ಮನೆ ಅಂತಾರಾಷ್ಟ್ರೀಯ ಪಶ್ಚಿಮ ಆಫ್ಗಾನ್ ನಲ್ಲಿ 6.5 ತೀವ್ರತೆಯ ಭೂಕಂಪ

ಪಶ್ಚಿಮ ಆಫ್ಗಾನ್ ನಲ್ಲಿ 6.5 ತೀವ್ರತೆಯ ಭೂಕಂಪ

0

ಚಹಕ್ ಪಶ್ಚಿಮ ಆಫ್ಘಾನಿಸ್ತಾನದಲ್ಲಿ ಇಂದು (ಭಾನುವಾರ) ಬೆಳಿಗ್ಗೆ ಹಲವು ಬಾರಿ ಭೂಮಿಕಂಪ ಸಿದ್ದು ಒಬ್ಬರು ಮೃತಪಟ್ಟಿದ್ದು 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಹೆರಾತ್ ಗವರ್ನರ್ ಕಚೇರಿ ತಿಳಿಸಿದೆ.

ಕಟ್ಟಡಗಳ ಅವಶೇಷಗಳಡಿ ಹಲವರು ಸಿಲ್ಕಿ ರುವುದರಿಂದ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭೂಕಂಪದ ತೀವ್ರತೆಯು ಟ್ಯಾಕ್ಟರ್ ಮಾಪನದಲ್ಲಿ 6.5 ರಷ್ಟು ದಾಖಲಾಗಿದ್ದು, ಹೇರಾತ್ ಪಟ್ಟಣದ ಹೊರವಲಯದಲ್ಲಿ ಭೂಮಿಯಿಂದ 10 ಕಿಲೋ ಮೀಟರ್ ಆಳದಲ್ಲಿ ಕಂಪನದ ಕೇಂದ್ರ ಬಿಂದುವನ್ನು ಗುರುತಿಸಲಾಗಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ ತಿಳಿಸಿದೆ.

ಪಶ್ಚಿಮ ಆಫ್ಘಾನಿಸ್ತಾನದಲ್ಲಿ ಈಚೆಗೆ ಸಂಭವಿಸಿದ ಸರಣಿ ಭೂಕಂಪಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.