ಮನೆ ರಾಜ್ಯ ಮಳವಳ್ಳಿ ಅತ್ಯಾಚಾರ ಪ್ರಕರಣ: ಸಂತ್ರಸ್ತೆ ಮನೆಗೆ ಜಮೀರ್ ಭೇಟಿ- 5 ಲಕ್ಷ ಪರಿಹಾರ ವಿತರಣೆ

ಮಳವಳ್ಳಿ ಅತ್ಯಾಚಾರ ಪ್ರಕರಣ: ಸಂತ್ರಸ್ತೆ ಮನೆಗೆ ಜಮೀರ್ ಭೇಟಿ- 5 ಲಕ್ಷ ಪರಿಹಾರ ವಿತರಣೆ

0

ಮಂಡ್ಯ(Mandya): ಮಳವಳ್ಳಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ ಬಾಲಕಿ ಮನೆಗೆ ಶಾಸಕ ಜಮೀರ್​ ಅಹ್ಮದ್​ ಭೇಟಿ ನೀಡಿ, 5 ಲಕ್ಷ ರೂ ಪರಿಹಾರ ವಿತರಿಸಿದರು.

ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಅವರು, ಆರೋಪಿಗೆ ಶಿಕ್ಷೆ ಕೊಡಿಸುವುದಾಗಿ ಮತ್ತು ನ್ಯಾಯಕ್ಕಾಗಿ ಎಂದಿಗೂ ಅವರ ಜೊತೆ ಇರುವುದಾಗಿ ಭರವಸೆ ನೀಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂತ ಘಟನೆ ನಡೆಯಬಾರದಿತ್ತು. ಇದು ಮನುಷ್ಯರು ಮಾಡುವ ಕೆಲಸ ಅಲ್ಲ. ಯಾರೋ ರಾಕ್ಷಸನೇ ಮಾಡಿರುವ ಕೆಲಸ ಅನಿಸುತ್ತಿದೆ. ಈ ರೀತಿ 10 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಮಾಡಲು ಮನುಷ್ಯನಿಂದ ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಇಂತ ರಾಕ್ಷಸನಿಗೆ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ಕೊಟ್ಟರೆ ಆಗ ಎಲ್ಲರಿಗೂ ಭಯ ಬರಲಿದೆ. ಈ ಮಗುವಿಗೆ ಆದ ರೀತಿ ಬೇರೆ ಯಾವ ಹೆಣ್ಣು ಮಕ್ಕಳಿಗೂ ಆಗಬಾರದು. ಆ ಕುಟುಂಬದ ಗೋಳು ನೋಡಲು ಆಗ್ತಿಲ್ಲ. ಇಂತಹವರನ್ನು ಬೀದಿಯಲ್ಲಿ ನಿಲ್ಲಿಸಿ ಕತ್ತರಿಸಿ ತುಂಡು ತುಂಡು ಮಾಡಬೇಕು. ಈ ರೀತಿ ಕಾನೂನು ನಾವು ತರದಿದ್ದರೆ, ಇನ್ಮುಂದೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದರು.

ಇಂತ ವಿಚಾರಕ್ಕೆ ಪ್ರತ್ಯೇಕ ಕಾನೂನು ಜಾರಿಯಾಗಬೇಕು. ಸರ್ಕಾರ ಹಾಗೂ ನ್ಯಾಯಾಲಯಕ್ಕೆ ಮನವಿ ಮಾಡುತ್ತೇನೆ, ಆರೋಪಿಗೆ ಬೀದಿಯಲ್ಲಿ ಗಲ್ಲು ಶಿಕ್ಷೆ ನೀಡಬೇಕು. ಮಗು ಅಂತೂ ವಾಪಸ್ ಕೊಡಲು ನಮ್ಮಿಂದ ಸಾಧ್ಯವಿಲ್ಲ. ನನ್ನ ಕಡೆಯಿಂದ ಸಣ್ಣ ನೆರವನ್ನು ಕೊಟ್ಟಿದ್ದೇನೆ. ಆ ಕುಟುಂಬಕ್ಕೆ ನೋವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಮರುಗಿದರು.