ಮನೆ ಅಪರಾಧ ದಾವಣಗೆರೆ: ದಾಖಲೆಯಿಲ್ಲದ 12 ಕೋಟಿ ಮೌಲ್ಯದ ಚಿನ್ನ, ವಜ್ರಗಳು ವಶಕ್ಕೆ

ದಾವಣಗೆರೆ: ದಾಖಲೆಯಿಲ್ಲದ 12 ಕೋಟಿ ಮೌಲ್ಯದ ಚಿನ್ನ, ವಜ್ರಗಳು ವಶಕ್ಕೆ

0

ದಾವಣಗೆರೆ: ನಗರದ ಹೊರವಲಯದಲ್ಲಿರುವ ಲೋಕಿಕೆರೆ ಚೆಕ್ ಪೋಸ್ಟ್ ನಲ್ಲಿ 12 ಕೋಟಿ ಮೌಲ್ಯದ ಚಿನ್ನ ಹಾಗೂ ವಜ್ರಗಳನ್ನು ವಶಪಡಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವೆಂಕಟೇಶ್ ಎಂ.ವಿ.ತಿಳಿಸಿದ್ದಾರೆ.

Join Our Whatsapp Group

ಸೂಕ್ತ ದಾಖಲೆ ಇಲ್ಲದೆ ಸಾಗಿಸುತಿದ್ದ 12.50 ಕೋಟಿ ಮೌಲ್ಯದ ಚಿನ್ನ, ವಜ್ರ ವಶ ಪಡೆಯಲಾಗಿದೆ. ಚುನಾವಣಾ ಅಧಿಕಾರಿ ಲೋಕೇಶ್ ನೇತೃತ್ವದಲ್ಲಿ ಸ್ವತ್ತು ವಶಕ್ಕೆ ಪಡೆಯಲಾಗಿದೆ. ವಿವಿಧ ಆಭರಣ ಅಂಗಡಿಗಳಿಗೆ ಸರಿಯಾದ ದಾಖಲೆ ಇಲ್ಲದೆ ಸಾಗಿಸುತಿದ್ದಾಗ ವಶಕ್ಕೆ ತೆಗೆದುಕೊಳ್ಳಲಾಗಿದೆ. ಕಳೆದ ಏಪ್ರಿಲ್ ತಿಂಗಳ 6, 9  ದಿನಾಂಕದ ಹಳೆಯ ಬಿಲ್ ಗಳು ಲಭ್ಯವಾಗಿದೆ. ಆಭರಣ ಸಾಗಾಟಕ್ಕೆ ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ವಶಪಡೆಯಲಾಗಿದೆ.

ಈ ವೇಳೆ ಚುನಾವಣಾ ಅಧಿಕಾರಿ ರೇಣುಕಾ, ಕಮರ್ಷಿಯಲ್ ಟ್ಯಾಕ್ಸ್ ನ ಇಲಾಖೆ ಉಪ ಆಯುಕ್ತ ಮಂಜುನಾಥ್ ಸೇರಿದಂತೆ ಇತರರು ಇದ್ದರು.

ಹಿಂದಿನ ಲೇಖನಲೋಕಸಭೆ ಚುನಾವಣೆ ಮೇಲೆ ಪ್ರಧಾನಿ ಮೋದಿ ದೊಡ್ಡ ಪ್ರಭಾವ ಬೀರಲಾರರು: ಜಿ. ಪರಮೇಶ್ವರ್
ಮುಂದಿನ ಲೇಖನಆಸ್ತಿ ಪಾಲು ನಿರಾಕರಣೆಗೆ ಮಕ್ಕಳು ಕಾನೂನು ದುರ್ಬಳಕೆ ಮಾಡದಂತೆ ನ್ಯಾಯಾಧಿಕರಣ ಖಾತರಿಪಡಿಸಬೇಕು: ಬಾಂಬೆ ಹೈಕೋರ್ಟ್‌