ಮನೆ ಸುದ್ದಿ ಜಾಲ ಸರ್ಕಾರಿ ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯ ಸದುಪಯೋಗಪಡಿಸಿಕೊಳ್ಳಿ: ಡಿ.ಮಾದೇಗೌಡ

ಸರ್ಕಾರಿ ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯ ಸದುಪಯೋಗಪಡಿಸಿಕೊಳ್ಳಿ: ಡಿ.ಮಾದೇಗೌಡ

0

ಮೈಸೂರು: ರಾಜ್ಯದಲ್ಲಿಯೇ ಮೊದಲ ಸರ್ಕಾರಿ ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ನಮ್ಮ ಪಕ್ಕದಲ್ಲೇ ಇದ್ದು, ನಾವು  ಇದರ ಸದುಪಯೋಗ ಪಡೆದು ಇಡೀ ಗ್ರಾಮ,  ರೋಗಮುಕ್ತ ಮಾಡಲು ಸಹಕರಿಸಬೇಕು ಎಂದು ಮಾಜಿ ವಿಧಾನಪರಿಷತ್ ಸದಸ್ಯರಾದ ಡಿ.ಮಾದೇಗೌಡರು ಕರೆ ನೀಡಿದರು.

ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆ ಹಾಗು ಆಳ್ವಾಸ್ ಪ್ರಕೃತಿ ಚಿಕಿತ್ಸೆ ಯೋಗ ವಿಜ್ಞಾನ ಕಾಲೇಜು ಮತ್ತು ಕುಂಬಾರಕೊಪ್ಪಲು ಅಭ್ಯುದಯ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಯೋಗ ಮತ್ತು ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ, ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಿನನಿತ್ಯದ ಜೀವನದಲ್ಲಿ ಯೋಗ ಅಳವಡಿಸಿಕೊಂಡರೆ ಮನಸ್ಸಿಗೆ ಶಾಂತಿ ಹಾಗು ದೇಹಕ್ಕೆ ಆರೋಗ್ಯ ಸಿಗುವುದು ಹಾಗಾಗಿ ಎಲ್ಲರೂ ಯೋಗ ಮಾಡಿ ಎಂದರು.

ಹಿಂದೆ ಕಸಮುಕ್ತ ಮೈಸೂರು ಮಾಡಲು ಹೊರಟಾಗ ಅದನ್ನು ಸಾಧಿಸಿ ಸ್ವಚ್ಚ ಮೈಸೂರು ರಾಷ್ಟ್ರ ಪ್ರಶಸ್ತಿ ಬಂತು ಹಾಗೆ ರೋಗಮುಕ್ತ ಮೈಸೂರು ಆಗಬೇಕು ಎಂದರು,

 ನಂತರ ಡಾ|| ಸಂದೀಪ್ ಮಾತನಾಡಿ,  ಹಣ ಕೊಟ್ಟರೆ ಎಲ್ಲ ವಸ್ತುಗಳನ್ನು ಕೊಳ್ಳಬಹುದು ಆದರೆ ಆರೋಗ್ಯ ಕೊಂಡುಕೊಳ್ಳಲು ಆಗುವುದಿಲ್ಲ ಆದ್ದರಿಂದ ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಅಭ್ಯುದಯ ಸಂಘದ ಅಧ್ಯಕರು ಮಾಜಿ ನಗರಪಾಲಿಕೆ ಸದಸ್ಯರು ಆದ ಕೆ. ಟಿ. ಚೆಲುವೇಗೌಡರು, ಪದಾಧಿಕಾರಿಗಳಾದ ವೈ.ಭೈರಪ್ಪ, ಶಿವಪ್ಪ,  ಮತ್ತು ಚಾಮರಾಜ ಕ್ಷೇತ್ರ ಬಿಜೆಪಿ ಉಪಾಧ್ಯಕ್ಷ  ಕುಮಾರ್ ಗೌಡ, ದಿನೇಶ್ ಚಂದ್ರ, ಪಟ್ಟಾಭಿ, ಆದರ್ಶ್ ಮುಂತಾದವರು ಉಪಸ್ಥಿತರಿದ್ದರು.

ಹಿಂದಿನ ಲೇಖನಮಾರ್ಚ್ 20  ರಂದು ಪರಿಸರ ಜಾಗೃತಿ ಸೈಕಲ್ ಅಭಿಯಾನ
ಮುಂದಿನ ಲೇಖನಗ್ರಂಥಾಲಯ ಇಲಾಖೆಗೆ ಬಜೆಟ್ ನಲ್ಲಿ ಅನುದಾನ ಮೀಸಲಿಡಿ: ಟಿ.ಎಸ್.ಛಾಯಾಪತಿ