ಮನೆ ತಂತ್ರಜ್ಞಾನ ಇಂದು ಭಾರತದಲ್ಲಿ ಸ್ಯಾಮ್ ​ಸಂಗ್ ಗ್ಯಾಲಕ್ಸಿ M33 5G ಫೋನ್ ಬಿಡುಗಡೆ

ಇಂದು ಭಾರತದಲ್ಲಿ ಸ್ಯಾಮ್ ​ಸಂಗ್ ಗ್ಯಾಲಕ್ಸಿ M33 5G ಫೋನ್ ಬಿಡುಗಡೆ

0

ದಕ್ಷಿಣ ಕೊರಿಯಾ ಮೂಲದ ಸಂಸ್ಥೆ ಸ್ಯಾಮ್​ ಸಂಗ್ ತನ್ನ ಹೊಸ ಗ್ಯಾಲಕ್ಸಿ ಎಮ್​34 5ಜಿ ಸ್ಮಾರ್ಟ್​ ಫೋನ್​ನ ಬಿಡುಗಡೆ ಮಾಡಲು ಸಜ್ಜಾಗಿದೆ. ಬರೋಬ್ಬರಿ 6,000mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಸ್ಮಾರ್ಟ್ ​ಫೋನ್ ಇಂದು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.

Join Our Whatsapp Group

ಕಂಪನಿ ಹೇಳಿರುವ ಪ್ರಕಾರ ಈ ಫೋನನ್ನು ಎರಡು ದಿನಗಳ ಕಾಲ ಬ್ಯಾಟರಿ ಬ್ಯಾಕಪ್ ಬರಲಿದೆ. ಇದರಲ್ಲಿ 120Hz ನ ಸೂಪರ್ ಅಮೊಲೊಡ್ ಡಿಸ್ ಪ್ಲೇ ನೀಡಲಾಗಿದೆ. 50 ಮೆಗಾ ಪಿಕ್ಸೆಕ್ ಪ್ರೈಮರಿ ಸೆನ್ಸಾರ್ ​ನ ಕ್ಯಾಮೆರಾ ನೀಡಲಾಗಿದೆ.

8GB RAM ಮತ್ತು 128GB ಸ್ಟೋರೇಜ್ ಮತ್ತು 8GB RAM ಮತ್ತು 256GB ಸ್ಟೋರೇಜ್ ಆವೃತ್ತಿಯಲ್ಲಿ ಬರುವ ನಿರೀಕ್ಷೆಯಿದೆ. ಈ ಫೋನಿನ ಬೆಲೆ 30,000 ರೂ. ಇರಬಹುದು ಎನ್ನಲಾಗಿದೆ.

ಸ್ಯಾಮ್‌ ಸಂಗ್‌ ಎಕ್ಸಿನೋಸ್‌ 1280 SoC ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿರಲಿದ್ದು, ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಮೆಮೊರಿ ಕಾರ್ಡ್‌ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ನೀಡಲಾಗಿದೆ.

ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಬೆಂಬಲ ಪಡೆದುಕೊಂಡಿದೆ. ಮುಂಭಾಗ ಸೆಲ್ಫೀ ಮತ್ತು ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾ ಒಳಗೊಂಡಿರಬಹುದು.

ಹಿಂದಿನ ಲೇಖನಕೊಯಮತ್ತೂರು ಡಿಐಜಿ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣು
ಮುಂದಿನ ಲೇಖನಇಂದು ಮಹೇಂದ್ರ ಸಿಂಗ್ ಧೋನಿ ಅವರ 42ನೇ ಹುಟ್ಟುಹಬ್ಬ