ಕ್ಷೇತ್ರ – 0 ಡಿಗ್ರಿಯಿಂದ 13 ಡಿಗ್ರಿ 30 ಕಲೆ ಸಿಂಹ ರಾಶಿ, ನಾಡಿ – ಅಂತ್ಯ, ಯೋನಿ – ಮೂಷಕ, ಗಣ – ರಕ್ಷಸ, ರಾಶಿಸ್ವಾಮಿ – ಸೂರ್ಯ, ನಕ್ಷತ್ರಸ್ವಾಮಿ – ಕೇತು. ನಾಮಾಕ್ಷರಗಳು – ಮ, ಮೀ, ಮೂ,ಮೆ. ಶರೀರ ಭಾಗಗಳು – ಹೃದಯ,ಬೆನ್ನು,ಸುಷುಮ್ನನಾಡಿ, ಬೆನ್ನುಹುರಿ, ಮಹಾ ಧಮನಿಗಳು.
ರೋಗಗಳು :- ಹೃದಯ ಸ್ಪಂದನ, ವಿಷದಿಂದ ತೊಂದರೆ, ಬೆನ್ನು ನೋವು, ಕಾಲರಾ, ಮೂರ್ಛೆರೋಗ, ಹುಚ್ಚತನ, ಬ್ರಾಂತಿ, ಸಂಶಯಸ್ತಕರಾಗಿರುತ್ತಾರೆ.
ಸಂರಚನೆ :- ಸ್ಪಷ್ಟವಾದಿ, ಯೋಧ, ಶಕ್ತಿಶಾಲಿ, ಸುರಕ್ಷಿತ ಇರುವವನು, ವೈರಾಗಿ, ಅಹಂಕಾರಿ, ಅನುರಾಗಿ, ಕಾಮಿ, ಸಿಟ್ಟಿನವ, ಸ್ವಾರ್ಥಿ, ಜನ ಸಂಪರ್ಕ ಉಳ್ಳವನು, ಸುಖಿ, ಶ್ರೀಮಂತ, ಈಶ್ವರ ಭಕ್ತ, ವ್ರತ ಪೂಜೆ ಮಾಡುವವನು, ಉದ್ಯಮಿ ಮತ್ತು ಆರಾಮದಾಯಕ ಕಾರ್ಯ ಮಾಡುವವನು.
ಉದ್ಯೋಗ ಮತ್ತು ವಿಶೇಷ :- ಅನೇಕ ರೀತಿಯ ಉದ್ಯೋಗ ಮಾಡುವವನು, ರಾಸಾಯನಿಕ ಔಷಧಿ ಉತ್ಪಾದಕ, ವಕೀಲ, ಸಿಪಾಯಿ, ತಾಂತ್ರಿಕ, ಅಲಂಕಾರ ವಸ್ತು ನಿರ್ಮಾಣಕಾರ, ವಿದ್ಯುತ್ ಉಪಕರಣಗಳ ತಯಾರಕ, ಚರ್ಮರೋಗ ವಿಶೇಷ ತಜ್ಞ, ಸಂಶೋಧನಾಕಾರ, ಮಂತ್ರಿ, ಪ್ರತಿಭಾ ಶಾಲಿ, ಪ್ರತಿಷ್ಠೆ ಹೊಂದಿದವನಾಗಬಹುದು. ಸೂರ್ಯನು ಮೂಲ ತ್ರಿಕೋನದಲ್ಲಿದ್ದಾಗ ಆರ್ಥಿಕ ವಿಷಯಗಳಲ್ಲಿ ಉತ್ತಮ ಫಲ ನೀಡುವವನು. ಉದಾಸೀನರಾದ ಸ್ತ್ರೀ ಪುರುಷರು ಈ ನಕ್ಷತ್ರದಲ್ಲಿ ಹುಟ್ಟಿದವರಾಗುವವರು ನಾಯಕ ನಟ, ಲೇಖಕ, ಊಟದಲ್ಲಿ ಆಸಕ್ತ, ಚರ್ಮರೋಗ ಪೀಡಿತ, ಚಿಂತಾಗ್ರಸ್ತ, ಕಿವಿ ರೋಗವುಳ್ಳವನಾಗಬಹುದು.
ಸೂರ್ಯ ಮತ್ತು ಕೇತು ಈ ನಕ್ಷತ್ರದ ಮೂಲಕವಾಗಿ ಹಾದು ಹೋದಾಗ ವಿಶಿಷ್ಟ ಫಲ ನೀಡುವುದು. ಸೂರ್ಯನು ಈ ನಕ್ಷತ್ರದಲ್ಲಿ ಭಾದ್ರಪದ ಮಾಸದಲ್ಲಿ 13 ದಿನವಿರುವನು. ಮಘಾ ನಕ್ಷತ್ರದಲ್ಲಿ ಹುಟ್ಟಿದವರು ವಿಚಾರ ಶೀಲರು , ಸಮರ್ಥರು ಆಗಬಹುದಾಗಿದೆ. ಕೇತುವಿನಿಂದ ತೊಂದರೆಗೊಳಗಾದರೆ ನಿಷ್ಕ್ರಿಯರು ಕೆಟ್ಟ ಕಾರ್ಯ ಮಾಡುವವರು ಆಗಬಹುದು.