಉಪಟಳ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸಿದ್ದಾರೆ.

ಪೊನ್ನಂಪೇಟೆ ತಾಲೂಕಿನ ಕಾನೂರು ಸಮೀಪ ಬ್ರಹ್ಮಗಿರಿ ಚೈನ್‌ ಗೇಟ್‌ ವ್ಯಾಪ್ತಿಯಲ್ಲಿ ಹುಲಿಯೊಂದು ಹಾಡಹಗಲೇ ರಸ್ತೆಯಲ್ಲಿ ಸಂಚರಿಸುತ್ತಿರುವ ದೃಶ್ಯ ಕಂಡು ಬಂದಿದೆ. ಸುತ್ತಮುತ್ತಲ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಹಿಂದಿನ ಲೇಖನಕಾರವಾರ: ಪತ್ನಿ ಕೊಂದು ಬ್ಯಾರೆಲ್’ನಲ್ಲಿಟ್ಟು ಕಾಡಿಗೆ ಎಸೆದಿದ್ದ ಪತಿಯ ಬಂಧನ
ಮುಂದಿನ ಲೇಖನಅಗ್ನಿಪಥ ಯೋಜನೆಯನ್ನು ಎತ್ತಿ ಹಿಡಿದ ದೆಹಲಿ ಹೈಕೋರ್ಟ್