ಮನೆ ಜ್ಯೋತಿಷ್ಯ ಮಘಾ ನಕ್ಷತ್ರ ಮತ್ತು ಜಾತಕ

ಮಘಾ ನಕ್ಷತ್ರ ಮತ್ತು ಜಾತಕ

0

        ಮಘಾ ನಕ್ಷತ್ರದ ಕ್ಷೇತ್ರವ್ಯಾಪ್ತಿ ಶೂನು 0  ಅಂಶ ಸಿಂಹ ರಾಶಿಯಿಂದ 13 ಅಂಶ 20 ಕಲಾ ಸಿಂಹದವರಿಗೆ,ರಾಶಿ ಸ್ವಾಮಿ ಸೂರ್ಯ,ನಕ್ಷತ್ರ ಸ್ವಾಮಿ ಕೇತು, ನಕ್ಷತ್ರ ದೇವತೆ ಪಿತೃಗಳು ಅಂತ್ಯನಾಡಿ ಮೂಷಕಯೋನಿ,  ರಾಕ್ಷಸಗಣ ತಾರಾ ಸಮೂಹ 5 ಆಕಾಶಭಾಗ ಉತ್ತರ ನಾಮಾಕ್ಷರ  ಡಿ, ಡೂ, ಡೇ, ಡೋ,ಮಘಾ ನಕ್ಷತ್ರ ಪ್ರತಿನಿಧಿಸುವ ಜಾತಕನ ಶರೀರ ಭಾಗ ಹೃದಯ ಬೆನ್ನು ಸುಷುಮ್ನಾ ನಾಡಿ,ಮೇರುರಜ್ಜು,ಪ್ಲಿಹಾ, ಮೋಚನಿ, ಬೆನ್ನುಮೂಳೆ ಭಾಗ, ಮಹಾಯಮಿನಿ.

ಮಘಾ ನಕ್ಷತ್ರದ ಜಾತಕನ ಸ್ವರೂಪ :

      ಕೀಳು ನುಡಿಯುವ ಸ್ವಷ್ಟವಾದಿ ಶೀಘ್ರ ಒಪ್ಪಿಗೆ ಸೂಚಿಸುವವ ದ್ರಾಕ್ಷಿಣ್ಯ ಶೀಲ,ಕದನೋತ್ಸಾಹಿ,ಸುರಕ್ಷಾತ್ಮಕ ಸ್ಥೊತಿಯ ಉತ್ತರ,ಬಲವಂತ, ನಿರ್ಭಯಿ,ಸಾಹಸಿ, ನಿರ್ಲಜ್ಯ, ಉದ್ದಟ,ಕಾಮಿ, ಅನುರಾಗಿ, ವೈರಾಗಿ  ಬಾವುಕ,ಗರ್ವಿ, ಶೀಘ್ರಕೋಪಿ, ತನ್ನ ಕಾರ್ಯಗಳಲ್ಲಿ ನಿರತ, ಅವಸರ ಪವೃತ್ತಿ ತನ್ನಹಿತದ ರಕ್ಷಣೆ ಮಾಡುವವ, ಸ್ವಾರ್ಥಿ, ತೀಕ್ಷ್ಣ ಪ್ರವೃತ್ತಿ ಉಚ್ಚಾಭಿಲಾಷಿ, ಹುಚ್ಚ ಮಟ್ಟದ ಜೀವನ ನಿರ್ವಹಣೆಯನ್ನು ಪ್ರಾಪ್ತಿ ಹೊಂದುವ  ಇಚ್ಛೆಯುಳ್ಳವ, ಕಾಯ ದಕ್ಷ, ಸಹಕಾರ ಮತ್ತು ಸ್ವಂತ ಕ್ಷೇತ್ರದಲ್ಲಿ ವಿಶ್ವಾಸಪೂರ್ಣ ಪದವಿಯನ್ನು ಅಲಂಕರಿಸುವವ, ಗುಪ್ತ ಕಾರ್ಯಗಳಲ್ಲಿ ವಿಶೇಷ ಅಬಿರುಚಿಯುಳ್ಳವ, ಉತ್ತಮ ಕ್ರೀಡಾಪಟು, ಜನಸಂಪರ್ಕ ಸಾಧನೆಯಲ್ಲಿ ಪ್ರಯತ್ನಚೀಲ, ನೌಕರಿ,ವೃತ್ಯದಿಗಳಲ್ಲಿ ಸುಖಿ, ಆರಾಮದಾಯಕ ಕಾರ್ಯ, ಪ್ರವೀಣ, ಶ್ರೀಮಂತ,ಅನೇಕ ಅದೀನಸ್ಥರು ಅಥವಾ ಸೇವಕರನ್ನುಳ್ಳವ,  ಭಗವಂತನ ಭಕ್ತ ವ್ರತ  ಪೂಜೆಯನ್ನು ಮಾಡುವವ, ಅತಿ ಉದ್ಯಮಶೀಲ,ಸಂಶಯ ಪ್ರವೃತ್ತಿಯವ, ಗುಪ್ತ ಕಾರ್ಯಗಳಲ್ಲಿ ತತ್ಪರ.

 ಮಘಾ ನಕ್ಷತ್ರದ ಉದ್ಯೋಗ :

     ಅಧಿಕ ಉದ್ಯೋಗಗಳ ಅಥವಾ ಸಂಸ್ಥೆಗಳ ಗುತ್ತಿಗೆದಾರ, ರಾಸಾಯನಿಕ ಷಧಿಗಳ ಉತ್ಪಾದಕ, ಪೌಜದಾರಿ ನ್ಯಾಯಾಧೀಶ, ಸುರಕ್ಷೆ ಅಥವಾ ಸೇನಾವಿಭಾಗ, ಶಸ್ತ್ರ ಚಿಕಿತ್ಸಕ,  ಚಿಕಿತ್ಸಾ ವಿಭಾಗ, ಕೆಮಿಸ್ಟ್, ಸರಕಾರ ನೌಕರಿ, ಸುರಕ್ಷೆಗೆ ಸಂಬಂಧಿಸಿದ ಕಾರ್ಯ,ಪೊಲೀಸ್, ತಾಂತ್ರಿಕ, ಕೃತಕ ಆಭರಣಗಳನ್ನು ತಯಾರಿಸುವವ, ಕಲಬೆರಕೆದಾರ, ವಿದ್ಯುತ್ ಉಪಕರಣ, ಶಸ್ತ್ರಚಿಕಿತ್ಸೆ, ಆಯುಧ,ಬಹುವರ್ಣದ ವ್ಯಾಪಾರ, ಚರ್ಮರೋಗ ವಿಶೇಷಜ್ಞ, ಸರಕಾರದ ಮೂಲಕ ವಿಶೇಷ ಪ್ರತಿಷ್ಠೆ ಬಹುಪ್ರತಿಭೆಯ ಕಾರ್ಯ,ಪೂರ್ವಜ್ಞಾನ ಸಂಬಂಧಿ ಸಂಶೋಧನೆ, ಚಿಕ್ಕ ಹುದ್ದೆಯಿಂದ ದೊಡ್ಡ ಹುದ್ದೆಗೆ ತಲುಪೂದರಲ್ಲಿ ಸಫಲ ಗುಮಾಸ್ತನಿಂದ ಮಂತ್ರಿ ಅಥವಾ ಜಾವಾನದಿಂದ ರಾಷ್ಟ್ರಪತಿ ಹುದ್ದೆಗೆ ತಲುಪುವ.