ಮನೆ ಅಡುಗೆ ಉಳಿದ ಅನ್ನದಲ್ಲಿ ಮಾಡಿ ಬಿಸಿ ಬಿಸಿ ಪಕೋಡ

ಉಳಿದ ಅನ್ನದಲ್ಲಿ ಮಾಡಿ ಬಿಸಿ ಬಿಸಿ ಪಕೋಡ

0

ಅನ್ನ ಉಳಿದಿದೆ ಏನು ಮಾಡುವುದು ಅಂತ ಚಿಂತೆನಾ? ಹಾಗಾದ್ರೆ ನಾವು ಇಂದು ಉಳಿದ ಅನ್ನದಲ್ಲಿ ಬಿಸಿ ಬಿಸಿ ಹಾಗೂ ರುಚಿಕರ ಪಕೋಡ ಮಾಡುವ ವಿಧಾನವನ್ನ ಹೇಳಿಕೊಡ್ತೇವೆ. ಕಡಲೆ ಹಿಟ್ಟಿನಿಂದ ಮಾಡುವ ಈರುಳ್ಳಿ ಪಕೋಡವನ್ನು ತಿಂದಿದ್ದೇವೆ. ಆದರೆ ಇಂದು ಮಾಡುತ್ತಿರುವ ಅನ್ನದ ಪಕೋಡ ಗರಂ ಗರಂ ಎಂದು ಸಖತ್ ರುಚಿಯಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು : ಅನ್ನ – 3 ಕಪ್, ಕಡಲೆಹಿಟ್ಟು – 4 ಚಮಚ, ಈರುಳ್ಳಿ – 2, ಹಸಿಮೆಣಸು – 2, ಕೊತ್ತಂಬರಿ ಸೊಪ್ಪು- ಸ್ವಲ್ಪ, ಚಾಟ್ ಮಸಾಲ- 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಶುಂಠಿ 1 ಇಂಚು

ಮಾಡುವ ವಿಧಾನ : ಪಾತ್ರೆಯೊಂದಕ್ಕೆ ಬೇಯಿಸಿದ ಅನ್ನ, ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಜಜ್ಜಿದ ಶುಂಠಿ, ಚಾಟ್ ಮಸಾಲ, ಉಪ್ಪು ಹಾಗೂ ಕಡಲೆಹಿಟ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ಅಗತ್ಯವಿರುವಷ್ಟು ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಪಕೋಡ ಹದಕ್ಕೆ ಕಲೆಸಿಕೊಳ್ಳಿ. ಕಾಯಿಸಿದ ಎಣ್ಣೆಗೆ ಹಿಟ್ಟನ್ನು ಉಂಡೆ ಮಾಡಿ ಒಂದೊಂದಾಗಿ ಬಿಡಿ. ಅದನ್ನು ಎರಡೂ ಕಡೆ ಚೆನ್ನಾಗಿ ಕರಿಯಿರಿ. ಸಂಜೆ ಹೊತ್ತಿಗೆ ತಿನ್ನಲು ಬಿಸಿಯಾದ ಅನ್ನದ ಪಕೋಡ ಸವಿಯಲು ಸಿದ್ಧವಾಗುತ್ತದೆ.