ಮನೆ ದೇವರನಾಮ ರಾಯಬಾರೊ ತಂದೆತಾಯಿ ಬಾರೊ

ರಾಯಬಾರೊ ತಂದೆತಾಯಿ ಬಾರೊ

0

(ಶ್ರೀ ಜಗನ್ನಾಥ ದಾಸರು)

ರಾಗಆನಂದಭೈರವಿ    

  ತಾಳಏಕತಾಳ

ರಾಯಬಾರೊ ತಂದೆತಾಯಿ ಬಾರೊ

ನಮ್ಮ ಕಾಯಿ ಬಾರೊ

ಮಾಯಿಗಳ ಮರ್ದಿಸಿದ ರಾಘವೇಂದ್ರ || ಪ ||

ವಂದಿಪ ಜನರಿಗೆ ಮಂದಾರ ತರುವಂತೆ

ಕುಂದದಭೀಷ್ಟೆಯ ಸಲಿಸುತಿಪ್ಪ ಸುರಮುನಿ

ಮಂದನ ಮತಿಗೆ ರಾಘವೇಂದ್ರ || ೧ ||

ಭಾಸುರಚರಿತನೆ ಭೂಸುರವಂದ್ಯನೆ

ಶ್ರೀಸುಧೀಂದ್ರಾರ್ಯರ ವರಪುತ್ರನೆನಿಸಿದ

ದೇಶಿಕರೊಡೆಯ ರಾಘವೇಂದ್ರ || ೨ ||

ರಾಮಪದಸರಸೀರುಹಭೃಂಗ ಕೃಪಾಂಗ

ಭ್ರಾಮಕಜನರ ಮತಭಂಗ ಮಾಡಿದ

ಧೀಮಂತರೊಡೆಯನೆ ರಾಘವೇಂದ್ರ || ೩ ||

ಆರು ಮೂರೇಳು ನಾಲ್ಕೆಂಟು ಗ್ರಂಥಸಾರಾರ್ಥ

ತೋರಿಸಿದೆ ಸರ್ವರಿಗೆ ಸರ್ವಜ್ಞ

ಸೂರಿಗಳರಸನೆ ರಾಘವೇಂದ್ರ || ೪ ||

ಭೂತಳನಾಥನ ಭೀತಿಯ ಬಿಡಿಸಿದೆ

ಪ್ರೇತತ್ವ ಕಳೆದೆ ಮಹಿಷಿಯ ಶ್ರೀಜಗ-

ನ್ನಾಥವಿಠಲನ ಪ್ರೀತಿಪಾತ್ರ ರಾಘವೇಂದ್ರ || ೫ ||

ಹಿಂದಿನ ಲೇಖನಪಿಎಫ್’ಐ ನಿಷೇಧ ಸ್ವಾಗತಾರ್ಹ: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಮುಂದಿನ ಲೇಖನಈ ಯೋಗಾಸನಗಳು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತವೆ