ಮನೆ ರಾಜಕೀಯ ಮಧ್ಯಪ್ರದೇಶದಲ್ಲಿ ಮದ್ಯದ ದರ ಇಳಿಕೆ: ಮನೆಯಲ್ಲಿ ಮಿನಿಬಾರ್ ಗೆ ಅವಕಾಶ

ಮಧ್ಯಪ್ರದೇಶದಲ್ಲಿ ಮದ್ಯದ ದರ ಇಳಿಕೆ: ಮನೆಯಲ್ಲಿ ಮಿನಿಬಾರ್ ಗೆ ಅವಕಾಶ

0
ಸಾಂದರ್ಭಿಕ ಚಿತ್ರ

ಭೋಪಾಲ್: ನೂತನ ಅಬಕಾರಿ ನೀತಿ 2022–23ಕ್ಕೆ ಅನುಮೋದನೆ ನೀಡಿರುವ ಮಧ್ಯ ಪ್ರದೇಶ ಸರ್ಕಾರ, ಮದ್ಯದ ದರದಲ್ಲಿ ಇಳಿಕೆ ಮಾಡಲು ನಿರ್ಧರಿಸಿದ್ದು, ಮನೆಯಲ್ಲಿಯೇ ಮಿನಿ ಬಾರ್ ಹೊಂದಲು ಅವಕಾಶ ಕಲ್ಪಿಸಿದೆ.

ಮಂಗಳವಾರ ನಡೆದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮದ್ಯದ ದರದಲ್ಲಿ ಶೇ 20ರವರೆಗೆ ಇಳಿಕೆ ಮಾಡಲಿದೆ.ಎಲ್ಲ ವಿಮಾನ ನಿಲ್ದಾಣಗಳಲ್ಲಿ ಮದ್ಯ ಮಾರಾಟ ಮಳಿಗೆ ಮತ್ತು ನಾಲ್ಕು ದೊಡ್ಡ ನಗರಗಳ ಆಯ್ದ ಸೂಪರ್‌ ಮಾರ್ಕೆಟ್‌ಗಳಲ್ಲಿ ಮದ್ಯ ಮಳಿಗೆ ತೆರೆಯಲು ಅನುಮತಿಯ ಜತೆಗೆ ಮನೆಯಲ್ಲಿಯೇ ಮಿನಿ ಬಾರ್ ಹೊಂದಲು ಅಲ್ಲಿನ ಸರ್ಕಾರ ಅವಕಾಶ ಕಲ್ಪಿಸಿದೆ.ವಾರ್ಷಿಕ ₹1 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರು, ವರ್ಷಕ್ಕೆ ₹50,000 ಶುಲ್ಕ ಪಾವತಿಸಿ ಮನೆಯಲ್ಲಿಯೇ ಬಾರ್ ಹೊಂದಲು ಲೈಸನ್ಸ್ ದೊರೆಯಲಿದೆ.

ಇಂದೋರ್, ಭೋಪಾಲ್, ಜಬಲ್ಪುರ್ ಮತ್ತು ಗ್ವಾಲಿಯರ್‌ನ ಕೆಲವು ಸೂಪರ್‌ ಮಾರ್ಕೆಟ್‌ಗಳಲ್ಲಿಯೂ ಮದ್ಯ ಮಾರಾಟ ತೆರೆಯಲು ಸರ್ಕಾರ ಅನುಮತಿ ನೀಡಲಿದೆ.