ಮಡಿಕೇರಿ(Madikeri): ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದರೂ ಭೂಕುಸಿತ ಮುಂದುವರೆದಿದೆ.
ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ ಹೋಬಳಿಯ ಊರುಗುತ್ತಿಯಲ್ಲಿ ಗುರುವಾರ ವೆಂಕಟೇಶ್ ಎಂಬುವವರಿಗೆ ಸೇರಿದ ತೋಟದಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಕುಸಿತವಾಗಿದೆ. ಭಾರಿ ಪ್ರಮಾಣದಲ್ಲಿ ನೀರು ನೆಲದಿಂದ ಉಕ್ಕಿ ಹರಿಯುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಇದರಿಂದ ಕಾಫಿ ಗಿಡಗಳೂ ಸೇರಿದಂತೆ ಮಣ್ಣು, ಕಲ್ಲುಗಳು ಕೊಚ್ಚಿಕೊಂಡು ಹೋಗಿವೆ.
ಮಂಚಳ್ಳಿ–ಕುಟ್ಟ ರಸ್ತೆಯಲ್ಲೂ ಭೂಮಿ ಕುಸಿದಿದೆ. ಬಿರುನಾಣಿ– ಹುದಿಕೇರಿ ರಸ್ತೆಯಲ್ಲೂ ಮಣ್ಣು ಕುಸಿಯುತ್ತಿದೆ. ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ಲು ಗ್ರಾಮದ ರಾಜು ಎಂಬುವವರಿಗೆ ಸೇರಿದ ಹಸು ಶೀತಗಾಳಿಯಿಂದ ಮೃತಪಟ್ಟಿದೆ.
Saval TV on YouTube