ಮನೆ ಕಾನೂನು ಅಗ್ನಿಪಥ ಯೋಜನೆಯನ್ನು ಎತ್ತಿ ಹಿಡಿದ ದೆಹಲಿ ಹೈಕೋರ್ಟ್

ಅಗ್ನಿಪಥ ಯೋಜನೆಯನ್ನು ಎತ್ತಿ ಹಿಡಿದ ದೆಹಲಿ ಹೈಕೋರ್ಟ್

0

ನವದೆಹಲಿ: ಭಾರತೀಯ ಸೇನೆಗೆ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳುವ ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆಯನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ.

ದೇಶದ ಹಿತದೃಷ್ಟಿ ಮತ್ತು ಸಶಸ್ತ್ರ ಪಡೆಯನ್ನು ಬಲಪಡಿಸುವ ಉದ್ದೇಶದಿಂದ ಯೋಜನೆ ಜಾರಿಗ ತರಲಾಗಿದೆ ಎಂದು ಕೋರ್ಟ್ ಹೇಳಿದೆ.

ಯೋಜನೆಗೆ ಆಕ್ಷೇಪಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ, ನ್ಯಾಯಮೂರ್ತಿ ಸುಬ್ರಮಣಿಯನ್ ಪ್ರಸಾದ್ ಅವರನ್ನೊಳಗೊಂಡ ಪೀಠವು, ಈ ವಿಷಯದಲ್ಲಿ ಮಧ್ಯಪ್ರವೇಶಿಸುವ ಅಗತ್ಯ ಇಲ್ಲ ಎಂದು ಹೇಳಿದೆ.

ಕೆಲವು ಹಿಂದಿನ ಜಾಹೀರಾತುಗಳ ಅಡಿಯಲ್ಲಿ ಸಶಸ್ತ್ರ ಪಡೆಗಳಿಗೆ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಗಳನ್ನು ನ್ಯಾಯಾಲಯವು ವಜಾಗೊಳಿಸಿತು.

ಕಳೆದ ವರ್ಷ ಡಿಸೆಂಬರ್ 15ರಂದು ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.ಜೂನ್ 14, 2022ರಿಂದ ಅಗ್ನಿಪಥ ಯೋಜನೆ ಜಾರಿಗೆ ಬಂದಿದ್ದು, ಸಶಸ್ತ್ರ ಪಡೆಗಳಲ್ಲಿ ಯುವಕರ ನೇಮಕಾತಿಗಾಗಿ ನಿಯಮಗಳನ್ನು ಒಳಗೊಂಡಿದೆ.

ಈ ನಿಯಮಗಳ ಪ್ರಕಾರ, ಹದಿನೇಳುವರೆ ವರ್ಷದಿಂದ 21 ವರ್ಷ ವಯಸ್ಸಿನವರು ಅಗ್ನಿಪಥ ಯೋಜನೆಯಡಿ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅವರನ್ನು ನಾಲ್ಕು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಯೋಜನೆಯಡಿ ನೇಮಕವಾದದವರಲ್ಲಿ ಶೇಕಡ 25ರಷ್ಟು ಜನರನ್ನು ಮಾತ್ತ ಪರ್ಮನೆಂಟ್ ಮಾಡಿಕೊಳ್ಳಲಾಗುತ್ತದೆ ಎಂಬ ನಿಯಮವಿದೆ.

ಯೋಜನೆಯ ವಿರುದ್ಧ ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ವವು. ನಂತರ, ಸರ್ಕಾರವು ನೇಮಕಾತಿಯ ಗರಿಷ್ಠ ವಯೋಮಿತಿಯನ್ನು 23 ವರ್ಷಕ್ಕೆ ಹೆಚ್ಚಿಸಿತ್ತು.

ಹಿಂದಿನ ಲೇಖನಮಡಿಕೇರಿ: ಹಾಡಹಗಲೇ ರಸ್ತೆಯಲ್ಲಿ ಸಂಚರಿಸುತ್ತಿರುವ ಹುಲಿ- ಎರಡು ಹಸು ಬಲಿ
ಮುಂದಿನ ಲೇಖನವಾಟರ್​ ಹೀಟರ್’​​​ನಿಂದ ವಿದ್ಯುತ್​ ಪ್ರವಹಿಸಿ ತಾಯಿ, ಮಗು ಸಾವು