ಮನೆ ಅಪರಾಧ ಮಡಿಕೇರಿ: ಕ್ಷುಲ್ಲಕ ಕಾರಣಕ್ಕೆ ಯುವಕನ ಬರ್ಬರ ಹತ್ಯೆ

ಮಡಿಕೇರಿ: ಕ್ಷುಲ್ಲಕ ಕಾರಣಕ್ಕೆ ಯುವಕನ ಬರ್ಬರ ಹತ್ಯೆ

0

ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ನಡೆದಿದೆ.

ಮೃತ ಯುವಕನನ್ನು ಸಾಜಿದ್(22) ಎಂದು ಗುರುತಿಸಲಾಗಿದೆ. ಮೈಸೂರು ರಸ್ತೆಯಲ್ಲಿರುವ ಶ್ರೀನಿಧಿ ಎಂಬವರ ಸರ್ವಿಸ್ ಸ್ಟೇಷನ್ ನಲ್ಲಿ ಬೈಕ್ ಸರ್ವಿಸ್​ ಮಾಡಲೆಂದು ಸಾಜೀದ್ ಬಂದಿದ್ದನು. ಈ ವೇಳೆ ಇಬ್ಬರ ನುಡವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ.

ಈ ವೇಳೆ ಕೋಪಗೊಂಡ ಶ್ರೀನಿಧಿ ಹರಿತವಾದ ಆಯುಧದಿಂದ ಸಾಜಿದ್ ​ಗೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸಾಜಿದ್​ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕುಶಾಲನಗರ ಟೌನ್ ಠಾಣಾ ಪೊಲೀಸರು ಆರೋಪಿ ಶ್ರೀನಿಧಿನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಹಿಂದಿನ ಲೇಖನಅಕ್ರಮ ಹಣ ವರ್ಗಾವಣೆ: ದೆಹಲಿ ಸಿಎಂ ಆಪ್ತ ಕಾರ್ಯದರ್ಶಿ, ಕೆಲವು ನಾಯಕರ ಮನೆ ಮೇಲೆ ಇಡಿ ದಾಳಿ
ಮುಂದಿನ ಲೇಖನಜಿಲ್ಲಾಧಿಕಾರಿ ಸಂಧಾನ ಸಭೆ ಯಶಸ್ವಿ, ಸಮಾನ ಮನಸ್ಕರ ವೇದಿಕೆ ಕರೆ ನೀಡಿದ್ದ ‘ಮಂಡ್ಯ ಬಂದ್’ ವಾಪಸ್’