Facebook Instagram Share Twitter Youtube
  • ಸುದ್ದಿ ಜಾಲ
    • ಅಂಕಣ
    • ಅಂತರಾಷ್ಟ್ರೀಯ
    • ಆಟೋ ಮೊಬೈಲ್
    • ಕೃಷಿ
    • ತಂತ್ರಜ್ಞಾನ
  • ವೀಡಿಯೋಗಳು
  • ರಾಜಕೀಯ
  • ಅಪರಾಧ
  • ಕಾನೂನು
  • ಕ್ರೀಡೆ
  • ಶಿಕ್ಷಣ
  • ಮನರಂಜನೆ
  • ಜ್ಯೋತಿಷ್ಯ
ಹುಡುಕಾಟ
Saturday, December 6, 2025
  • About Us
  • Contact us
Facebook Instagram Share Twitter Youtube
Saval News
  • ಸುದ್ದಿ ಜಾಲ
    • ರೈತನಿಗೆ ಪರಿಹಾರ ವಿಳಂಬ – ಡಿಸಿ ಕಾರು ಜಪ್ತಿಗೆ ಕೋರ್ಟ್ ಆದೇಶ
      ಭಾರತ ರಷ್ಯಾ ಆರ್ಥಿಕ ಸಹಕಾರ ಒಪ್ಪಂದಕ್ಕೆ ಸಹಿ
      ಕಬ್ಬು ಬೆಳೆಗಾರರ ಸಮಸ್ಯೆ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಸಂಸದ ಈರಣ್ಣ ಕಡಾಡಿ
      ಹೊಸ ಫೋಟೋಶೂಟ್ ಲುಕ್‌ನಲ್ಲಿ ಕ್ವೀನ್‌ ಕಂಗನಾ ರಾಣಾವತ್
      ರಷ್ಯಾ ನಾಗರಿಕರಿಗೆ 30 ದಿನಗಳ ಉಚಿತ E-ಟೂರಿಸ್ಟ್‌ ವೀಸಾ ನೀಡಲು ಭಾರತ ಅಸ್ತು..!
      ಎಲ್ಲಾಅಂಕಣಅಂತರಾಷ್ಟ್ರೀಯಆಟೋ ಮೊಬೈಲ್ಕೃಷಿತಂತ್ರಜ್ಞಾನ
  • ವೀಡಿಯೋಗಳು
    • ಚುನಾವಣಾ ನಿಯಮ ತಿದ್ದುಪಡಿ ವಿಚಾರ: ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಮೂರು ವಾರಗಳ ಕಾಲಾವಕಾಶ
      ಪಶ್ಚಿಮ ಬಂಗಾಳದಲ್ಲಿ ಕಚ್ಚಾ ಬಾಂಬ್ ಸ್ಫೋಟ: ಟಿಎಂಸಿ ಕಾರ್ಯಕರ್ತ ಸಾವು
  • ರಾಜಕೀಯ
    • ನಾನು ಸತೀಶ್ ಜಾರಕಿಹೊಳಿ ಭೇಟಿಯಾಗಿ ಮಾತಾಡಿದ್ದು ನಿಜ – ಡಿಕೆಶಿ
      ಮುಂಬರುವ ವಿಧಾನಸಭೆ ಚುನಾವಣೆಗೆ ಬಿವೈವಿ ನೇತೃತ್ವ ಬೇಡ; ಉಸ್ತುವಾರಿ ಮುಂದೆ ಭಿನ್ನ ನಾಯಕರ ಅಳಲು
      ಕಾಂಗ್ರೆಸ್ ಹೈಕಮಾಂಡ್ ಸ್ಟ್ರಾಂಗ್; ಎಲ್ಲಾ ಗೊಂದಲ ಪರಿಹಾರ ಮಾಡುತ್ತೆ – ಬಾಲಕೃಷ್ಣ
      ಸಂಪುಟ ಪುನಾರಚನೆ; ಮಹದೇವಪ್ಪ, ಪರಮೇಶ್ವರ್, ಮುನಿಯಪ್ಪಗೆ ಗೇಟ್‌ಪಾಸ್ – ಛಲವಾದಿ ನಾರಾಯಣಸ್ವಾಮಿ
      ಇಂದು ಡಿಸಿಎಂ ಡಿಕೆಶಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯಗೆ ಬ್ರೇಕ್​ಫಾಸ್ಟ್..!
  • ಅಪರಾಧ
  • ಕಾನೂನು
  • ಕ್ರೀಡೆ
  • ಶಿಕ್ಷಣ
  • ಮನರಂಜನೆ
  • ಜ್ಯೋತಿಷ್ಯ
ಮನೆ ರಾಜ್ಯ ಮಾಲೂರು ಮರು ಮತ ಎಣಿಕೆ ಮುಕ್ತಾಯ – ಫಲಿತಾಂಶ ಗೌಪ್ಯ, ಸುಪ್ರೀಂಗೆ ವರದಿ ಸಲ್ಲಿಕೆ..!
  • ರಾಜ್ಯ
  • ರಾಷ್ಟ್ರೀಯ
  • ಸುದ್ದಿ ಜಾಲ

ಮಾಲೂರು ಮರು ಮತ ಎಣಿಕೆ ಮುಕ್ತಾಯ – ಫಲಿತಾಂಶ ಗೌಪ್ಯ, ಸುಪ್ರೀಂಗೆ ವರದಿ ಸಲ್ಲಿಕೆ..!

November 12, 2025
0
Share
WhatsApp
Telegram
Facebook
Twitter
Email

    ಕೋಲಾರ : ಇಡೀ ದೇಶದ ಗಮನ ಸೆಳೆದಿದ್ದ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಕಾರ್ಯ ಸಾಕಷ್ಟು ಕುತೂಹಲಗಳ ನಡುವೆ ಮುಗಿದಿದ್ದು, ಸತತವಾಗಿ ಹನ್ನೆರಡು ಗಂಟೆಗಳ ಕಾಲ ನಡೆದ ಮರು ಎಣಿಕೆ ಕಾರ್ಯದಲ್ಲಿ ಅಭ್ಯರ್ಥಿಗಳಿಗೆ ಇದ್ದ ಗೊಂದಲವನ್ನು ಬಹುತೇಕ ನಿವಾರಣೆ ಮಾಡಲಾಗಿದೆ. ಕಳೆದ ಫಲಿತಾಂಶವೇ ಯತಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆಯಿದೆ.

    ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಚುನಾವಣೆಯ ಮರು ಮತ ಎಣಿಕೆ ಕೋರಿ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಹೈಕೋರ್ಟ್ ಮೊರೆ ಹೋಗಿದ್ದರು. ಎರಡೂವರೆ ವರ್ಷಗಳ ಕಾಲ ವಿಚಾರಣೆ ನಡೆಸಿದ ಹೈಕೋರ್ಟ್ ಮರು ಎಣಿಕೆಗೆ ಆದೇಶ ಮಾಡಿ ನಂತರ ಹಾಲಿ ಶಾಸಕರನ್ನು ಅಸಿಂಧು ಮಾಡಿತ್ತು. ಅಸಿಂಧು ಅದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಶಾಸಕ ನಂಜೇಗೌಡ ಅವರಿಗೆ ಅಸಿಂಧು ಆದೇಶ ತಡೆಯಾಜ್ಞೆ ನೀಡಿ ಮರು ಎಣೆಕೆಗೆ ಆದೇಶಿಸಿತ್ತು.

    ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇಂದು ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗದ ಸೂಚನೆ ಮೇರೆಗೆ ಜಿಲ್ಲಾ ಚುನಾವಣಾಧಿಕಾರಿ ನೇತೃತ್ವದಲ್ಲಿ ಮರು ಎಣಿಕೆ ಕಾರ್ಯ ನಡೆಯಿತು. ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮರು ಎಣಿಕೆ ಕಾರ್ಯ ಸತತವಾಗಿ ರಾತ್ರಿ 8 ಗಂಟೆವರೆಗೆ ನಡೆಯಿತು. ಮೊದಲು ಪೋಸ್ಟಲ್ ಬ್ಯಾಲೆಟ್ ಎಣಿಕೆ ಮಾಡಿ ನಂತರ ಇವಿಎಂಗಳ ಎಣಿಕೆ ಕಾರ್ಯ ನಡೆಯಿತು. ಅಭ್ಯರ್ಥಿಗಳ ಸಮ್ಮುಖದಲ್ಲಿ ಅವರ ಎಲ್ಲಾ ಗೊಂದಲ ಅನುಮಾನಗಳನ್ನು ಪರಿಹರಿಸಿದ ನಂತರ ಎಣಿಕೆ ಕಾರ್ಯ ನಡೆಸಲಾಗುತ್ತಿತ್ತು.

    ರಾಜ್ಯ ಚುನಾವಣಾ ಆಯೋಗ ಮತ ಎಣಿಕೆ ಮೇಲೆ ಹದ್ದಿನ ಕಣ್ಣಿಟ್ಟು ಪ್ರತಿ ಸುತ್ತಿನ ಎಣಿಕೆಯ ಮಾಹಿತಿ ಪಡೆಯುತ್ತಿತ್ತು. ರಾಜ್ಯ ಚುನಾವಣಾ ಆಯೋಗದ ಸೂಚನೆ ನಂತರವೇ ಪ್ರತಿ ಸುತ್ತಿನ ಎಣಿಕೆ ಕಾರ್ಯ ಮಾಡಲಾಗಿದೆ. ಹದಿನಾಲ್ಕು ಟೇಬಲ್‌ಗಳಲ್ಲಿ ಒಟ್ಟು 18 ಸುತ್ತಿನ ಮತ ಎಣೆಕೆ ಕಾರ್ಯ ಮಾಡಿ ಮುಗಿಸಲಾಗಿದೆ. ಸದ್ಯ ಎಣಿಕೆಯ ನಂತರ ಪೋಸ್ಟಲ್ ಬ್ಯಾಲೆಟ್‌ನಲ್ಲಿ ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿದರೆ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

    ಎಣಿಕೆ ನಂತರ ಪ್ರತಿಕ್ರಿಯೆ ನೀಡಿದ ಶಾಸಕ ನಂಜೇಗೌಡ, ಇಂದಿನ ಎಣಿಕೆ ಕಾರ್ಯ ಸಂತೋಷ ತಂದಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ನ್ಯಾಯ ಸಿಕ್ಕಿದೆ. ಎರಡೂವರೆ ವರ್ಷಗಳ ಕಾಲ ನನಗಾದ ನೋವಿಗೆ ಪರಿಹಾರ ಸಿಕ್ಕಿದೆ ಎಂದರು.

    ಇನ್ನು ಮರು ಎಣಿಕೆಗಾಗಿ ಎರಡೂವರೆ ವರ್ಷಕಾಲ ನಿರಂತರವಾಗಿ ಕೋರ್ಟ್‌ನಲ್ಲಿ ಹೋರಾಟ ಮಾಡಿದ್ದ ಮಾಲೂರು ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಇಂದು ಅವರ ಸಾಕಷ್ಟು ಬೆಂಬಲಿಗರು ಹಾಗೂ ವಕೀಲರೊಂದಿಗೆ ಮರು ಎಣಿಕೆ ಕೇಂದ್ರಕ್ಕೆ ಬಂದಿದ್ದರು. ಮರು ಎಣಿಕೆ ನಂತರ ಮಾಜಿ ಶಾಸಕ ಮಂಜುನಾಥಗೌಡ ಪ್ರತಿಕ್ರಿಯೆ ನೀಡಿ, ನನಗೆ ಇನ್ನೂ ಸಮಾಧಾನ ಆಗಿಲ್ಲ, ಇನ್ನೂ ಕೆಲವೊಂದು ಪ್ರಶ್ನೆಗಳಿಗೆ ನನಗೆ ಉತ್ತರ ಸಿಕ್ಕಿಲ್ಲ. ಅಧಿಕಾರಿಗಳ ಪ್ರೊಸೀಜರ್ ಲ್ಯಾಪ್ಸ್ ಇದೆ. ಸಂಪೂರ್ಣ ವಿವಿ ಪ್ಯಾಟ್‌ಗಳನ್ನು ಎಣಿಸಬೇಕಿತ್ತು.

    ಆದರೆ ಕೇವಲ ಐದು ವಿವಿ ಪ್ಯಾಟ್ ಮಾತ್ರ ಎಣಿಕೆ ಮಾಡಿದೆ. ಚುನಾವಣೆ ಮರುಎಣಿಕೆ ವಿರುದ್ಧ ನನ್ನ ಕಾನೂನು ಹೋರಾಟ ಮುಂದುವರೆಯಲಿದೆ. ಸುಪ್ರೀಂ ಕೋರ್ಟ್ ಅರ್ಜಿದಾರರ ಮನವಿಯನ್ನು ಪರಿಗಣಿಸಿ ಎಂದು ಹೇಳಿತ್ತು. ಆದರೆ ಕೆಲವೊಂದು ನನ್ನ ಮನವಿಗೆ ಪ್ರಾಧಾನ್ಯತೆ ಸಿಕ್ಕಿಲ್ಲ. ನನ್ನ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು.

    ಒಟ್ಟಾರೆ ಇಡೀ ದೇಶದ ಗಮನ ಸೆಳೆದಿದ್ದ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಿದೆ. ನವೆಂಬರ್ 24ರಂದು ಮರು ಎಣಿಕೆಯ ಫಲಿತಾಂಶ ಹೊರಬೀಳಲಿದೆ.

    • ಟ್ಯಾಗ್ಗಳು
    • concludes
    • confidential
    • Kolar
    • KY Nanjegowda
    • Malur
    • Malur recount
    • Manjunath Gowda
    • report
    • results
    • submitted
    • supreme court
    • Vote Recount
    Share
    WhatsApp
    Telegram
    Facebook
    Twitter
    Email
      ಹಿಂದಿನ ಲೇಖನಫರಿದಾಬಾದ್‌ ಪ್ರಕರಣ;‌ ಶೋಪಿಯಾನ್‌ನಲ್ಲಿ ಮೌಲ್ವಿ ದಂಪತಿ ಅರೆಸ್ಟ್‌
      ಮುಂದಿನ ಲೇಖನಮುಂದುವರಿದ ಕಬ್ಬು ಬೆಳೆಗಾರರ ಪ್ರತಿಭಟನೆ – ರಾಷ್ಟ್ರೀಯ ಹೆದ್ದಾರಿ ಬಂದ್, ಕಾರ್ಖಾನೆಗೆ ಬೀಗ ಹಾಕುವ ಎಚ್ಚರಿಕೆ
      Saval

      ಸಂಬಂಧಿತ ಲೇಖನಗಳುಲೇಖಕರಿಂದ ಇನ್ನಷ್ಟು

      ರಾಜ್ಯ

      ರೈತನಿಗೆ ಪರಿಹಾರ ವಿಳಂಬ – ಡಿಸಿ ಕಾರು ಜಪ್ತಿಗೆ ಕೋರ್ಟ್ ಆದೇಶ

      ರಾಷ್ಟ್ರೀಯ

      ಭಾರತ ರಷ್ಯಾ ಆರ್ಥಿಕ ಸಹಕಾರ ಒಪ್ಪಂದಕ್ಕೆ ಸಹಿ

      ರಾಜ್ಯ

      ಕಬ್ಬು ಬೆಳೆಗಾರರ ಸಮಸ್ಯೆ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಸಂಸದ ಈರಣ್ಣ ಕಡಾಡಿ

      EDITOR PICKS

      ಹಾಸ್ಯ

      Saval - June 5, 2023

      ಕೇರಳದಲ್ಲಿ ರೆಮಲ್‌ ಚಂಡಮಾರುತದ ಆರ್ಭಟ ಜೋರು: ಭಾರೀ ಮಳೆ

      Saval - May 30, 2024

      ವಿಭಿನ್ನ ಕಾರ್ಯಗಳಿಗೆ ಗ್ರಾಹ್ಯ ಮತ್ತು ಅಗ್ರಾಹ್ಯ ನಕ್ಷತ್ರಗಳು

      Saval - August 15, 2024

      ಸೋಫಿಯಾ ಕುರಿತಾಗಿ ಅವಹೇಳನಕಾರಿ ಹೇಳಿಕೆ : ವಿಜಯ್ ಶಾ ವಿರುದ್ಧ ಬೆಳಗಾವಿಯಲ್ಲಿ ಎಫ್ಐಆರ್ ದಾಖಲು!

      Saval - May 15, 2025
      Saval TV on YouTube
      #YaduveerWadiyar  #GaneshVisarjan  #PublicReaction  #PeaceAppeal  #RoyalStatement  #BreakingNews  #MysuruNews  #CommunityHarmony  
#RespectTraditions  #ViralNews  #mandya #maddur #ganapatibappamorya #Congress #Karnatakanews #KarnatakaGovernment

ಸವಾಲ್ ಟಿವಿ : ಕರ್ನಾಟಕದ ಸುದ್ದಿ ಜಾಲ, ರಾಜಕೀಯ, ಅಪರಾಧ, ಕ್ರೀಡೆ, ಶಿಕ್ಷಣ, ಮನರಂಜನೆ, ಕಾನೂನು, ಜ್ಯೋತಿಷ್ಯ ಉದ್ಯೋಗ ಮಾಹಿತಿ, ಮತ್ತು ದೈನಂದಿನ ಆನ್‌ಲೈನ್ ವರದಿಗಳು, ಸಮರ್ಥ ಸುದ್ದಿಮೂಲ.

Whats app Page Link  - https://whatsapp.com/channel/
Telegram Page  Link - https://t.me/savaltv/
Facebook Page Link - https://www.facebook.com/savalpathrike/
https://www.facebook.com/SavalPradeep/
https://www.facebook.com/pdpsavaltv/
Twitter Page Link - https://x.com/savaltv
Instagram Page Link - https://www.instagram.com/savaltv/
Website Link - https://savaltv.com
      ಗಣೇಶ ವಿಸರ್ಜನೆ ವೇಳೆಯಲ್ಲಿ ನಡೆದ ಘಟನೆಗೆ ಯದುವೀರ್ ಪ್ರತಿಕ್ರಿಯೆ
      #BSVijayendra #CongressFailed #KarnatakaPolitics #JusticeForHindus #mandya #madduru #mysore #ramanagara #RAshok #jds #NitishKumar #karnataka #KannadaNews #ganapatibappamorya #ganapati #savaltv #CongressAgainstHindus #KarnatakaCongressFails
#AntiHinduCongress #PoliticalVendetta
#OppositionVoice #BJPvsCongress

ಸವಾಲ್ ಟಿವಿ : ಕರ್ನಾಟಕದ ಸುದ್ದಿ ಜಾಲ, ರಾಜಕೀಯ, ಅಪರಾಧ, ಕ್ರೀಡೆ, ಶಿಕ್ಷಣ, ಮನರಂಜನೆ, ಕಾನೂನು, ಜ್ಯೋತಿಷ್ಯ ಉದ್ಯೋಗ ಮಾಹಿತಿ, ಮತ್ತು ದೈನಂದಿನ ಆನ್‌ಲೈನ್ ವರದಿಗಳು, ಸಮರ್ಥ ಸುದ್ದಿಮೂಲ.

Whats app Page Link  - https://whatsapp.com/channel/
Telegram Page  Link - https://t.me/savaltv/
Facebook Page Link - https://www.facebook.com/savalpathrike/
https://www.facebook.com/SavalPradeep/
https://www.facebook.com/pdpsavaltv/
Twitter Page Link - https://x.com/savaltv
Instagram Page Link - https://www.instagram.com/savaltv/
Website Link - https://savaltv.com
      ಕಾಂಗ್ರೆಸ್ ಸರ್ಕಾರದ ಅಧೀನದಲ್ಲಿ ಹಿಂದುಗಳ ಮೇಲೆ ದಾಳಿ, ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ: ಬಿ.ಎಸ್.ವಿಜಯೇಂದ್ರ ಆರೋಪ
      #cmsiddaramaiah #dcmdkshivakumar #rainyweather #raineffect #Karnatakanews ##RainDamage #CMDKarnataka
#Siddaramaiah #CropLoss #FarmerRelie #KarnatakaRain
#FloodRelief #AgricultureSupport #RainAssessment
#FarmersFirst #savaltv #PressMeet

ಸವಾಲ್ ಟಿವಿ : ಕರ್ನಾಟಕದ ಸುದ್ದಿ ಜಾಲ, ರಾಜಕೀಯ, ಅಪರಾಧ, ಕ್ರೀಡೆ, ಶಿಕ್ಷಣ, ಮನರಂಜನೆ, ಕಾನೂನು, ಜ್ಯೋತಿಷ್ಯ ಉದ್ಯೋಗ ಮಾಹಿತಿ, ಮತ್ತು ದೈನಂದಿನ ಆನ್‌ಲೈನ್ ವರದಿಗಳು, ಸಮರ್ಥ ಸುದ್ದಿಮೂಲ.

Whats app Page Link  - https://whatsapp.com/channel/
Telegram Page  Link - https://t.me/savaltv/
Facebook Page Link - https://www.facebook.com/savalpathrike/
https://www.facebook.com/SavalPradeep/
https://www.facebook.com/pdpsavaltv/
Twitter Page Link - https://x.com/savaltv
Instagram Page Link - https://www.instagram.com/savaltv/
Website Link - https://savaltv.com
      ರಾಜ್ಯದಲ್ಲಿ ಮಳೆಹಾನಿ ಪರಿಶೀಲನೆಗೆ ಸಿಎಂ ಸಿದ್ದರಾಮಯ್ಯ ಸಮೀಕ್ಷೆ
      Load More... Subscribe
      • Privacy
      • Contact Us
      © Savalnews.com. All rights reserved.
      Designed & developed by Crisant Technologies