ಮನೆ ಅಪರಾಧ ಮಹಿಳೆಯನ್ನು ಕೊಲೆಗೈದು, ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಬಂಧನ

ಮಹಿಳೆಯನ್ನು ಕೊಲೆಗೈದು, ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಬಂಧನ

0

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಕಾಲೇಜು ರಸ್ತೆಯಲ್ಲಿರುವ ಮನೆಯೊಂದರಲ್ಲಿ ವಾಸವಾಗಿದ್ದ ಮಹಿಳೆಗೆ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

Join Our Whatsapp Group

ಹೇಮಾವತಿ ಕೊಲೆಯಾದವರು. ಹೇಮಾವತಿ ನಾಲ್ಕು ತಿಂಗಳ ಹಿಂದೆ ಕೆಲಸಕ್ಕೆಂದು ಆಂಧ್ರದಿಂದ ಬೆಂಗಳೂರಿಗೆ ಬಂದಿದ್ದರು. ಇಲ್ಲಿ, ಹೊಸಕೋಟೆ ನಗರದಲ್ಲಿ ಬಾಡಿಗೆಗೆ ಮನೆ ಪಡೆದು ವಾಸವಾಗಿದ್ದರು. ಹೊಸಕೋಟೆಯ ಪೆಟ್ರೋಲ್ ಬಂಕ್​ ನಲ್ಲಿ ಹೇಮಾವತಿ ಕೆಲಸ ಮಾಡುತ್ತಿದ್ದರು.

3-4 ದಿನಗಳಿಗೊಮ್ಮೆ ವೇಣು ಎಂಬವರು ಹೇಮಾವತಿ ಮನೆಗೆ ಬಂದು ಹೋಗುತ್ತಿದ್ದರು. ಹೀಗೆ ಬಂದವರು 2-3 ದಿನ ಹೇಮಾವತಿ ಅವರ ಮನೆಯಲ್ಲೇ ಇರುತ್ತಿದ್ದರು. ಹೇಮಾವತಿ ಮತ್ತು ವೇಣು ದಂಪತಿ ಎಂದು ಅಂತ ಸ್ಥಳಿಯರು ತಿಳಿದಿದ್ದರು. ಎಂದಿನಂತೆ ಸೋಮವಾರ (ಜೂ.24)ರ ರಾತ್ರಿ ಹೇಮಾವತಿ ಮನೆಗೆ ಬಂದಿದ್ದ ವೇಣು ಮಂಗಳವಾರ (ಜೂ.25)ರ ನಸುಕಿನ ಜಾವ 3 ಗಂಟೆವರೆಗೆ ಇದ್ದು ಬಳಿಕ ಚಿಂತಾಮಣಿಯಲ್ಲಿರುವ ಪತ್ನಿಯ ಮನೆಗೆ ಹೋಗಿದ್ದಾನೆ.

ಪತ್ನಿಯ ಮನೆಗೆ ಹೋಗಿ ವಿಷ ಸೇವಿಸಿ, ತನ್ನ ಮಾವನಿಗೆ ಕರೆ ಮಾಡಿದ್ದಾನೆ. ಹೊಸಕೋಟೆಯಲ್ಲಿ ಓರ್ವ ಮಹಿಳೆ ಚಾಕುವಿನಿಂದ ಇರಿದುಕೊಂಡಿದ್ದಾಳೆ, ನಾನು ವಿಷ ಕುಡಿದಿದ್ದೇನೆ ಎಂದು ಹೇಳಿದ್ದಾನೆ. ಈ ವಿಚಾರ ತಿಳಿದ ವೇಣು ಮಾವ ಹೊಸಕೋಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ವೇಣು ಅನ್ನು ಚಿಕ್ಕಬಳ್ಳಾಪುರ ಆಸ್ವತ್ರೆಗೆ ದಾಖಲಿಸಲಾಗಿದೆ.

ವೇಣು ಮಾವನ ಮಾತು ಕೇಳಿ ಹೊಸಕೋಟೆ ಪೊಲೀಸರು ಕೊಲೆಯಾದ ಮಹಿಳೆಯ ಮನೆಗಾಗಿ ಶೋಧ ಕಾರ್ಯಕ್ಕೆ ಇಳಿದಿದ್ದರು. ಹಲವು ತಂಡಗಳಾಗಿ ಹುಡುಕಾಟ ನಡೆಸಿದರು. ಹೀಗೆ, ಸತತ ನಾಲ್ಕು ಗಂಟೆಗಳ ಕಾಲ ಹುಡುಕತ್ತಾ ಪೊಲೀಸರು ಹೇಮಾವತಿ ಮನೆಗೆ ಬಂದಿದ್ದು, ಹೇಮಾವತಿ ಮನೆ ಬಾಗಿಲನ್ನು ತೆಗೆದು ನೋಡಿದಾಗ, ಗುಪ್ತಾಂಗ ಸೇರಿದಂತೆ ಮೂರು ಕಡೆ ಚಾಕುವನಿಂದ ಇರಿದು ಕೊಲೆ ಮಾಡಿರುವ ದೃಶ್ಯ ಕಂಡು ಬಂದಿದೆ. ಅಲ್ಲದೆ ಹೇಮಾವತಿ ಮೃತದೇಹದ ಬಳಿ ಪರಿಶೀಲನೆ ನಡೆಸಿ ಸಾಕ್ಷ್ಯಗಳನ್ನ ಕಲೆ ಹಾಕಿದ ಪೊಲೀಸರು ನಂತರ ಮಹಿಳೆಯ ಮೃತದೇಹವನ್ನ ಹೊಸಕೋಟೆಯ ಶವಾಗಾರಕ್ಕೆ ರವಾನಿಸಿದ್ದಾರೆ.

ವೇಣು ಹೇಮಾವತಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಜೂ.24ರ ರಾತ್ರಿ ಹೇಮಾವತಿ ಮನೆಗೆ ಬಂದ ವೇಣು ಆಕೆಯನ್ನು ಕೊಲೆ ಮಾಡಿ, ಪರಾರಿಯಾಗಿದ್ದಾನೆ ಎಂಬುವುದು ತಿಳಿದಿದೆ. ನಂತರ ಪೊಲೀಸರು ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ವೇಣು ಅನ್ನು ಚಿಕ್ಕಬಳ್ಳಾಪುರ ಆಸ್ವತ್ರೆ ಆಸ್ವತ್ರೆಯಲ್ಲಿ ಬಂಧಿಸಿದ್ದಾರೆ.

ಹಿಂದಿನ ಲೇಖನಉಳ್ಳಾಲ ಕುತ್ತಾರು ಮದನಿ ನಗರದಲ್ಲಿ ಮನೆ ಗೋಡೆ ಕುಸಿದು ಬಿದ್ದು ನಾಲ್ವರು ಸಾವು
ಮುಂದಿನ ಲೇಖನಪಿಜಿಸಿಇಟಿ ಮುಂದೂಡಿಕೆ: ಅರ್ಜಿ ಸಲ್ಲಿಸಲು ಜುಲೈ 7ರವರೆಗೆ ಅವಕಾಶ